ಜಿಲ್ಲಾ ಸುದ್ದಿಗಳು
ಭಟ್ಕಳ
ಓಲಂಪಿಕ್ ಇತಿಹಾಸದಲ್ಲೇ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟಿರುವ ನೀರಜ್ ಚೋಪ್ರಾಗೆ ಸದ್ಯ ಎಲ್ಲಾ ಕಡೆಯಿಂದಲೂ ಶುಭ ಹಾರೈಕೆಗಳು ಬರುತ್ತಿವೆ. ಭಾರತಕ್ಕೆ ಈ ಬಾರಿಯ ಟೋಕಿಯೋ ಒಲಂಪಿಕ್ ನಲ್ಲಿ ಒಂದೇ ಒಂದು ಚಿನ್ನದ ಪದಕ ದೊರೆತಿದ್ದು, ಅದು ಕೂಡ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರಿಂದಲೇ. ಹೀಗಾಗಿ ಎಲ್ಲೆಡೆ ಇವರದ್ದೆ ಹೆಸರು ಸದ್ಯ ಪ್ರಚಲಿತದಲ್ಲಿದೆ.ಈ ನಡುವೆ ಭಟ್ಕಳದ ವೆಂಕ್ಟಾಪುರ ಬ್ರಿಡ್ಜ್ ಪಕ್ಕದಲ್ಲಿರುವ ಶಿರಾಲಿಯ ನೀರಕಂಠ ಸಮೀಪ ನೀರಜ್ ಎಂಬ ಹೆಸರಿನವರಿಗೆ ಉಚಿತವಾಗಿ ಊಟ ನೀಡುವುದಾಗಿ ಘೋಷಿಸಿದೆ. ಇದು ನೂತನವಾಗಿ ಕಳೆದ ಏಳು ತಿಂಗಳ ಹಿಂದೆ ಆರಂಭಗೊAಡ ‘ತಾಮ್ರ’ ರೆಸ್ಟೋರೆಂಟ್ ನಲ್ಲಿ ಈ ವಿಶೇಷ ಕೊಡುಗೆಯನ್ನು ಘೋಷಿಸಲಾಗಿದೆ. ಆ ಮೂಲಕ ಚಿನ್ನದ ವೀರ ನೀರಜ್ ಚೋಪ್ರಾ ಅವರಿಗೆ ಗೌರವ ಸಲ್ಲಿಸಲು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.ಇತ್ತೀಚಿಗೆ ಆರಂಭವಾಗಿದ್ದರೂ ‘ತಾಮ್ರ’ ರೆಸ್ಟೋರೆಂಟ್ ಸಾಂಪ್ರದಾಯಿಕ ಶೈಲಿಯ, ಸಮುದ್ರಾಹಾರಗಳಿಗೆ ಪ್ರಸಿದ್ಧಿ ಪಡೆಯುತ್ತಿದೆ. ಇಲ್ಲಿ ಪ್ರತಿದಿನ ನೂರಾರು ಜನರು ಈ ಸಮುದ್ರಾಹಾರಗಳ ಖಾದ್ಯಕ್ಕಾಗಿಯೇ ಇಲ್ಲಿ ಭೇಟಿ ನೀಡುತ್ತಾರೆ. ಇತ್ತೀಚಿನವರೆಗೂ, ತಾಮ್ರದಲ್ಲಿ ಊಟ ಮಾಡಿದವರು ಇನ್ಸ್ಟಾಗ್ರಾಂನಲ್ಲಿ ರೆಸ್ಟೋರೆಂಟ್ ಪೇಜ್ ಅನ್ನು ಟ್ಯಾಗ್ ಮಾಡಿದರೆ ಶೇ ೧೦ರಷ್ಟು ರಿಯಾಯಿತಿಯನ್ನೂ ನೀಡಲಾಗುತ್ತಿತ್ತು. ಅನೇಕರು ಕೂಡ ಇದರ ಪ್ರಯೋಜನ ಪಡೆದಿದ್ದಾರೆ. ಇದೀಗ ಮತ್ತೊಂದು ಕೊಡುಗೆಯ ಮೂಲಕ ‘ತಾಮ್ರ’ ಜನರನ್ನು ತನ್ನತ್ತ ಸೆಳೆಯುತ್ತಿದೆ.
ನೀರಜ್ ಎಂಬ ಹೆಸರಿನವರಿಗೆ ಅನ್ ಲಿಮಿಟೆಡ್ ಊಟವನ್ನು ಇಲ್ಲಿ ನೀಡಲಾಗುತ್ತಿದೆ. ಈ ಕೊಡುಗೆ ಆಗಸ್ಟ್ ೧೫ರವರೆಗೂ ಇದ್ದು, ಈ ಬಗ್ಗೆ ಈಗಾಗಲೇ ತಮ್ಮ ಇನ್ಟ್ಟಾಗ್ರಾಂ ಖಾತೆಯಲ್ಲೂ ‘ತಾಮ್ರ’ ರೆಸ್ಟೋರೆಂಟ್ ಘೋಷಣೆ ಮಾಡಿಕೊಂಡಿದೆ. ಈ ಇನ್ಸ್ಟಾಗ್ರಾಂ ಪೋಸ್ಟ್ ಇದೀಗ ಜಿಲ್ಲೆಯಾದ್ಯಂತ ಸಾಕಷ್ಟು ವೈರಲ್ ಆಗಿದ್ದು, ಈ ಆಫರ್ ಭಾರೀ ಸದ್ದು ಮಾಡುತ್ತಿದೆ.ಇನ್ನು ಈ ಬಗ್ಗೆ ‘ಮಾದ್ಯಮದವರೊಂದಿಗೆ ಮಾತನಾಡಿರುವ ‘ತಾಮ್ರ’ ರೆಸ್ಟೋರೆಂಟ್ ಮಾಲೀಕ ಆಶೀಶ್ ನಾಯಕ್, ನೀರಜ್ ಹೆಸರಿನವರು ಯಾರೇ ಬಂದರೂ ಅವರಿಗೆ ನಮ್ಮ ರೆಸ್ಟೋರೆಂಟ್ ನಲ್ಲಿ ಉಚಿತವಾಗಿ, ಅನ್ ಲಿಮಿಟೆಡ್, ಅವರಿಗೆ ಬೇಕಾದ ಅಥವಾ ನಮ್ಮಲ್ಲಿ ಲಭ್ಯವಿರುವ ಊಟ ನೀಡಲಾಗುತ್ತದೆ. ತಮ್ಮ ಹೆಸರಿನ ಐಡಿಯನ್ನು ಅಥವಾ ಇನ್ಸ್ಟಾಗ್ರಾಂ, ಫೇಸ್ ಬುಕ್ ಖಾತೆಗಳನ್ನು ತೋರಿಸಿ ತಮ್ಮ ಹೆಸರು ನೀರಜ್ ಎಂದು ದೃಢಪಡಿಸಿದರೆ ಸಾಕು, ಅವರು ಈ ಕೊಡುಗೆ ಪಡೆದುಕೊಳ್ಳಲಿದ್ದಾರೆ. ಆದರೆ ಇದು ಕೇವಲ ನೀರಜ್ ಎಂದು ಹೆಸರಿರುವವರಿಗೆ ಮಾತ್ರ ಎಂದು ತಿಳಿಸಿದ್ದಾರೆ.ತಾಮ್ರ ರೆಸ್ಟೋರೆಂಟ್ ಶಿರಾಲಿಯ ನೀರಕಂಠ ಕ್ರಾಸ್ ನಲ್ಲಿ, ಹೆದ್ದಾರಿಗೆ ಸಮೀಪದಲ್ಲಿದೆ. ಈ ವರ್ಷದ ಫೆ.೨೧ಕ್ಕೆ ರೆಸ್ಟೋರೆಂಟ್ ಆರಂಭವಾಗಿದ್ದು, ೬೦ ಆಸನಗಳ ವ್ಯವಸ್ಥೆ ಇದೆ. ೩೦ ಆಸನಗಳ ಎಸಿ ಹಾಗೂ ಎರಡು ಫ್ಯಾಮಿಲಿ ರೂಮ್ ಗಳಿವೆ. ಉತ್ತಮ ಪರಿಸರ, ವೈವಿಧ್ಯಮಯ ಬೆಳಕಿನ ನಡುವೆ ಇಲ್ಲಿ ಊಟ ಸವಿಯುವುದೇ ಒಂದು ವಿಶೇಷ ಕೂಡ ಹೌದು. ಈ ರೆಸ್ಟೋರೆಂಟ್ ಮಾಲಕ ಆಶೀಸ್ ನಾಯಕ ಅವರು ಕಾರವಾರ ಮೂಲದವರಾಗಿದ್ದು, ಗೋವಾದಲ್ಲಿ ಕನ್ಸ್ಟ್ರಕ್ಷನ್ ಬ್ಯುಸಿನೆಸ್ ನಡೆಸುತ್ತಿದ್ದಾರೆ. ಅದರ ಜೊತೆಗೆ ತಾಮ್ರ ರೆಸ್ಟೋರೆಂಟ್ ಅನ್ನು ಕೂಡ ಆರಂಭಿಸಿ, ನಡೆಸುತ್ತಿದ್ದಾರೆ.ಇಲ್ಲಿಯ ತನಕ ತಾಲೂಕಿನ ನಾಲ್ಕು ಮಂದಿ ರೆಸ್ಟೋರೆಂಟಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸುದ್ದು ಓರ್ವ ನೀರಜ್ ಆಚಾರಿ ಎನ್ನುವವರು ಇಂದು ರಾತ್ರಿ ತಾಮ್ರ ರೆಸ್ಟೋರೆಂಟ್ ನಲ್ಲಿ ಫ್ರೀ ಫುಲ್ ಮಿಲ್ಸ್ ಸವಿಯಲು ಸಿದ್ಧರಾಗಿದ್ದಾರೆ
Be the first to comment