ಜಿಲ್ಲಾ ಸುದ್ದಿಗಳು
ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಅಗತ್ಯವಿದ್ದು,ಶಾಲೆಗೆ ಅತ್ಯಗತ್ಯವಾಗಿ ಬೇಕಾಗುವ ಎಲ್ಲ ಮೂಲಭೂತ ಅವಶ್ಯಕತೆಗಳನ್ನು ನೀಡಲು ಮನವಿಮಾಡಿಕೊಂಡಿದ್ದು ಸಚಿವರು ಉತ್ತಮವಾಗಿ ಸ್ಪಂದಿಸುತ್ತಿರುವುದರಿಂದ ಅದು ಈಡೇರುವ ಆಶಯ ನಮ್ಮೆಲ್ಲರಲ್ಲಿದೆ.
ಮಹಾಲಿಂಗೇಶ ನಾಡಗೌಡರ
ಅಧ್ಯಕ್ಷರು ಗ್ರಾಮ ಪಂಚಾಯತಿ ಕೆಲೂರ
ಬಾಗಲಕೋಟೆ:ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದ 155 ವರ್ಷ ಪೂರೈಸಿದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಶಿಕ್ಷಣ ಸಚಿವರಾದ ಬಿ.ನಾಗೇಶ ಭೇಟಿ ನೀಡಿದರು.
ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಸಚಿವರು 1867 ರಲ್ಲಿ ಮಹಾರಾಜರ ಕಾಲದಲ್ಲಿ ಪ್ರಾರಂಭವಾದ ಈ ಶಾಲೆ 155 ವರ್ಷಗಳ ಇತಿಹಾಸ ಹೊಂದಿದ್ದು ರಾಜ್ಯದಲ್ಲಿಯೇ 150 ವಸಂತಗಳನ್ನ ಪೂರೈಸಿದ ಎರಡನೆ ಶಾಲೆ ಎಂಬ ಹಗ್ಗಳಿಕೆಗೆ ಪಾತ್ರವಾಗಿದೆ.ಶಾಲೆಯಲ್ಲಿ ಮಕ್ಕಳ ಸಂಖ್ಯೆ 450 ಕ್ಕೂ ಹೆಚ್ಚು ಇದ್ದು ಸಂಖ್ಯೆಗನುಗುಣವಾಗಿ ಶೈಕ್ಷಣಿಕ ವರ್ಷ ಪ್ರಾರಂಭದಲ್ಲೆ ಶಿಕ್ಷಕರ ಕೊರತೆ ನೀಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಕ್ತ ಕ್ರಮವಹಿಸಲು ಸೂಚಿಸಿದರು.ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಯತಾವತ್ತಾಗಿ ದೊರಕಿಸಿಕೊಡುವುದಾಗಿ ತಿಳಿಸಿದರು.
ಗ್ರಾಮದವತಿಯಿಂದ ಸಚಿವರಿಗೆ ಸನ್ಮಾನಿಸಿಲಾಯಿತು.ಈ ಸಂದರ್ಭದಲ್ಲಿ ವಿದಾನ ಪರಿಷತ್ ಸದಸ್ಯರಾದ ಅರುಣ ಶಾಹಪೂರ ,ಶಿಕ್ಷಣ ಇಲಾಖೆಯ ಅಧಿಕಾರಿಗಳು,ಗ್ರಾಮ ಪಂಚಾಯತಿ ಸದಸ್ಯರು,ಪಿಕೆಪಿಎಸ್ ಸದಸ್ಯರು ಹಾಗೂ ಗ್ರಾಮದ ಹಿರಿಯರು ಮತ್ತು ಯುವಕ ಮಿತ್ರರು ಉಪಸ್ಥಿತರಿದ್ದರು.
Be the first to comment