ಮಂಕಿ ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ – ಶಾಸಕ ಸುನಿಲ್ ನಾಯ್ಕ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಹೊನ್ನಾವರ ತಾಲ್ಲೂಕಿನ ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸಮುದಾಯ ಕೇಂದ್ರ ಮಂಜೂರು ಮಾಡಲು ಪ್ರಯತ್ನಿಸಲಾಗುತ್ತಿದ್ದು ಸದ್ಯದಲ್ಲಿಯೇ ಭಟ್ಕಳಕ್ಕೆ ಆಗಮಿಸಲಿರುವ ಆರೋಗ್ಯ ಸಚಿವ ಸುಧಾಕರರವರು ಅಧಿಕೃತ ಘೋಷಣೆ ಮಾಡಿಲಿದ್ದಾರೆ ಎಂದು ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕರವರು ತಿಳಿಸಿದರು.

CHETAN KENDULI

ಅವರು ಸೋಮವಾರ ಮಂಕಿ ಪಟ್ಟಣ ಪಂಚಾಯತದಲ್ಲಿ ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮಂಕಿ ಸರ್ಕಾರಿ ಆಸ್ಪತ್ರೆಗೆ ಒಬ್ಬರೇ ವೈದ್ಯಾಧಿಕಾರಿ. ಇದರಿಂದ ಸಾರ್ವಜನಿಕರಿಗೆ ತೀವ್ರ ಅನಾನುಕೂಲತೆ ಉಂಟಾಗುತ್ತಿತ್ತು.ಇಲ್ಲಿ ವೈದ್ಯಕೀಯ ಸೇವೆ ತುಂಬಾ ಅವಶ್ಯಕತೆ ಇದ್ದರಿಂದ ಆಸ್ಪತ್ರೆ ಮೇಲ್ದರ್ಜೆಗೆ ಎರಿಸಲು ಪ್ರಯತ್ನಿಸಲಾಗಿದೆ ಎಂದರು. ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ನೀಡುವಾಗ ಸರದಿ ಸಾಲಿನಲ್ಲಿ ನಿಂತವರಿಗೆ ಟೊಕನ್ ಗಳನ್ನು ಸರಿಯಾಗಿ ನೀಡದೆ ತಮಗೆ ಬೇಕಾದವರಿಗೆ ನೀಡಲಾಗುತ್ತದೆ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಮುಂಜಾನೆಯಿAದ ಸರದಿ ಸಾಲಿನಲ್ಲಿ ನಿಂತವರಿಗೆ ಮಾತ್ರ ಟೊಕನ್ ನೀಡಿ ಎಂದು ವೈದ್ಯಾಧಿಕಾರಿ ಡಾ ದಿನೇಶ ಆಚಾರ್ಯರವರಿಗೆ ಶಾಸಕರು ಸಭೆಯಲ್ಲಿ ಸೂಚಿಸಿದರು.
ಪಟ್ಟಣ ಪಂಚಾಯತಕ್ಕೆ ಹೊಸ ಕಟ್ಟಡ ಅವಶ್ಯಕತೆ ಇದ್ದು ಈ ಬಗ್ಗೆ ಮಂಜೂರಾತಿಗೆ ಪ್ರಸ್ತಾವನೆ ಕಳಿಸಲಾಗಿದೆ.ಘನತ್ಯಾಜ್ಯ ವಿಲೇವಾರಿ ನಿರ್ವಹಣಾ ಘಟಕ ಮಂಜೂರಾತಿ, ಬೀದಿ ದೀಪಗಳನ್ನು ನಿರ್ವಹಣೆ ಬಗ್ಗೆಯೂ ನಿರ್ಣಯಿಸಲಾಯಿತು.ಮಂಕಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸುಸಜ್ಜಿತ ಬಸ್‌ನಿಲ್ದಾಣ ನಿರ್ಮಾಣ ಹಾಗೂ ಕುಡಿಯುವ ನೀರಿನ ಸರಬರಾಜು ಮಾಡಲು ಯೋಜನೆ ರೂಪಗೊಳ್ಳುತ್ತಿದೆ ಎಂದು ಶಾಸಕರು ಸಭೆಯಲ್ಲಿ ಮಾಹಿತಿ ನೀಡಿದರು. ಆಡಳಿತಾಧಿಕಾರಿ ತಹಶೀಲ್ದಾರ ನಾಗರಾಜ ನಾಯ್ಕಡ ಉಪಸ್ಥಿತರಿದ್ದರು. ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಅಜಯ ಭಂಡಾಕರ ಸ್ವಾಗತಿಸಿ ಸಭೆಯ ನಿರ್ಣಯಗಳನ್ನು ಓದಿ ಹೇಳಿದರು. ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಪೋಲಿಸ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*