ಜಿಲ್ಲಾ ಸುದ್ದಿಗಳು
ಕೋಟ
ಕರ್ತವ್ಯ, ಸಾಧನೆಯೊಂದಿಗೆ ಮನುಷ್ಯನ ಜೀವನದಲ್ಲಿ ಸಂಸ್ಕಾರ ಅತೀ ಮುಖ್ಯ ಎಂದು ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಬಲೇಶ್ವರ ಎಂ.ಎಸ್ ಹೇಳಿದರು.ಬ್ರಹ್ಮಾವರ ತಾಲ್ಲೂಕಿನ ಗುಂಡ್ಮಿ ಭಟ್ಟಮಾಣಿ ಶಂಕರನಾರಾಯಣ ದೇವಸ್ಥಾನದ ಮಹಾವಿಷ್ಣು ವೈದಿಕ ಮಂದಿರದ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ವ್ಯವಸ್ಥೆಯನ್ನು ಆರಂಭಿಸುವುದು ಸುಲಭ. ಆದರೆ ಅದನ್ನು ಸುವ್ಯವಸ್ಥಿತವಾಗಿ ಇಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಬ್ರಾಹ್ಮಣನಾದವನು ನಿತ್ಯ ವಿಧಿಗಳನ್ನು ಮಾಡುವಲ್ಲಿ ಮತ್ತು ಕರ್ಮಾಂಗಗಳನ್ನು ಮಾಡಲು ಮಹಿಳೆಯರ ಶೃದ್ಧೆ ಕೂಡಾ ಮುಖ್ಯ ಎಂದರು.
ಗುಂಡ್ಮಿ ಭಗವತಿ ಅಮ್ಮನವರ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ಮಹಾಬಲ ಮಯ್ಯ ಅಧ್ಯಕ್ಷತೆ ವಹಿಸಿದ್ದರು.ಬೆಂಗಳೂರಿನ ಪುರೋಹಿತ ಗುಂಡ್ಮಿ ಅನಂತ ಪದ್ಮನಾಭ ಉಪಾಧ್ಯ, ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ, ಸದಸ್ಯ ಅನಂತ ಪದ್ಮನಾಭ ಐತಾಳ, ಬೆಂಗಳೂರಿನ ಉದ್ಯಮಿ ಶ್ರೀಧರ್ ಮಯ್ಯ, ನಿವೃತ್ತ ಉಪನ್ಯಾಸಕ ಎಂ.ರಾಮದೇವ ಐತಾಳ, ಕಟ್ಟಡ ನಿರ್ಮಾಣ ಸಮಿತಿಯ ಗೌರವ ಅಧ್ಯಕ್ಷ ಜಿ.ಸದಾಶಿವ ಮಯ್ಯ ಅಂಬಲಪಾಡಿ, ಚಂದ್ರಶೇಖರ ಉಪಾಧ್ಯ, ಗುಂಡ್ಮಿ ಶಿವಾನಂದ ಮಯ್ಯ,ರಾಮಚಂದ್ರ ಐತಾಳ ಚಂದ್ರಶೇಖರ ಶಾಸ್ತ್ರಿ, ಕಾರ್ತಿಕ್ ಅಡಿಗ ಮತ್ತಿತರರು ಇದ್ದರು.
Be the first to comment