ಜಿಲ್ಲಾ ಸುದ್ದಿಗಳು
ಮಸ್ಕಿ
ತಾಲೂಕಿನ ಮೆದಿಕಿನಾಳ ಗ್ರಾಮದ ಲಿಂ. ಶ್ರೀ ಚನ್ನಮಲ್ಲ ಶಿವಯೋಗಿಗಳ ಮಠದ ಆವರಣದಲ್ಲಿ ಇಂದು ಪುರಾಣದ ಮೊದಲನೇ ದಿನ ಆದ್ದರಿಂದ ಅತೀ ಹೆಚ್ಚು ಜನ ಸಂದಣಿ ಸೇರುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ.
ಕಾರ್ಯಕ್ರಮದ ಮೊದಲಿಗೆ ಶ್ರೀ ಮ.ನಿ.ಪ್ರ. ಡಾ. ಚನ್ನಮಲ್ಲ ಮಹಾಸ್ವಾಮಿ ಗಳು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಪ್ರವಚನಕಾರರಾಗಿ ಆಗಮಿಸಿದ ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶ್ರೀ ಶಶಿಧರ ಶಾಸ್ತ್ರಿಗಳು ಡೋಣಿ ಗದಗ ಇವರು ಕಾರ್ಯಕ್ರಮದ ಮುಂಭಾಗ ನೆರೆದಿರುವಂತಹ ಸಕಲ ಸದ್ಭಕ್ತರನ್ನು ಸ್ವಾಗತಿಸಿ ಜನಸಾಮಾನ್ಯರ ಮನಮುಟ್ಟುವಂತೆ ಅತೀ ಸರಳ ಭಾಷೆಯಲ್ಲಿ ಪ್ರವಚನವನ್ನು ನೀಡಿದರು. ಪ್ರವಚನದ ಮದ್ಯೆ ಆಡು ಭಾಷೆಯ ಸಂಗೀತವನ್ನು ಶ್ರೀ ಶಿವಾನಂದ ಮಂದೇವಾಲ ಗದಗ ಇವರು ಹಾಡಿದರು ಹಾಗೆಯೇ ಸಂಗೀತಕ್ಕೆ ತಕ್ಕಂತೆ ಶ್ರೀ ಬಸವರಾಜ ಚಳಗೇರಿ ಗದಗ ರವರು ತಬಲವನ್ನು ನುಡಿಸಿದರು. ಕೊನೆಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚನ್ನಮಲ್ಲ ಸ್ವಾಮಿಗಳು ಕಾರ್ಯಕ್ರಮದ ಕುರಿತು ಕೆಲವೊಂದಿಷ್ಟು ಹಿತ ನುಡಿಗಳನ್ನಾಡಿ ನಂತರ ಇಂದಿನ ಅನ್ನ ಸಂತರ್ಪಣ ದಾನಿಗಳಾದ ಶರಣಯ್ಯ ಗದ್ದಿಗೆ ಮಠ,ಈಶಪ್ಪ ದಿದ್ದಿಗಿ,ಆದಪ್ಪ ಕುಂಬಾರ, ಕುಪ್ಪೆ ರಾವ್ ಮುತಾಲಿಕ್ ಹಾಗೂ ರಾಘವೇಂದ್ರ ರವರಿಗೆ ಶಾಲು ಹೊದಿಸಿ ಫಲಪುಷ್ಪ ನೀಡುವ ಮೂಲಕ ಗೌರವಿಸಿದರು. ಲಿಂ. ಶ್ರೀ ಚನ್ನಮಲ್ಲ ಶಿವಯೋಗಿಗಳ 66ನೇ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ:- 16-12-2021 ರಿಂದ 26-12-2021 ರವರಿಗೆ ಪ್ರತಿದಿನ ಸಂಜೆ 6:30 ರಿಂದ 8:30 ರವರಿಗೆ ಜರಗಲಿದೆ ಎಂದು ಶ್ರೀಗಳು ನೆರೆದಿರುವ ಭಕ್ತರಿಗೆ ತಿಳಿಸಿದರು.ಇದೇ ಸಂದರ್ಭದಲ್ಲಿ ಚನ್ನಮಲ್ಲ ಮಠದ ಶ್ರೀಗಳು, ವ್ರವಚನಕಾರರು, ಸಂಗೀತ ವೃಂದದವರು, ತಬಲಾಜಿಗಳು, ಗ್ರಾಮದ ಗುರು- ಹಿರಿಯರು, ಮೆದಿಕಿನಾಳ ಗ್ರಾಮದ ಸರ್ವ ಭಕ್ತರು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
Be the first to comment