ಎರಡು ತಿಂಗಳಾದರೂ ಮುಗಿಯದ ಟೆಂಡರ್ ಪ್ರಕ್ರಿಯೆ.

ವರದಿ ಅಂಭಿಗ್ ನ್ಯೂಸ್

ರಾಜ್ಯ ಸುದ್ದಿಗಳು 

ಕೋಲಾರ

ಕೆಬಿ ಜೆಏನ್ಎಲ್ ಮುಳವಾಡ ಏತ ನೀರಾವರಿ ಮಟ್ಟಿಯಾಳ ವಿಭಾಗ ಒಂದರ ವ್ಯಾಪ್ತಿಯಲ್ಲಿ ಕ್ಲೋಸ್ ಜೊತೆಗೆ ವಿಶೇಷ ದುರಸ್ತಿಯ ಕಾಮಗಾರಿಕೆಗಳಿಗಾಗಿ ಎರಡು ತಿಂಗಳ ಹಿಂದೆ ಕರೆಯಲಾದ ಎರಡು ಕೋಟಿ ಅಧಿಕ ಮೊತ್ತದ ಟೆಂಡರ್ ಪ್ರಕ್ರಿಯೆ ಇನ್ನೂ ಪೂರ್ಣವಾಗಿಲ್ಲ.ಸುಮಾರು 25-30 ದಿನಗಳ ಬೇಕಾಗುವ ಕ್ಲೋಸರ್ ಕಾಮಗಾರಿಕೆ ಯನ್ನು ನಾಲ್ಕೈದು ದಿನಗಳು ಮುಗಿಸಲು ಅಸಾಧ್ಯ ಟೆಂಡರ್ ಹಣ ದುರ್ಬಳಿಕೆ ಆಗುವುದನ್ನು ತಡೆಗಟ್ಟಲು ಕೂಡಲೇ ಟೆಂಡರ್ ರದ್ದುಪಡಿಸಿ ರೈತರಿಗಾಗಿ ಕಾಲುವೆಗಳಿಗೆ ನೀರು ಹರಿಸುವಂತೆ ರೈತ ಮುಖಂಡರು ,ಗುತ್ತಿಗೆದಾರರು ಒತ್ತಾಯಿಸುತ್ತಿದ್ದಾರೆ.

CHETAN KENDULI

ಮುಂಗಾರು ಹಂಗಾಮು ಮೊದಲು ಸಾಮಾನ್ಯವಾಗಿ ಪ್ರತಿವರ್ಷ ಏಪ್ರಿಲ್ ನಿಂದ ಜೂನ್ ವರೆಗೂ ಕಾಲವುಗಳ ಕ್ಲೋಸರ್ ಜೊತೆಗೆ ದುರಸ್ತಿಯ ವಿಶೇಷ ಕಾಮಗಾರಿ ಕೈಗೊಳ್ಳಲಾಗುತ್ತದೆ .ಮಟ್ಟಿಹಾಳ ವಿಭಾಗ ಒಂದರಲ್ಲಿ ಈ ಕಾಮಗಾರಿಕೆಗಾಗಿ ಪ್ರತಿ ವರ್ಷ ಸುಮಾರು ಎರಡರಿಂದ ಮೂರು ಕೋಟಿ ಹಣ ಖರ್ಚು ಮಾಡಲಾಗುತ್ತದೆ .ಏಪ್ರಿಲ್ ನಲ್ಲಿ ಟೆಂಡರ್ ಕರೆದು ಜೂನ್ ವೇಳೆಗೆ ಕ್ಲೋಸರ್ ಕಾಮಗಾರಿ ಪೂರ್ಣ ಕೈಗೊಳ್ಳಬೇಕು ಈ ವರ್ಷ ಜುಲೈ ಕೊನೆಯ ವಾರವಾದರೂ ಕಾಮಗಾರಿಕೆ ಮುಗಿದಿರುವುದಿಲ್ಲ ,ಟೆಂಡರ್ ಪ್ರಕ್ರಿಯೆ ಸಹಪೂರ್ಣಗೊಂಡಿಲ್ಲ. ಅದೇ ಜುಲೈ 26ರಂದು ಐ .ಸಿ.ಸಿ .ಸಭೆ ನಿಗದಿ ಪಡಿಸಲಾಗಿದ್ದು ಕೇವಲ ಮೂರು ನಾಲ್ಕು ದಿನಗಳಲ್ಲಿ ಇಡೀ ಕಾಲುವೆ ಹೂಳೆತ್ತುವುದು ಅಸಾಧ್ಯ.

ಮಟ್ಟಿಹಾಳ ವಿಭಾಗದಲ್ಲಿ ಈ ವರ್ಷ ಮೇ 20ರಂದು ಕಾಲುವೆಗಳ ಕ್ಲೋಸರ್ ಹಾಗೂ ವಿಶೇಷ ದುರಸ್ತಿ ಕಾಮಗಾರಿಕೆಗಾಗಿ ಪ್ಯಾಕೇಜ್ ಮಾದರಿಯಲ್ಲಿ ಟೆಂಡರ್ ಆಹ್ವಾನಿಸಲಾಗಿದೆ. ಈ ವರ್ಷದಿಂದ ಕ್ಲೋಸ್ ಟು ಕಾಮಗಾರಿಕೆಯನ್ನು ವರ್ಷಪೂರ್ತಿಗೆ ಗುತ್ತಿಗೆ ನೀಡಿ ನೀರು ಬಂದ್ ಇರುವಾಗ ಮಾತ್ರ ಹೂಳೆತ್ತುವಂತೆ ಕಾಮಗಾರಿಗೆ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ .ಆದರೆ ,ಈ ವರ್ಷ ಟೆಂಡರ್ ನೀಡುವ ಮೂಲಕ ಕ್ಲೋಸರ್ ಕಾಮಗಾರಿಗೆ ಪೂರ್ಣಗೊಳಿಸೇ ಗುತ್ತಿಗೆ ನೀಡಬೇಕು . ಮಟ್ಟಿಯಾಳ ಕೆ ಬಿ ಜೆ ಎನ್ ಎಲ್ ಕಚೇರಿ ಕೆಲ ಪ್ರಭಾವಿ ಗುತ್ತಿಗೆದಾರರಿಗೆ ಮಾತ್ರ ಸೀಮಿತವಾಗಿದೆ .ಇಲ್ಲಿನ ಅಧಿಕಾರಿಗಳು ಸಾಮಾನ್ಯ ಗುತ್ತಿಗೆದಾರರು ಟೆಂಡರ್ ನಿಗದಿತ ದಿನಾಂಕದ ಮೊದಲು ಡಿಡಿ ನೀಡಲು ಹೋದರೆ ಸ್ವೀಕರಿಸದೆ ಮರುದಿನ ನೀಡುವಂತೆ ತಿಳಿಸುತ್ತಾರೆ .ಮರುದಿನ ಕೂಡಲು ಹೋದರೆ ಬೆಳಗ್ಗೆ 11ಕ್ಕೆ ಸಮಯ ಮುಗಿದಿದೆ ಎಂದು ಹೇಳಿ ವಾಪಸ್ಸು ಕಳಿಸುತ್ತಾರೆ. ಇವರು ಇಲ್ಲಿನ ಕೆಲ ಪ್ರಭಾವಿ ಗುತ್ತಿಗೆದಾರರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ತಮಗೆ ಬೇಕಾದಂತೆ ಟೆಂಡರ್ ನಿಯಮಗಳನ್ನು ಬದಲಾವಣೆ ಮಾಡಿಕೊಂಡು ಅಕ್ರಮ ಎಸೆದುತ್ತಿದ್ದಾರೆ ಆರೋಪಿಸಿ, ಕೂಡಲೇ ಟೆಂಡರ್ ರದ್ದುಪಡಿಸಿ, ರೈತರಿಗಾಗಿ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಗೊತ್ತಿಕೆದಾರರ ಯಾಮನಪ್ಪ ದೊಡ್ಡಮನಿ ಒತ್ತಾಯಿಸುತ್ತಿದ್ದಾರೆ.

ಕೆಲವು ಅಧಿಕಾರಿಗಳು ಹಾಗೂ ಪ್ರಭಾವಿತ ಕುತ್ತಿಗೆದಾರರು ಕ್ಲೋಸರ್ ಕಾಮಗಾರಿಕೆಗಳನ್ನು ಮಾಡದೆ ಅಕ್ರಮವಾಗಿ ಬಿಲ್ ಬಿಡುಗಡೆ ಮಾಡಿಕೊಂಡು ಹಣ ಮಾಡಿಕೊಳ್ಳುತ್ತಿದ್ದಾರೆ. ಆದರೆ, ರೈತರಿಗೆ ಮಾತ್ರ ನೀರಾವರಿ ಕಾಲುವೆ ತುದಿಯವರೆಗೂ ನೀರು ಅರಿಯದೆ ಪ್ರತಿವರ್ಷ ಪರದಾಡುವುದು ತಪ್ಪಿಲ್ಲ ,ಕೆಬಿ ಜೆಏನ್ಎಲ್ ಹಿರಿಯ ಅಧಿಕಾರಿಗಳು ಟೆಂಡರ್ ರದ್ದು ಮಾಡಿ ಅಕ್ರಮಗಳನ್ನು ತಡೆಯಬೇಕು .ಕೂಡಲೇ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ರೈತ ಮುಖಂಡ ರಮೇಶ್ ಬಾಲಗೊಂಡ ಆಗ್ರಹಿಸಿದ್ದರು.  

ಎರಡು ಮೂರು ದಿನದವರೆಗೂ ಟೆಂಡರ್ ಪ್ರಕ್ರಿಯೆ ನಿಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದು ಪರಿಶಿಸಲಾಗುವುದುಎಚ್, ಸುರೇಶ್ ,ಮುಖ್ಯ ಇಂಜಿನಿಯರ್, ಆಲಮಟ್ಟಿ ಅಣೆಕಟ್ಟು ವಲಯ.

Be the first to comment

Leave a Reply

Your email address will not be published.


*