ಗುರುಮಿಟ್ಕಲ: ಗುರುಮಟ್ಕಲ್ ಮತಕ್ಷೇತ್ರದ ಎಲ್ಲಾ ಪ್ರೌಢಶಾಲೆಯ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಡಾ. ಯೋಗೇಶ್ ಬೆಸ್ತರ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಗುರುಮಿಟ್ಕಲ್ ವತಿಯಿಂದ ಗುರುಮಿಟ್ಕಲ್ ನ ಖಾಸ ಮಠದಲ್ಲಿ ನಡೆಯಿತು .
ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮತಕ್ಷೇತ್ರದ ಎಲ್ಲಾ ಪ್ರೌಢಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಗಾಜರಕೋಟೆ ಮತ್ತು ದ್ವಿತೀಯ ಬಹುಮಾನವನ್ನು ಸರ್ಕಾರಿ ಪ್ರೌಢಶಾಲೆ ಗಾಜರಕೋಟೆ ತೃತೀಯ ಬಹುಮಾನವನ್ನು ಸರ್ಕಾರಿ ಪ್ರೌಢಶಾಲೆ ಚಂಡರಕಿ
ಪ್ರಥಮ ಬಹುಮಾನ 15000
ದ್ವಿತೀಯ ಬಹುಮಾನ 10000
ತೃತೀಯ ಬಹುಮಾನ 5000
ಹಾಗೂ ಭಾಗವಹಿಸಿದ ಪ್ರತಿ ಪ್ರತಿ ವಿದ್ಯಾರ್ಥಿಗೂ ಸಮಾಧಾನಕರ ಬಹುಮಾನವಾಗಿ ಶಾಲೆಯ ಬ್ಯಾಗ್ ಗಳನ್ನು ಹಾಗೂ ಗಣಿತಶಾಸ್ತ್ರದ ಗ್ರಾಮರ ಬುಕ್ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಶಿಕ್ಷಣಾಧಿಕಾರಿಗಳು ಹಾಗೂ ಡಾ. ಯೋಗೇಶ್ ಬೆಸ್ತರ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಮುಖ್ಯಸ್ಥರಾದ ಡಾ. ಯೋಗೇಶ್ ಗುರುಮಿಟ್ಕಲ್ ಪುರಸಭೆ ಅಧ್ಯಕ್ಷರಾದ ಪಾಪಣ್ಣ ಮನೆ ಗುರುಮಿಟ್ಕಲ್ ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ನೀರಹಟ್ಟಿ ಇತರ ಗಣ್ಯರು ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಡಾಕ್ಟರ್ ಯೋಗೇಶ್ ಬೆಸ್ಸರ್ ಮಾತನಾಡಿ ಮಕ್ಕಳಿಗೆ ಸ್ಪರ್ಧೆಯು ಸ್ಪೂರ್ತಿಯಾಗಿರಬೇಕು ಹಾಗೂ ಸಮಾಜದಲ್ಲಿ ತಂದೆ ತಾಯಿ ಗುರುಗಳಿಗೆ ಗೌರವ ಸಲ್ಲಿಸಬೇಕು ಪ್ರತಿಯೊಬ್ಬ ವಿದ್ಯಾರ್ಥಿಯು ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಡಾ. ಯೋಗೇಶ್ ಬೆಸ್ತರ್ ವೆಲ್ಫೇರ್ ಟ್ರಸ್ಟ್ ಸದಸ್ಯರಾದ ಸಾಯಿಬಣ್ಣ ಅಜಲಾಪರ ಸುರೇಶ್ ಕೆ ಎಂ ಹಾಗೂ ಕರ್ನಾಟಕ ರಾಜ್ಯ ಕಾರ್ಮಿಕ ಸಂಘದ ಕಾರ್ಯಾಧ್ಯಕ್ಷರಾದ ದೇವೇಂದ್ರ ಈ ತಳವಾರ್ ವೀರೇಶ್ ಕಂಚುಗಾರಹಳ್ಳಿ ಉಪಸ್ಥಿತರಿದ್ದರು.
Be the first to comment