ಜಿಲ್ಲಾ ಸುದ್ದಿಗಳು
ಭಟ್ಕಳ
ಫೇಸ್ಬುಕ್ನಲ್ಲಿ ಸುನೀಲ ಅಣ್ಣನ ಅಭಿಮಾನಿ ಎನ್ನುವ ನಕಲಿ ಖಾತೆಯಲ್ಲಿ ಶಾಸಕ ಸುನೀಲ ನಾಯ್ಕ ಕುರಿತು ಚಾರಿತ್ರ್ಯ ಹರಣ ಮಾಡುತ್ತಿದ್ದು, ಆ ಖಾತೆ ಯನ್ನು ತಡೆಹಿಡಿದು ಅದರಲ್ಲಿ ಬರೆಯುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕ ಆಪ್ತ ಸಹಾಯಕ ರಾಘವೇಂದ್ರ ಶಿರಾಲಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ನ ಸುನೀಲ ಅಣ್ಣನ ಅಭಿಮಾನಿ ಗ್ರೂಪಿನಲ್ಲಿ ಶಾಸಕ ಸುನೀಲ ನಾಯ್ಕ ಅವರ ಚಾರಿತ್ರ್ಯ ಹರಣ ಮಾಡುವುದು ಮುಂದುವರಿದಿದೆ. ಕ್ಷೇತ್ರದಲ್ಲಿ ಬೇರೆ ಬೇರೆ ಸಮುದಾಯದ ಜನರು ಶಾ೦ತಿ ಸೌಹಾರ್ದದಿ೦ದ ಸಹಬಾಳ್ವೆ ಮಾಡುತ್ತಿದ್ದು, ಎಲ್ಲ ಸಮುದಾಯದವರು ಶ್ರಮಿಸಿ ಶಾಸಕರ ಗೆಲುವಿಗೆ ಕಾರಣವಾದ ಅಂಶವನ್ನು ಸಹಿಸದ ಕೆಲ ಹಿತಾಸಕ್ತಿಗಳು ಫೇಸ್ಬುಕ್ ನಕಲಿ ಖಾತೆ ಸೃಷ್ಟಿಸಿ ಸಮುದಾಯಗಳ ಮಧ್ಯದ ಸಾಮರಸ್ಯವನ್ನು ಹಾಳುಮಾಡುತ್ತಿವೆ.
ಇದರಿಂದ ಸಾರ್ವಜನಿಕ ಕಾರ್ಯಕ್ರಮಗಳಿಗೆ ತೀವ್ರ ತೊಡಕಾಗುತ್ತಿರುವುದರಿಂದ ನಕಲಿ ಫೇಸ್ಬುಕ್ ಖಾತೆಯನ್ನು ತಡೆಹಿಡಿಯುವುದರ ಜೊತೆಗೆ ಅವಹೇಳ ನಕಾರಿಯಾಗಿ ಬರೆಯುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪ್ರಕರಣ ದಾಖಲಿಸಲಾಗಿದೆ. ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Be the first to comment