2ತಿಂಗಳಿನಲ್ಲಿ ರಾಜ್ಯ ಸರ್ಕಾರವು ಅರಣ್ಯ ವಾಸಿಗಳ ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಜನಪ್ರತಿನಿಧಿ ಮನೆಗಳ ಮುಂದೆ ಧರಣಿ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

 

ಹೊನ್ನಾವರ 

CHETAN KENDULI

ಮುಂದಿನ 60 ದಿನಗಳಲ್ಲಿ ರಾಜ್ಯಸರಕಾರವು ಸುಫ್ರೀಂ ಕೋರ್ಟಿಗೆ ಅರಣ್ಯವಾಸಿಗಳ ಪರವಾಗಿ ಪ್ರಮಾಣ ಪತ್ರ ಸಲ್ಲಿಸದಿದ್ದಲ್ಲಿ ಪಕ್ಷಾತೀತವಾಗಿ ಹಾಜಿ ಮತ್ತು ಮಾಜಿ in ಶಾಸಕರ ಮನೆ ಮುಂದೆ ಧರಣಿ ಕುಳ್ಳಲಾಗುವುದು. ಈ ದಿಶೆಯಲ್ಲಿ ರಾಜ್ಯಾದ್ಯಂತ ಜನ ಜಾಗೃತೆ ಮಾಡಲು ಹೋರಾಟಗಾರರ ವೇದಿಕೆಯು ಬದ್ಧವಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅವರು ಇಂದು ಅರಣ್ಯವಾಸಿಗಳನ್ನು ಉಳಿಸಿ ಜಾಥದ ಅಂಗವಾಗಿ ಹೊನ್ನಾವರ ತಾಲೂಕಿನ ಮೂಡಗಣಪತಿ ದೇವಾಲಯದ ಸಭಾಂಗಣದಲ್ಲಿ ಜರುಗಿದ ಅರಣ್ಯವಾಸಿಗಳ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯಿದೆ ವೈಫಲ್ಯಕ್ಕೆ ಜನಪ್ರತಿನಿಧಿಗಳಲ್ಲಿರುವ ಕಾನೂನಿನ ಅಜ್ಞಾನ ಹಾಗೂ ಇಚ್ಛಾಶಕ್ತಿಯ ಕೊರತೆಯೆ ಕಾರಣವೆಂದು ಹೇಳುತ್ತಾ ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳಿಗೆ ಜಾಗೃತ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಹೇಳಿದರು.

 

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅರಣ್ಯ ಭೂಮಿ ಅತೀಕ್ರಮಣದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೋಚರೆಕರ ಮಾತನಾಡುತ್ತಾ ಹೋರಾಟ ಪ್ರಬಲಗೊಂಡಾಗ ಮಾತ್ರ ಸರಕಾರಕ್ಕೆ ಎಚ್ಚರಿಕೆ ಆಗುತ್ತದೆ. ಅರಣ್ಯ ಭೂಮಿ ಅರಣ್ಯವಾಸಿಗಳಿಗೆ ಅನಿವಾರ್ಯ. ಈ ದಿಶೆಯಲ್ಲಿ ಸರಕಾರದ ಮೇಲೆ ಹೋರಾಟದಿಂದಲೇ ಒತ್ತಡ ಹೇರಬೇಕೆಂದು ಕರೆ ನೀಡಿದರು. ಹೋರಾಟಗಾರರ ಹಿರಿಯ ಧುರೀಣ ಮಂಜುನಾಥ ನಾಯ್ಕ ಗೆರಸೊಪ್ಪ ಮಾತನಾಡುತ್ತಾ ಶಾಂತ ಸ್ವರೂಪದ ಹೋರಾಟಕ್ಕೆ ತಿಲಂಜಲಿ ನೀಡಿ, ಜನಪ್ರತಿನಿಧಿಗಳ ಮೇಲೆ ಒತ್ತಡ ತರುವ ಕಾರ್ಯ ಜರುಗಬೇಕೆಂದು ಅಗ್ರಹಿಸಿದರು.

ಸಭೆಯನ್ನು ಉದ್ದೇಶಿಸಿ ಅನಂತ ನಾಯ್ಕ ಹೇಗ್ಗಾರ್, ಯೋಗೇಶ ನಾಯ್ಕ ಉಪ್ಪೋಣಿ, ಪಿಟಿ ನಾಯ್ಕ, ಆರ್ ಹೆಚ್ ನಾಯ್ಕ ಜನಕೋಡಲು, ಪ್ರಶಾಂತ ನಾಯ್ಕ, ವಾಮನ ನಾಯ್ಕ, ಮಂಜುನಾಥ ಗೌಡ ಮುಂತಾದವರು ಮಾತನಾಡಿದರು.ವೇದಿಕೆಯ ಮೇಲೆ ರಿಜವಾನ್, ಸಲೀಂ, ರಾಮು ಮರಾಠಿ, ಗಣೇಶ ನಾಯ್ಕ, ವಿನೋಧ ನಾಯ್ಕ ಜನಕಡಲು ಮುಂತಾದರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ನಗರ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ ಮೇಸ್ತ ಪ್ರಾಸ್ತವಿಕ ಹಾಗೂ ಸ್ವಾಗತಿಸಿದರು.

Be the first to comment

Leave a Reply

Your email address will not be published.


*