ಕನ್ನಡ ಬಾಹುಟ ಸುಟ್ಟಿದ್ದಕ್ಕೆ ಜಿಲ್ಲಾ ಕಸಾಪ ಖಂಡನೆ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಕನ್ನಡ ಬಾಹುಟವನ್ನು ಬಹಿರಂಗವಾಗಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತ ಪುಂಡರು ಬಹಿರಂಗವಾಗಿ ಸುಟ್ಟುಹಾಕಿರುವುದನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶಾಭಿಮಾನ, ಭಾಷಾಭಿಮಾನವನ್ನು ಪ್ರೀತಿಸುವ ನಾಡಲ್ಲಿ ಸಾಮರಸ್ಯ ಕದಡುವ ಕೆಲಸವನ್ನು ಕೆಲವರು ಮಾಡುತ್ತಿರುವುದು ಸರಿಯಲ್ಲ. ಇದನ್ನು ನೋಡಿಕೊಂಡು ಸರಕಾರ ಕೈಕಟ್ಟಿಕೊಂಡು ಕೂರಬಾರದು. ಇಂತಹ ನೀಚ ಕೃತ್ಯಕ್ಕೆ ಕೈಹಾಕಿದ್ದವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಕನ್ನಡ ನಾಡು ನುಡಿ ಜಲಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು.

CHETAN KENDULI

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರು ನಮ್ಮ ಕನ್ನಡ ಬಾಹುಟವನ್ನು ಸುಟ್ಟಿರುವವರ ಮುಖಕ್ಕೆ ಮಸಿ ಬಳಿದ ನಮ್ಮ ಕನ್ನಡ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿರುವುದು ಸೂಕ್ತವಾದ ಕ್ರಮವಲ್ಲ ಇದನ್ನು ಖಂಡಿಸುತ್ತೇವೆ. ನಾಡು-ನುಡಿಗೆ ಧಕ್ಕೆಯನ್ನುಂಟುಮಾಡುವ ಯಾರೇ ಆಗಲೀ ಅವರನ್ನು ಹೋರಾಟದ ಮೂಲಕ ಬುದ್ದಿ ಕಲಿಸಬೇಕಾಗುತ್ತದೆ. ನಮ್ಮ ಕನ್ನಡ ಕಾರ್ಯಕರ್ತರ ಮೇಲೆ ಪೊಲೀಸರ ದಬ್ಬಾಳಿಕೆ ಈ ಕೂಡಲೇ ನಿಲ್ಲಬೇಕು. ಸರಕಾರ ಎಚ್ಚೆತ್ತುಕೊಂಡು ಕನ್ನಡ ರಕ್ಷಣೆಗೆ ಮುಂದಾಗಬೇಕು. ಕನ್ನಡ ಬಾಹುಟವನ್ನು ಸುಟ್ಟುಹಾಕಿರುವ ಕಿಡಿಗೇಡಿಗಳಿಗೆ ಬಂಧಿಸುವಂತೆ ಸರಕಾರ ಮುಂದಾಗಬೇಕು. ಕನ್ನಡ ಕಾರ್ಯಕರ್ತರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲವಾದರೆ ಕನ್ನಡ ಪರ ಸಂಘಟನೆಗಳ ಮೂಲಕ ಉಗ್ರ ಹೋರಾಟಗಳನ್ನು ರೂಪಿಸಬೇಕಾಗುತ್ತದೆ ಎಂದು ಹೇಳಿದರು.

Be the first to comment

Leave a Reply

Your email address will not be published.


*