ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಮುಖಾಂತರ ಹಲವು ವಿಷಯಗಳನ್ನಿಟ್ಟು ಮುಖ್ಯಮಂತ್ರಿಯವರಿಗೆ ಮನವಿ ಹಾಗೂ ಸಮಾಜವಾದಿ ಪಕ್ಷದಿಂದ ಪತ್ರಿಕಾಗೋಷ್ಠಿ..

ವರದಿ-ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಕಾರವಾರ

ಮಾನ್ಯ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಮುಖಾಂತರ ಹಲವಾರು ಸಮಸ್ಯೆಗಳನ್ನು ಮುಂದಿಟ್ಟುಸಮಾಜವಾದಿ ಪಕ್ಷದಿಂದ ಮುಖ್ಯ ಮಂತ್ರಿಯವರಿಯವರಿಗೆ ಮನವಿ ಸಲ್ಲಿಸಲಾಯಿತು. ಇದರಲ್ಲಿ ಮುಖ್ಯವಾಗಿ ಮಂಗೇಶ್ ಕೈಸೆರೆ ಯವರ ಅನುಮಾನಾಸ್ಪದ ಅಪಘಾತ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಹಾಗೂ ಬಿಪಿ ಡ್ಯಾಂ ಹಿನ್ನೀರಿನಿಂದ ನಿರಾಶ್ರಿತರಿಗೆ ಶಾಶ್ವತ ಪರಿಹಾರ ನೀಡುವ ಕುರಿತು ಮನವಿ ಸಲ್ಲಿಸಲಾಯಿತು.

CHETAN KENDULI

1) ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಹಿತಿ ಹಕ್ಕು ಹೋರಾಟಗಾರರು ಮತ್ತು ಹಿಂದೂ ಸಂಘಟನೆಯ ಮುಖಂಡರಾದ ಮಂಗೇಶ್ ಕೈಸೆರೆ ಯವರು ಲಾರಿ ಅಪಘಾತದಿಂದ ಮೃತಪಟ್ಟಿದ್ದು ಇರುತ್ತದೆ. ಆದರೆ ಇದು ಅನುಮಾನಕ್ಕೆ ಕಾರಣವಾಗಿದ್ದು ಯಲ್ಲಾಪುರದ ಸಾಮಾಜಿಕ ಮುಖಂಡರು ಇದನ್ನು ಸಿಬಿಐ ತನಿಖೆಗೆ ತಹಶೀಲ್ದಾರ್ರ ಮೂಲಕ ಮಾನ್ಯ ಮುಖ್ಯಮಂತ್ರಿಗಳ ಕರ್ನಾಟಕ ಇವರಲ್ಲಿ ಮನವಿ ಮಾಡಿದ್ದರು ಈ ಮನವಿ ನೀಡಿದ ಸಾಮಾಜಿಕ ಮುಖಂಡರ ಮೇಲೆ ಎರಡೇ ದಿನಕ್ಕೆ ಸುಳ್ಳು ದೂರು ದಾಖಲಿಸಿ 3 ತಿಂಗಳು ಜೈಲಿನಲ್ಲಿ ಇಟ್ಟ ಘಟನೆ ನಡೆದಿದೆ. ಅಲ್ಲದೆ ಈ ಅಪಘಾತ ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯಕರ್ತರ ಮೇಲೆ ನಿರಂತರ ಒತ್ತಡಕ್ಕೆ ಒಳಪಡಿಸಲಾಗುತ್ತಿದ್ದು, ಪದೇ ಪದೇ ಸುಳ್ಳು ಪ್ರಕರಣ ಪೋಲೀಸರು ದಾಖಲಿಸುತ್ತಿದ್ದಾರೆ. ಇವನ್ನೆಲ್ಲ ಗಮನಿಸಿದಾಗ ಮಂಗೇಶ್ ಕೈಸೆರೆ ಯವರ ಸಾವು ಪೂರ್ವ ನಿಯೋಜಿತ ಕೃತ್ಯ ಎನ್ನುವುದು ತಿಳಿಯುತ್ತದೆ. ಅದಲ್ಲದೆ ಪೋಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳ ಕೈವಾಡ ಇರುವ ಬಗ್ಗೆಯೂ ಅನುಮಾನ ವ್ಯಕ್ತವಾಗುತ್ತಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಮಂಗೇಶ್ ಕೈಸೆರೆ ಯವರ ಅಪಘಾತ ಪ್ರಕರಣವನ್ನು ಹಾಗೂ ಸಾಮಾಜಿಕ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಾಗುತ್ತಿದ್ದರ ಬಗ್ಗೆ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು, ಹಾಗೂ ಸಾಮಾಜಿಕ ಕಾರ್ಯಕರ್ತರ ಸೂಕ್ತ ರಕ್ಷಣೆಯನ್ನು ಸರಕಾರ ನೀಡಬೇಕೆಂದು ಆಗ್ರಹಿಸಿದರು.

2) ಕೆಪಿಸಿಯ ಬಿ.ಪಿ ಡ್ಯಾಂ ಹಿನ್ನೀರಿನಿಂದ ದಾಂಡೇಲಿ ತಾಲೂಕಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಗದಾಳ, ಬೊಮ್ಮನಹಳ್ಳಿ, ಬಿ.ಪಿ ಡ್ಯಾಂ ಪಾಯಿಂಟ್, ಬಡಾಶಿರಗುರ, ಡೋನಸಿರಗುರ, ಜನರು ನಿರಾಶ್ರಿತರಾಗಿದ್ದಾರೆ. ಈ ಗ್ರಾಮದ ಜನರು ಬುಡಕಟ್ಟು ಹಾಗೂ ಹಿಂದುಳಿದ ದಲಿತ ವರ್ಗದವರೇ ಹೆಚ್ಚಾಗಿದ್ದು ಇವರೆಲ್ಲ ಬಡವರಾಗಿದ್ದು ಕೃಷಿ ಕಾರ್ಮಿಕರಾಗಿದ್ದಾರೆ. ಕೆಪಿಸಿ ಅಧಿಕಾರಿಗಳ ಬಳಿ ಅನೇಕ ಬಾರಿ ಪ್ರತಿ ಕುಟುಂಬಕ್ಕೆ ಒಬ್ಬರಿಗೆ ಉದ್ಯೋಗ ಕಲ್ಪಿಸಿಕೊಡಬೇಕೆಂದು ಆಗ್ರಹಿಸುತ್ತಿದ್ದರು ಅಲ್ಲದೇ ಯಾವುದೇ ಮುನ್ಸೂಚನೆ ನೀಡದೆ ಬಿಪಿ ಡ್ಯಾಂ ನೀರನ್ನು ಬಿಡುವುದರಿಂದ ಇಲ್ಲಿಯ ಜನರಿಗೆ ತೊಂದರೆಯಾಗುತ್ತಿದೆ. ಈ ಭಾಗವು ಕಾಳಿ ಹುಲಿ ಯೋಜನಾ ಅಭಯಾರಣ್ಯ ವ್ಯಾಪ್ತಿಗೆ ಬರುವುದರಿಂದ ಕಾಡು ಪ್ರಾಣಿಗಳು ಸಣ್ಣ ಮತ್ತು ಅತೀ ಸಣ್ಣ ರೈತರ ಬೇಳೆಗಳನ್ನು ಕಾಡುಪ್ರಾಣಿಗಳು ಸಂಪೂರ್ಣವಾಗಿ ನಾಶ ಪಡಿಸುತ್ತಿದ್ದು ಈ ಭಾಗದ ಜನರಿಗೆ ಯಾವುದೇ ಪರಿಹಾರ ದೊರಕುತ್ತಿಲ್ಲ. ಅಧಿಕಾರಿಗಳಿಂದಲೂ ತೀವೃ ತೊಂದರೆ ಅನುಭವಿಸುತ್ತಿದ್ದು ಸರಕಾರದ ಯಾವ ಯೋಜನೆಗಳೂ ಸರಿಯಾಗಿ ಸಿಗುತ್ತಿಲ್ಲ.

ಕೃಷಿ ಕೂಲಿಯನ್ನೇ ಅವಲಂಬಿಸಿದ ರೈತರಿಗೆ ಎಲ್ಲಾ ರೀತಿಯಿಂದಲೂ ಜೀವನ ನಿರ್ವಹಣೆ ಕಷ್ಟವಾಗಿದೆ. ಈ ಭಾಗದ ಜನರಿಗೆ ಗ್ರಾಮ ಪಂಚಾಯತಿಯಂದ ಬಹುತೇಕ ಫಲಾನುಭವಿಗಳಿಗೆ ಉದ್ಯೋಗ ಖಾತ್ರಿ ಕೆಲಸವೂ ಕೂಡ ಸಿಗುತ್ತಿಲ್ಲ ಇದಲ್ಲದೇ ಕೆಪಿಸಿ ಅಧಿಕಾರಿಗಳು ಸ್ಥಳೀಯರಿಗೆ ಉದ್ಯೋಗ ನೀಡದೆ ಬೇರೆ ಭಾಗದ ಜನರನ್ನು ಸೆಕ್ಯುರಿಟಿ ಗಾರ್ಡ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿನ ಸ್ಥಳೀಯರನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲು ಹಾಗೂ ಒಂದು ತಿಂಗಳಲ್ಲಿ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಗದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.ಈ ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕನ್ನಡ ಜಿಲ್ಲಾಧ್ಯಕ್ಷರು ಕೃಷ್ಣಾ ಎಚ್ ಬಳೆಗಾರ್, ಕಾರ್ಮಿಕ ವಿಭಾಗ ರಾಜ್ಯ ಅಧ್ಯಕ್ಷರು ನಾಗರಾಜ್ ನಾಯ್ಕ, ಬುಡಕಟ್ಟು ವಿಭಾಗ ಜಿಲ್ಲಾಧ್ಯಕ್ಷರು ಮಾನವೆಲ್ ಜೆ ಸೋಜ್, ದಾಂಡೇಲಿ ತಾಲೂಕಾಧ್ಯಕ್ಷರು ಮೋಹನ್ ಕೆ ನಾಯರ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರು ಉಪಸ್ತಿತರಿದ್ದರು.

Be the first to comment

Leave a Reply

Your email address will not be published.


*