ನವದುರ್ಗಿ ದೇವಿಯ ತೃತೀಯ ವರ್ಷದ ವಾರ್ಷಿಕೋತ್ಸವ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ತಾಲೂಕಿನ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ ಸೋಲೂರಿನ ಪಾಂಡುರಂಗಪುರ ಗ್ರಾಮದಲ್ಲಿ ನವದುರ್ಗಿ ದೇವಾಲಯದಲ್ಲಿ ದೇವಿಗೆ ತೃತೀಯ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದೇವಾಲಯ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. 

CHETAN KENDULI

ಬೆಳಿಗ್ಗೆಯಿಂದಲೇ ನವ ದುರ್ಗಿ ದೇವಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಶ್ರೀ ಗಣಪತಿ ಪೂಜೆ, ಪುಣ್ಯಹ, ಅಗ್ನಿಕುಂಡದ ಕಂಕಣ, ಮೃತ್ಯುಂಜಯ ಹೋಮ, ನವಗ್ರಹ ಹೋಮ, ದುರ್ಗಾ ಹೋಮ, ಮಹಾಪೂರ್ಣಾಹುತಿ, ಪ್ರಧಾನ ಕುಂಭ, ಗ್ರಾಮ ಪ್ರದಕ್ಷಿಣೆ, ಕುಂಭಾಭಿಶೇಕ, ಅಗ್ನಿಕುಂಡ ಪೂಜೆ, ವಾದ್ಯಗೋಷ್ಠಿ, ನವಕುಂಡದಲ್ಲಿ ದುರ್ಗಾಹೋ, ಮಹಾ ಪೂರ್ಣಾಹುತಿ, ದೇವಾಲಯದಿಂದ ಉತ್ಸವ, ಅರತಿಸಮೇತರಾಗಿ ಅಗ್ನಿಕುಂಡ ಪ್ರವೇಶ, ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ಜರುಗಿದವು. 

ಪೂಜಾ ಕೈಂಕರ್ಯದಲ್ಲಿ ಮಹಿಳೆಯರು ಮತ್ತು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ದೇವಾಲಯವನ್ನು ಅಲಂಕರಿಸಿ, ದೇವಿಯನ್ನು ವಿವಿಧ ರೀತಿಯಲ್ಲಿ ಅಲಂಕಾರ ಮಾಡಿರುವುದು ಗಮನಸೆಳೆಯಿತು. ಕಮಲ ಪ್ರಿಯ ನವದುರ್ಗಿ ಕ್ಷೇತ್ರದ ವ್ಯವಸ್ಥಾಪಕರು, ಪ್ರಧಾನ ಅರ್ಚಕರು, ಭಕ್ತಾಧಿಗಳು ಮತ್ತು ಗ್ರಾಮಸ್ಥರ ಸಹಕಾರದಲ್ಲಿ ವಿಜೃಭಣೆಯಿಂದ ಸಾಂಪ್ರದಾಯಿಕವಾಗಿ ಶಾಸ್ತ್ರೋಸ್ತ್ರವಾಗಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಜೆಯಾಗುತ್ತಿದ್ದಂತೆ ಸಹಸ್ರ ಭಕ್ತಾಧಿಗಳು ದೇವಾಲಯದ ಕಡೆ ಬರುತ್ತಿದ್ದರು. ಬರುವ ಭಕ್ತಾಧಿಗಳಿಗೆ ಅನ್ನಸಂತರ್ಪಣೆ, ಪ್ರಸಾದ ವಿನಿಯೋಗ, ದೇವಿ ದರ್ಶನ ಏರ್ಪಡಿಸಲಾಗಿತ್ತು. ಇನ್ನೂ ಈ ವೇಳೆಯಲ್ಲಿ ದೇವಾಲಯ ವ್ಯವಸ್ಥಾಪ ಎಸ್.ಎಚ್.ರಾಮಮೂರ್ತಿ, ಪ್ರಧಾನ ಅರ್ಚಕ ಎಚ್.ಆರ್.ಪ್ರಶಾಂತ್, ಭಕ್ತಾಧಿಗಳು, ಗ್ರಾಮಸ್ಥರು ಇದ್ದರು.

Be the first to comment

Leave a Reply

Your email address will not be published.


*