ರಾಜ್ಯ ಸುದ್ದಿಗಳು
ದೇವನಹಳ್ಳಿ
ದೇವನಹಳ್ಳಿಯ ಈಶಾನ್ಯ ವಿಭಾಗದ ಪೊಲೀಸರು ನಡೆಸಿರುವ ಕಾರ್ಯಾಚರಣೆಯಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, 101 ಕೆ.ಜಿ.ಗಾಂಜಾ ವಶಪಡಿಸಿಕೊಂಡಿದ್ದು, ನಾಲ್ಕು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ
ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವಿದೇಶದಿಂದ ಹಿಂದಿರುಗಿದ್ದ ಸಚಿನ್ ಎಂಬಾತನನ್ನು ಬಂಧಿಸಿದ್ದು, ಆತನೊಂದಿಗೆ ಆಟೋ ಚಾಲಕ ಆನಂದ್, ಸಾಗರ್ ಎಂಬುವವನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸಚಿನ್, ವಿದೇಶದಲ್ಲಿ ಇಂಟರ್ ಶಿಪ್ ಮುಗಿಸಿದ್ದು, ಪ್ರತಿಷ್ಠಿತ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ, ಅಪಘಾತದಲ್ಲಿ ಕಾಲು ಮುರಿದುಕೊಂಡು ವಿಮೆಯಿಂದ ಬಂದ ಹಣವನ್ನು, ಗಾಂಜಾ ಅಕ್ರಮ ಮಾರಾಟದ ಮೇಲೆ ಹೂಡಿಕೆ ಮಾಡಿಕೊಂಡಿದ್ದ.
ಆಂಧ್ರದ ವಿಶಾಖಪಟ್ಟಣಂ ನಿಂದ ಗಾಂಜಾ ತರಿಸಿ, ಆಟೋಚಾಲಕ ಆನಂದ್ ಜೊತೆ ಸೇರಿ ಬಿಜಿನೆಸ್ ಸ್ಟಾರ್ಟ್ ಮಾಡಿದ್ದ. ನಂದಿಬೆಟ್ಟ ರಸ್ತೆ ಚಾಕಲೇಟ್ ಹೌಸ್ ಶಾಪ್ ಮುಂಭಾಗದಲ್ಲಿ ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ದೇವನಹಳ್ಳಿ ಪೊಲೀಸರು ಸಚಿನ್ ಮತ್ತು ಆನಂದ್ ಇಬ್ಬರನ್ನೂ ಬಂಧಿಸಿ 40 ಲಕ್ಷ ಬೆಲೆಯ 101 ಕೆ.ಜಿ.ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಸಾಗರ್ ಎಂಬಾತ ತಪ್ಪಿಸಿಕೊಂಡಿದ್ದಾನೆ ಎಂದು ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ.
ಎಸಿಪಿ ಶ್ರೀನಿವಾಸ್, ಇನ್ ಸ್ಪೆಕ್ಟರ್ ರಮೇಶ್, ಸಬ್ ಇನ್ ಸ್ಪೆಕ್ಟರ್ ಶಿವಪ್ಪ ನಾಯ್ಕರ್, ಅಪರಾಧ ವಿಭಾಗದ ಸಂಕ್ರಪ್ಪ, ಮುಖ್ಯಪೇದೆ ಆನಂದ್, ಕಾನ್ ಸ್ಪೆಬಲ್ ಇಸ್ಮಾಯಿಲ್, ರವಿಪಾಟೀಲ್, ತಯಾಬ್, ಲಾಜರ್, ವೆಂಕಟೇಶ್ ತಂಡದಲ್ಲಿ ಇದ್ದರು.
Be the first to comment