ಜಿಲ್ಲಾ ಸುದ್ದಿಗಳು
ಹೊನ್ನಾವರ
ಹಾಡಗೇರಿಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿದ ಗೂಡಂಗಡಿ ತೆರವು. ಹೊನ್ನಾವರತಹಶೀಲ್ದಾರರಿಂದ 6 ಜನರ ಮೇಲೆ ದೂರು ದಾಖಲಾಗಿದೆ. ಹೊನ್ನಾವರ ತಾಲೂಕಿನ ಮುಕ್ಟಾ ಗ್ರಾಮದ ಸರ್ವೇ ನಂಬರ್ 69/ಬಿ ಸ್ಥಳದಲ್ಲಿನ ನವ ಆಶ್ರಯ ವಸತಿ ಯೋಜನೆಗಳಲ್ಲಿ ಮಂಜೂರಾದ ಫಲಾನುಭವಿಗಳಿಗೆ ಮಂಜೂರಾದ ನಿವೇಶನದಲ್ಲಿ ಅನಧಿಕೃತವಾಗಿ ಇಟ್ಟಿದ್ದ ಗೂಡಂಗಡಿ ತೆರವು ಮಾಡಲು ಹೋಗಿದ್ದಾಗ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಸಂಬಂಧ 6 ಜನರ ಮೇಲೆ ದೂರು ದಾಖಲಾಗಿದೆ.
ಹಾಡಗೇರಿ ಮಾರುತಿ ಸುಬ್ರಾಯ ನಾಯ್ಕ ಅನಧಿಕೃತವಾಗಿ ಬೇರೆಯವರಿಗೆ ಸರ್ಕಾರದಿಂದ ಮಂಜೂರಾದ ಫಲಾನುಭವಿಗಳಿಗೆ ಮೋಸ ಮಾಡಿ ಗೂಡಂಗಡಿ ಇಟ್ಟಿದ್ದರು ಹಲವು ಬಾರಿ ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ಕರವೇ ಗಜಸೇನೆ ತಹಶೀಲ್ದಾರರಿಗೆ ಮನವಿ ನೀಡಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದರು. ಈ ಹಿಂದೆಯೇ ಸರ್ವೇ ಕಾರ್ಯ ನಡೆಸಿ ನೋಟಿಸ್ ನೀಡಿದ್ದರೂ ಅಂಗಡಿ ತೆರವು ಮಾಡಿರಲಿಲ್ಲ.
ಪೋಲೀಸ್ ಬಂದೋಬಸ್ತ್ ನಡುವೆ ತಹಶೀಲ್ದಾರ್ ನಾಗರಾಜ್ ನಾಯ್ಕ, ಸಿ ಪಿ ಐ ಶ್ರೀಧರ್ ಎಸ್ ಆರ್, ಹಾಗೂ ಕಂದಾಯ ಇಲಾಖೆ ಪಂಚಾಯತ್ ರಾಜ್ ಸಿಬ್ಬಂದಿಗಳು ತೆರಳಿ ತೆರವು ಮಾಡುತ್ತಿರುವ ಸಂದರ್ಭದಲ್ಲಿ ಅಡ್ಡಿ ಪಡಿಸಿದ್ದರು.
ಅವಾಚ್ಯ ಶಬ್ಧಗಳಿಂದ ಬೈದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು ಈ ಪ್ರಕರಣವನ್ನು ಗ್ರಾಮದ ಮಾರುತಿ ಸುಬ್ರಾಯ ನಾಯ್ಕ , ರವಿ ಮಾದೇವ ನಾಯ್ಕ, ಶಂಕರ್ ಸುಬ್ರಾಯ ನಾಯ್ಕ, ನಿತ್ಯಾನಂದ ಈಶ್ವರ ನಾಯ್ಕ,ದಯಾನಂದ ಮಂಜುನಾಥ್ ನಾಯ್ಕ, ಇವರ ಮೇಲೆ ತಹಶೀಲ್ದಾರ್ ರು ಹೊನ್ನಾವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣವನ್ನು ಹೊನ್ನಾವರ ಪೋಲೀಸರು ಚುರುಕುಗಳಿಸಿ ಮಾರುತಿ ಸುಬ್ರಾಯ ನಾಯ್ಕ, ಶಂಕರ್ ಸುಬ್ರಾಯ ನಾಯ್ಕ, ರವಿ ಮಾದೇವ ನಾಯ್ಕ, ಇವರನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ನಾಪತ್ತೆಯಾದವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.
Be the first to comment