ಜಿಲ್ಲಾ ಸುದ್ದಿಗಳು
ಯಲ್ಲಾಪುರ
ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಸೋಮವಾರ ಸಂಜೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಕಾಳಮ್ಮ ನಗರದಲ್ಲಿ ನಡೆದಿದೆ.ಮೃತಳು ಬೆಳಗಾವಿಯ ತಿಲಕವಾಡಿ ಹಾಲಿ ಪಟ್ಟಣದ ದರ್ಗಾಗಲ್ಲಿ ನಿವಾಸಿಯ ರಶ್ಮೀ ಸುಧೀರ ರಾಯ್ಕರ (48) ಎಂಬ ಗೃಹಿಣಿಯಾಗಿದ್ದಾಳೆ.
ಕಳೆದ 10 ವರ್ಷದಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ,ಎಷ್ಟೇ ಔಷದೋಪಚಾರ ಮಾಡಿದರೂ ಗುಣಮುಖ ಆಗಿರಲಿಲ್ಲ . ಹಾಗೂ ಕೆಲ ದಿನಗಳ ಹಿಂದೆ ಕೊರೊನಾ ಕಾಯಿಲೆಯು ಬಂದಿದ್ದರಿಂದ ಮನನೊಂದು ಪಟ್ಟಣದ ಕಾಳಮ್ಮ ನಗರದ ತಾಲೂಕಾ ಕ್ರೀಡಾಂಗಣ ಬಳಿಯಿರುವ ಗಣೇಶ ಕಟ್ಟೆಯ ಪಾಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಮೃತಳ ದೆಹವನ್ನು ಬಾವಿಯಿಂದ ಹೊರತೆದರು. ಮೃತಳ ಪುತ್ರ ನಿಖಿಲ ಸುಧೀರ ರಾಯ್ಕರ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Be the first to comment