ರಾಜ್ಯ ಸುದ್ದಿ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರ ತಾಲೂಕಿನ, ದೇಹಳ್ಳಿ ಗ್ರಾಮ ಪಂಚಾಯಿತ ವ್ಯಾಪ್ತಿಯ ಕುಂಬ್ರಾಳ ಅರಣ್ಯನಾಶ ಅಪರಾಧ ಕೃತ್ಯಕ್ಕೆ ಹಿರಿಯ ಅಧಿಕಾರಿಗಳೇ ಪ್ರೇರಕವಾಗಿದ್ದು, ಪ್ರಭಾವ ವ್ಯಕ್ತಿಯ ಪ್ರಭಾವದಿಂದ ಜಾಮೀನು ರಹಿತ ಅಪರಾಧದ ತನಿಖೆಗೆ ವೇಗ ಸಿಗುತ್ತಿಲ್ಲವಾದ್ದರಿಂದ, ಉನ್ನತ ಮಟ್ಟದ ತನಿಖೆ ಆಗಬೇಕು. ಪರಿಸರ ನಾಶಕ್ಕೆ ಕಾರಣವಾದ ಅರಣ್ಯ ಅಧಿಕಾರಿಗಳ ಕರ್ತವ್ಯ ಲೋಪದ ಕುರಿತು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಸಂಘದ ರಾಜ್ಯ ಅಧ್ಯಕ್ಷ ರವೀಂದ್ರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಇಂದು ಕುಂಬ್ರಾಳQ ಅರಣ್ಯನಾಶ ಪ್ರಕರಣಕ್ಕೆ ಸಂಬಂಧಿಸಿ ತಾಲೂಕಿನ ವಿವಿಧ ಸಾಮಾಜಿಕ ಸಂಘಟನೆಗಳ ಪ್ರಮುಖರೊಂದಿಗೆ ಸ್ಥಳೀಯ ನೌಕರ ಭವನದಲ್ಲಿ ಜರುಗಿದ ಸಮಾಲೋಚನಾ ಚರ್ಚೆಯಲ್ಲಿ ನಿರ್ಧರಿಸಲಾಯಿತು ಎಂದು ಹೇಳಿದರು.ಅರಣ್ಯನಾಶ ಪ್ರದೇಶವು, ಹಚ್ಚ ಹಸಿರಿನ ಕಾಳಿನದಿ ಹಿನ್ನೀರಿಗೆ ಹೊಂದಿಕೊಂಡು ಉತ್ಕ್ರಷ್ಟ ಅರಣ್ಯ ಸಾಂಧ್ರತೆಯಿಂದ, ಸರಾಸರಿ ನಾಲ್ಕುವರೆ ಸಾವಿರ ಮೀಲಿ ಮೀಟರ್‍ನಷ್ಟು ಮಳೆ ಬಿಳುವ ಪ್ರದೇಶವಾಗಿದ್ದು ಮತ್ತು ಜೀವವೈವಿಧ್ಯ ಬೆಲೆಬಾಳುವ ಪ್ರದೇಶವಾಗಿದ್ದು ಅರಣ್ಯ ಖನಿಜಯುಕ್ತ ಮಣ್ಣು ಕಳ್ಳ ಸಾಗಾಟ ಮಾಡಿ ಸುಮಾರು 1 ಕೋಟಿ ಅರಣ್ಯ ಪರಿಸರ ಮೌಲ್ಯ ನಾಶದ ಪ್ರದೇಶ ಮತ್ತು ಬೆಲೆಬಾಳುವ ಗಿಡ-ಮರನಾಶಗೊಳಿಸಿ ಗುರುತರ ಅಪರಾಧ ಕೃತ್ಯ ಪತ್ಯಕ್ಷವಾಗಿ ಗೋಚರಿಸುತ್ತಿದ್ದರೂ ಅರಣ್ಯ ಅಧಿಕಾರಿಗಳು ಕಾನೂನಿನೊಂದಿಗೆ ಕಣ್ಣು ಮುಚ್ಚಾಲೆ ಆಡುತ್ತ ಕಣ್ಣಿದ್ದೂ ಕುರುಡಾಗಿದ್ದಾರೆಂದು ಅವರು ಖಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪರಿಸರವಾದಿಗಳ ಮೌನ: ಇತ್ತೀಚಿನ ದಶಕದಲ್ಲಿಯೇ ದೊಡ್ಡ ಪ್ರಮಾಣದ ಪರಿಸರನಾಶವಾಗಿದ್ದು ಪರಿಸರವಾದಿಗಳು ಧ್ವನಿ ಎತ್ತದಿರುವುದು ವಿಷಾದಕರ. ಕುಂಬ್ರಾಳ ಅರಣ್ಯನಾಶ ಚಿತ್ರಣವನ್ನ ಚರ್ಚೆಯಲ್ಲಿ ರವೀಂದ್ರ ನಾಯ್ಕ ಪ್ರದರ್ಶಿಸಿದರು. ಪರಿಸರವಾದಿಗಳು ಕುಂಬ್ರಾಳ ಅರಣ್ಯ ಹತ್ಯಕಾಂಡದ ಕುರಿತು ಸ್ಪಷ್ಟ ನಿಲುವನ್ನು ಪ್ರಕಟಿಸಲು ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
Be the first to comment