ಜಿಲ್ಲಾ ಸುದ್ದಿಗಳು
ಮಸ್ಕಿ
ತಾಲೂಕಿನ ತಾಲೂಕ ಪಂಚಾಯತ ಕಛೇರಿಗೆ ನೂತನ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ್ ರವರು ಯಾದಗಿರಿ ಜಿಲ್ಲೆಯ ಸುರುಪುರ ತಾಲೂಕಾ ಪಂಚಾಯತಿಯಿಂದ ವರ್ಗಾವಣೆಯಾಗಿ ಬಂದಿದ್ದು, ಇವರು ಮೂಲತಃ ಮಸ್ಕಿ ತಾಲೂಕಿನ ಮೂಡಲದಿನ್ನಿ ಗ್ರಾಮದವರಾಗಿದ್ದುದ್ದು ಸಂತೋಷದ ವಿಷಯ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದರು.ತಾಲೂಕ ಪಂಚಾಯತಿಗೆ ನೂತನ ಅಧಿಕಾರಿ ಆಗಮಿಸಿರುವುದರಿಂದ ಅವರನ್ನು ಸತ್ಕರಿಸುವುದು ನಮ್ಮ ಧರ್ಮ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಹನುಮಂತಪ್ಪ ವೆಂಕಟಾಪುರ ರವರ ನೇತೃತ್ವದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ಮಾತನಾಡಿದ ಅಮರೇಶ್ ಇಒ ಸೋಮವಾರ ದಂದು ನಾನು ತಾ. ಪಂ ಯ ಅಧಿಕಾರ ವಹಿಸಕೊಂಡಿದ್ದೇನೆ. ಜನ ಪ್ರತಿನಿಧಿಗಳ, ಊರಿನ ಹಿರಿಯರ ಹಾಗೂ ಸಂಘ ಸಂಸ್ಥೆಗಳ ಸಹಕಾರ ಬಹು ಮುಖ್ಯ ,ನಿಮ್ಮೆಲ್ಲರ ಸಹಕಾರದಿಂದ ಈ ಸ್ಥಾನದ ಅಧಿಕಾರ ನಡೆಸಲು ಸಾಧ್ಯ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಹನುಮಂತಪ್ಪ ವೆಂಕಟಾಪುರ, ಜಯಪ್ಪ ಮಾಸ್ತರ ಮೆದಿಕಿನಾಳ, ಹನುಮಂತ ಮೆದಿಕಿನಾಳ, ಮಲ್ಲಿಕ್ ಮುರಾರಿ, ತಾಲೂಕ ಪಂಚಾಯ್ತಿ ಯ ಸಿಬ್ಬಂದಿ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
Be the first to comment