ಕರ್ನಾಟಕ ಪ್ರೆಸ್ ಕ್ಲಬ್ ಕುಮಟಾ ತಾಲೂಕ ಘಟಕದಿಂದ ರಕ್ತದಾನಿ ಶ್ರೀಧರ ಕುಮಟಾಕರ ಅವರಿಗೆ ಸನ್ಮಾನ ಮಾಡುವುದರ ಪತ್ರಿಕಾ ದಿನಾಚರಣೆ ಆಚರಣೆ

ವರದಿ:ಕುಮಾರ ನಾಯ್ಕ

ಕುಮಟಾ

ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಘಟಕ ಮತ್ತು ಕುಮಟಾ ತಾಲೂಕ ಘಟಕದಿಂದ ಇಂದು ಕುಮಟಾದಲ್ಲಿ ಸಮಾಜ ಸೇವಕರು ,ರಕ್ತದಾನಿಗಳು ಆದ ಶ್ರೀಧರ್ ಕುಮಟಾಕರ ಅವರನ್ನು ಸನ್ಮಾನಿಸುವುದರ ಮೂಲಕ ಪತ್ರಿಕಾ ದಿನಾಚರಣೆ ಆಚರಿಸಲಾಯಿತು.

CHETAN KENDULI

ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಕುಮಾರ ನಾಯ್ಕ ಅವರು ಮಾತನಾಡಿ ಶ್ರೀಧರ್ ಕುಮಾಟಕರ ಅವರು ಸಮಾಜ ಸೇವಕರಾಗಿ , ಮಹಾ ರಕ್ತದಾನಿಗಳಾಗಿ ಜಿಲ್ಲೆಯಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ ಮತ್ತು ಬಡವರ ಪಾಲಿಗೆ ರಕ್ತದಾನಿಯಾಗಿ ಅನೇಕ ಬಡ ಜೀವಗಳನ್ನು ಉಳಿಸುವುದರ ಮೂಲಕ ಸಮಾಜ ಸೇವೆಯಲ್ಲಿ ತಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇಂತಹ ಮಹಾನ್ ಸಮಾಜ ಸೇವಕರನ್ನು ಗುರುತಿಸಿ ಇಂದು ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಸಮಿತಿ ಮತ್ತು ಕುಮಟಾ ತಾಲೂಕ ಸಮಿತಿಯಿಂದ ಸನ್ಮಾನ ಮಾಡುವುದರ ಮೂಲಕ ಪತ್ರಿಕಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದು ತಿಳಿಸಿದರು. ಇದೆ ಸಂದರ್ಭದಲ್ಲಿ ಕುಮಟಾದ ಹೇಗೆಡೆಯಲ್ಲಿ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಜಿಲ್ಲೆಯ ನೇರ ನಡೆ ನುಡಿಯ ಪ್ರಾಮಾಣಿಕ ಪತ್ರಕರ್ತ ವಿನಾಯಕ ಭಟ್ ಬ್ರಹಮ್ಮುರೂ ಅವರಿಗೆ ಕರ್ನಾಟಕ ಪ್ರೆಸ್ ಕ್ಲಬ್ ಕುಮಟಾ ತಾಲೂಕ ಸಮಿತಿ ವತಿಯಿಂದ ಸಂತಾಪ ಸೂಚಿಸಲಾಯಿತು. ಸಮಾಜ ಸೇವಕರು , ಮಹಾ ರಕ್ತದಾನಿಗಳು ಆದ ಶ್ರೀಧರ ಕುಮಟಾಕರ ಅವರಿಗೆ ಅವರ ಕುಮಟಾ ಪ್ರವಾಸಿ ಮಂದಿರದ್ದಲ್ಲಿ ಫಲ ಪುಷ್ಪ ಮತ್ತು ಸರಣಿಕೆ ನೀಡಿ ಶಾಲು ಹೋದಿಸಿ ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಘಟಕ ಮತ್ತು ಕುಮಟಾ ತಾಲೂಕ ಘಟಕದ ವತಿಯಿಂದ ಜಿಲ್ಲಾಧ್ಯಕ್ಷ ಕುಮಾರ ನಾಯ್ಕ ಮತ್ತು ಕುಮಟಾ ತಾಲೂಕ ಅಧ್ಯಕ್ಷ ನಿಕೇತ್ ಶೇಟ್ ಅವರು ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ರಣಧೀರರ ವೇದಿಕೆಯ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಈರ ನಾಯ್ಕ ಭಟ್ಕಳ ಭಾಗವಹಿಸಿ ಮಾತನಾಡಿ ಪತ್ರಿಕಾ ದಿನಾಚರಣೆ ಅಂಗವಾಗಿ ಕರ್ನಾಟಕ ಪ್ರೆಸ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನ ಮಾಡುವುದರ ಮೂಲಕ ಪತ್ರಿಕಾ ದಿನಾಚರಣೆ ಆಚರಿಸುತ್ತಿರುವ ಕಾರ್ಯವನ್ನು ಹೊಗಳಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ರಕ್ತದಾನಿ ಸಮಾಜಸೇವಕ ಶ್ರೀದರ ಕುಮಟಾಕರ ಕರ್ಣಾಟಕ ಪ್ರೆಸ್ ಕ್ಲಬ್ ನನ್ನ ಸೇವೆಯನ್ನು ಗುರುತಿಸಿ ಸನ್ಮಾನ ಮಾಡಿರುವುದು , ಸಮಾಜದಲ್ಲಿ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಕುಮಾರ ನಾಯ್ಕ ಭಟ್ಕಳ, ಕುಮಟಾ ತಾಲೂಕ ಅಧ್ಯಕ್ಷ ನಿಕೇತ್ ಶೇಟ್ , ಪ್ರಧಾನ ಕಾರ್ಯದರ್ಶಿ ಪ್ರಜೋತ್, ಕಾರ್ಯದರ್ಶಿ ಸುಜಿತ್ ಗುನಗ, ಕರ್ನಾಟಕ ರಣಧೀರರ ವೇಧಿಕೆ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಈರ ನಾಯ್ಕ ಚೌತನಿ ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*