ಜಿಲ್ಲಾ ಸುದ್ದಿಗಳು
ಹೊನ್ನಾವರ
ಅರಣ್ಯ ಭೂಮಿ ಹಕ್ಕಿಗೆ ಸಂಬAಧಿಸಿ ವ್ಯಾಪಕ ಜಾಗೃತ ಮೂಡಿಸುವ ಹಾಗೂ ಸರಕಾರದ ಅರಣ್ಯವಾಸಿ ಸಮಸ್ಯೆಗೆ ಸ್ಫಂದಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳನ್ನ ಉಳಿಸಿ ಜಾಥಕ್ಕೆ ಹೊನ್ನಾವರ ತಾಲೂಕಿನಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ಅರಣ್ಯವಾಸಿಗಳು ಪಾಲ್ಗೊಳ್ಳುವಿಕೆಯಿಂದ ಸರಕಾರ ಗಮನ ಸೆಳೆಯಲು ಯಶಸ್ವಿಯಾದವು.
ಅರಣ್ಯ ಭೂಮಿ ಹಕ್ಕು ಹೋರಾಟದ ವೇದಿಕೆ ಆಶ್ರಯದಲ್ಲಿ ಇಂದು ಹೊನ್ನಾವರ ತಾಲೂಕಿನ ಶರಾವತಿ ಸರ್ಕಲ್‌ನಿಂದ ಜಾಥವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.ರಾಜ್ಯ ಮಟ್ಟದ ಕಾರ್ಯಕ್ರಮದ ಅಂಗವಾಗಿ ಪ್ರಥಮ ಹಂತದಲ್ಲಿ ಜಿಲ್ಲೆಯಲ್ಲಿ ಹತ್ತುಸಾವಿರ ಕೀ.ಮೀ ಸಂಚರಿಸುವ ಹೋರಾಟ ವಾಹಿನಿ 500 ಹಳ್ಳಿಗಳಿಗೆ 30 ದಿನಗಳಲ್ಲಿ ತಿರುಗಾಟ ಮಾಡಲಿದ್ದು, ಅರಣ್ಯವಾಸಿಗಳ ಹಳ್ಳಿಗಳಲ್ಲಿ ಹೋರಾಟ ವಾಹಿನಿ ಮೂಲಕ ಕಾನೂನು ಜಾಗೃತೆ ಮೂಡಿಸುವ ಕಾರ್ಯಕ್ರಮವು ಇಂದು ಹೋನ್ನಾವರ ತಾಲೂಕಿನಲ್ಲಿ ಆರಂಭಗೊAಡವು.
ಜಾಥದ ನೇತ್ರತ್ವವನ್ನ ಹೊನ್ನಾವರ ತಾಲೂಕ ಅರಣ್ಯ ಭೂಮಿ ಸಾಗುವಳಿದಾರರ ಸಂಘದ ಅಧ್ಯಕ್ಷ ಚಂದ್ರಕಾAತ ಕೋಚರೆಕರ, ಜಿಲ್ಲಾ ಸಂಚಾಲಕ ರಾಮ ಮರಾಠಿ, ಹಿರಿಯ ಹೋರಾಟಗಾರ ಮಂಜುನಾಥ ನಾಯ್ಕ, ನಗರ ಅಧ್ಯಕ್ಷ ಸುರೇಶ ಮೇಸ್ತ, ಅನಂತ ನಾಯ್ಕ ಹೆಗ್ಗಾರ್, ಟಿಟಿ ನಾಯ್ಕ, ಆರ್ ಹೆಚ್ ನಾಯ್ಕ, ಪ್ರಶಾಂತ ನಾಯ್ಕ,ವಾಮನ್ ನಾಯ್ಕ, ಕೇಶವ ನಾಯ್ಕ, ಮೋಹನ ಮೇಸ್ತ, ದಾವುದ್ ಸಾಬ್, ರಜಾಕ್, ಗೋವಿಂದ ನಾಯ್ಕ ಹೋಸ್ಕೇರಿ ಹೊಂಡ, ಗಣೇಶ ನಾಯ್ಕ ಚಂದಾವರ, ವಿನೋದ ನಾಯ್ಕ ಯಲಕೊಟಗಿ, ದೇವರಾಜ ಅರಸ ವಿಚಾರ ವೇದಿಕೆಯ ಅಧ್ಯಕ್ಷ, ಅನಂತ ನಾಯ್ಕ ಹೇಗ್ಗಾರ್, ಕೇಶವ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.ಜಾಥಕ್ಕೆ ಚಾಲನೆ:ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯವಾಸಿಗಳನ್ನ ಉಳಿಸಿ-ಜಾಥಕ್ಕೆ ಸಂಘನೆಯ ಬಾವುಟವನ್ನ ಪ್ರದರ್ಶಿಸುತ್ತಾ ಚಾಲನೆ ನೀಡಿದರು.
Be the first to comment