ಜಿಲ್ಲಾ ಸುದ್ದಿಗಳು
ಭಟ್ಕಳ
ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಮನ್ವಯ ಸಮಿತಿ ಇಂದು ದಿನಾಂಕ 12. 07. 2021 ರಂದು 8 ರಾಷ್ಟ್ರಕೃತ ಸಂಘಟನೆಯ ಕರೆಯ ಮೇರೆಗೆ ರಾಜ್ಯಾದ್ಯಂತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಲಾಯಿತು. ಅದರಂತೆ ಭಟ್ಕಳ ತಾಲೂಕಿನಲ್ಲಿ( A.I.T.U.C) ಮತ್ತು (C.I.T.U) ಕಾರ್ಮಿಕ ಸಂಘಟನೆಯಿಂದ ಮನವಿ ಸಲ್ಲಿಸಲಾಯಿತು,
ಮನವಿಯಲ್ಲಿ ಕೋವಿಡ್ 19 ಒಂದನೇ ಅಲಯದಲ್ಲಿ ಈ ಹಿಂದೆ ಕಟ್ಟಡ ಕಾರ್ಮಿಕರಿಗೆ 5000 ಪರಿಹಾರ ಘೋಷಣೆ ಮಾಡಲಾಗಿತ್ತು, ಈ ಪರಿಹಾರವು ಶೇಕಡ %70 ರಷ್ಟು ಕಾರ್ಮಿಕರಿಗೆ ತಲುಪಲಿಲ್ಲ,ಕೇವಲ 2016ರಿಂದ 2020 ರವರೆಗೆ ನೊಂದಣಿಯಾದ ಕಾರ್ಮಿಕರಿಗೆ ಮಾತ್ರ ಪರಿಹಾರ ಬಂದಿರುತ್ತದೆ. ಅದೇ ರೀತಿ ಈ ಬಾರಿ ಎರಡನೇ ಅಲಯದಲ್ಲಿ ಕೋವಿಡ ಪರಿಹಾರ ₹ 3000 ಘೋಷಣೆ ಮಾಡಿರುತ್ತಾರೆ, ಕಾರ್ಮಿಕರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇದ್ದರೆ ಮಾತ್ರ ಪರಿಹಾರ ಸಿಗುತ್ತದೆ. ಆದರೆ ನೂರಕ್ಕೆ ಶೇಕಡಾ %70 ರಷ್ಟು ಜನರ ಬ್ಯಾಂಕ್ ಖಾತೆಯಲ್ಲಿ ಆಧಾರ್ ಲಿಂಕ್ ಇರುವುದಿಲ್ಲ, ಆದ್ದರಿಂದ ಆಧಾರ್ ಲಿಂಕ್ ಮಾಡಲು ಮತ್ತು ಪರಿಹಾರ ಪಡೆಯಲು ಕನಿಷ್ಠ ಮೂರು ತಿಂಗಳ ಕಾಲಾವಕಾಶ ನೀಡಬೇಕು. ಅದರಂತೆ ಕಾರ್ಮಿಕ ಸಂಘಟನೆಗಳು ಕಟ್ಟಡ ಕಾರ್ಮಿಕರಿಗೆ ಕೋವಿಡ್ ಪರಿಹಾರ ₹10,000 ನೀಡಬೇಕೆಂದು ಹಿಂದಿನಿಂದಲೂ ಒತ್ತಾಯಿಸುತ್ತಿದ್ದೇವೆ. ಆದರೆ ಸರಕಾರ ಇದಕ್ಕೆ ಸ್ಪಂದಿಸಲಿಲ್ಲ. ಈ ಕೂಡಲೇ ₹ 3000 ಪರಿಹಾರದ ಬದಲು ಹತ್ತು ಸಾವಿರ ರೂಪಾಯಿ ಪರಿಹಾರ ಕಟ್ಟಡ ಕಾರ್ಮಿಕರಿಗೆ ನೀಡಬೇಕು. ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರಿಗೆ ರೇಷನ್ ಕಿಟ್ಟು ( ಫುಡ್ ಕಿಟ್) ಪ್ರತಿ ಕಾರ್ಮಿಕ ಕುಟುಂಬಗಳಿಗೆ ನೀಡಬೇಕು.ಕಾರ್ಮಿಕರ ಫುಡ್ ಕಿಟ್ ಆಯಾ ತಾಲೂಕಿನ ಕಾರ್ಮಿಕ ನಿರೀಕ್ಷಕರ ಆವರಣದಲ್ಲಿಯೇ ಕಾರ್ಮಿಕ ಸಂಘಟನೆಗಳ ಮತ್ತು ಕಾರ್ಮಿಕ ಇಲಾಖೆಗಳ ಮತ್ತು ಜನಪ್ರತಿನಿಧಿಯ ಸಮಕ್ಷಮ ಪ್ರತಿ ಕಾರ್ಮಿಕ ಕುಟುಂಬಗಳಿಗೆ ನೀಡಬೇಕು,
ಕೋವಿಡ್ ನಿಂದ ಮರಣಹೊಂದಿದ ಕಾರ್ಮಿಕ ಕುಟುಂಬಗಳಿಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಕಾರ್ಮಿಕರ ಸಹಜ ಸಾವಿಗೆ ₹ 54000 ಬದಲಾಗಿ ಎರಡು ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಮಹಿಳಾ ಫಲಾನುಭವಿಗಳಿಗೆ ನೀಡಲಾಗುತ್ತಿರುವ ಹೆರಿಗೆ ಧನಸಹಾಯವನ್ನು ಪುರುಷ ಫಲಾನುಭವಿಯ ಪತ್ನಿಗೂ ನೀಡಬೇಕು.ಪ್ರತಿ ಕಾರ್ಮಿಕ ಕುಟುಂಬಗಳಿಗೆ 25 ದಿನಕ್ಕೆ ಒಮ್ಮೆಯಂತೆ L.P.G ಸಿಲಿಂಡರ್ ಗ್ಯಾಸ್ ಉಚಿತವಾಗಿ ಕಾರ್ಮಿಕ ಮಂಡಳಿಯಿಂದ ನೀಡಬೇಕು. ಹಲವಾರು ವರ್ಷದಿಂದ ಸೌಲಭ್ಯದ ಅರ್ಜಿಗಳು ಮಂಜೂರಾಗದೆ ಬಾಕಿ ಉಳಿದಿರುತ್ತವೆ ಕೂಡಲೇ ಅರ್ಜಿಗಳಿಗೆ ಧನಸಹಾಯ ಮಂಜುರಾಗಬೇಕು ಎಂದು ಜಿ.ಎನ್. ರೇವಣಕರ. ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ(A.I,T.U.C)ಪುಂಡಲಿಕ್ ನಾಯ್ಕ (C.I.T.U)ತಾಲೂಕ ಅಧ್ಯಕ್ಷರು ಭಟ್ಕಳಸುನಿಲ್ ರಾಯ್ಕರ್. ಉತ್ತರ ಕನ್ನಡ ಜಿಲ್ಲಾ ಪ್ರಧಾನ ಸಂಚಾಲಕರು. (A.I.T.U.C) ರಾಷ್ಟ್ರೀಯ ಸಂಘಟನೆಯ ಸಮನ್ವಯ ಸಮಿತಿ ಮೂಲಕ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದರು.
Be the first to comment