ಕ್ರೈಸ್ತ ಯುವತಿಗೆ ಡ್ರಗ್ಸ್ ಕೊಟ್ಟು ಗೆಳೆಯರೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಮುಸ್ಲಿಂ ಯುವಕ : ವಿಶ್ವ ಹಿಂದೂ ಪರಿಷತ್‌ನ ಮೊರೆ ಹೋದ ಯುವತಿಯ ತಾಯಿ…!!

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಮಂಗಳೂರು

ಮುಸ್ಲಿಂ ವ್ಯಕ್ತಿಯೊಬ್ಬ ಕ್ರೈಸ್ತ ಯುವತಿಗೆ ಡ್ರಗ್ಸ್ ಚಟ ಹಿಡಿಸಿ, ಗೆಳೆಯರೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕ್ರೈಸ್ತ ಸಮುದಾಯದ ಸಂತ್ರಸ್ತ ಯುವತಿಯ ರಕ್ಷಣೆಗಾಗಿ ಆಕೆಯ ತಾಯಿ ವಿಶ್ವ ಹಿಂದೂ ಪರಿಷತ್, ಭಜರಂಗದಳದ ಮೊರೆ ಹೋಗಿದ್ದಾರೆ.ಮಂಗಳೂರು ನಗರದ ಕೃಷ್ಣಾಪುರ ನಿವಾಸಿ ಡ್ರಗ್ ಪೆಡ್ಲರ್ ಸಿದ್ದಿಕ್ ಎಂಬಾತ ಕ್ರೈಸ್ತ ಯುವತಿಯನ್ನು ಲವ್ ಜಿಹಾದ್ ನಡೆಸಿದ್ದ. ಈತನ ಮಾತನ್ನು ನಂಬಿದ ಯುವತಿ ಡ್ರಗ್ಸ್‌ಗೆ ಬಲಿಯಾಗಿದ್ದಾಳೆ. ಹಲವಾರು ದಿನಗಳ ಕಾಲ ಮನೆಯಿಂದ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದ ಸಿದ್ದಿಕ್, ಯುವತಿಯನ್ನು ಅಮಲಿನಲ್ಲಿ ತೇಲಿಸಿ ಆತ ಹಾಗೂ ಆತನ ನಾಲ್ವರು ಗೆಳೆಯರು ಸೇರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಯುವತಿಯ ತಾಯಿ ಆರೋಪಿಸಿದ್ದಾರೆ. 

CHETAN KENDULI

ಈ ಬಗ್ಗೆ ಉರ್ವ ಹಾಗೂ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ತನಕ ನ್ಯಾಯ ಸಿಗದಿದ್ದ ಕಾರಣ ಯುವತಿಯ ತಾಯಿ ವಿ.ಹಿಂ.ಪ, ಬಜರಂಗದಳದ ಮೊರೆ ಹೋಗಿದ್ದು ಮಗಳನ್ನು ರಕ್ಷಿಸಿಕೊಡಲು ಅಂಗಲಾಚಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯನ್ನು ವಿ.ಹಿಂ.ಪ, ಬಜರಂಗದಳ ತೀವ್ರವಾಗಿ ಖಂಡಿಸಿದೆ. ಡ್ರಗ್ ಮಾಫಿಯಾದಲ್ಲಿ ಈತನ ಹೆಸರು ಹಿಂದಿನಿಂದಲೂ ಕೇಳಿಬರುತ್ತಿದೆ ಎನ್ನಲಾಗಿದೆ. ಈಗಾಗಲೇ ಈತ ನಾಲ್ಕು ಮದುವೆಯಾಗಿರುವ ಮಾಹಿತಿ ಇದೆ ಎನ್ನಲಾಗಿದೆ.

ಯುವತಿ ಅಲೋಶಿಯಸ್ ಕಾಲೇಜಿನಲ್ಲಿ ಕಾಲೇಜು ಮುಗಿಸಿದ್ದು, ಡ್ರಗ್ಸ್ ಚಟ ಹತ್ತಿಸಿಕೊಂಡಿದ್ದಳು. ಆನಂತರ ಡ್ರಗ್ಸ್ ಇಲ್ಲದೆ ಬದುಕುವುದೇ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಡ್ರಗ್ಸ್ ಚಟಕ್ಕೆ ಬಿದ್ದಿದ್ದಳು. ನಡುರಾತ್ರಿಯಲ್ಲಿ ಬೈಕಿನಲ್ಲಿ ಈ ಯುವಕರು ಯುವತಿಯನ್ನು ಕರೆದೊಯ್ಯುತ್ತಿದ್ದು ಆ ಬಳಿಕ ಹಲವು ದಿನಗಳ ಕಾಲ ಇಟ್ಟುಕೊಳ್ಳುತ್ತಿದ್ದರು ಎಂದು ಯುವತಿಯ ತಾಯಿ ದೂರಿದ್ದಾರೆ.  ಮಗಳು ಎಲ್ಲಿದ್ದಾಳೆ ಎನ್ನುವುದು ತಿಳಿಯದೆ ಹೆತ್ತವರು ಆತಂಕಕ್ಕೆ ಒಳಗಾಗುತ್ತಿದ್ದರು. ಮಗಳ ಈ ರೀತಿಯ ನಡತೆಯಿಂದ ತೀವ್ರ ಬೇಸತ್ತಿದ್ದ ತಂದೆ ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗಿ ಸಾವು ಕಂಡಿದ್ದರು ಎನ್ನಲಾಗಿದೆ.

Be the first to comment

Leave a Reply

Your email address will not be published.


*