ರಾಜ್ಯ ಸುದ್ದಿಗಳು
ದೇವನಹಳ್ಳಿ
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಭವನ ಎರಡನೇ ಮಹಡಿ ಮತ್ತು ಪಿಕಾರ್ಡ್ ಬ್ಯಾಂಕಿನ ಮೊದಲ ಮಹಡಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕ್ಷೇತ್ರಕ್ಕೆ ಕುಮಾರಸ್ವಾಮಿಯವರ ಆಗಮನಕ್ಕೆ ಕ್ಷೇತ್ರದ ಶಾಸಕ ಎಲ್.ಎನ್.ನಾರಾಯಣಸ್ವಾಮಿ, ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು. ಪಟ್ಟಣದ ಜೆಡಿಎಸ್ ಭವನಕ್ಕೆ ತೆರಳುತ್ತಿದ್ದಂತೆ ಹೂವಿನ ಸುರಿಮಳೆ ಹಾಕುವುದರ ಮೂಲಕ ಸ್ವಾಗತಿಸಿದರು. ಭವನದ ಎರಡನೇ ಮಹಡಿ ಉದ್ಘಾಟಿಸಿದರು. ತದನಂತರ ಪಿಕಾರ್ಡ್ ಬ್ಯಾಂಕಿನ ವಿಕಾಸಸೌಧದ ಮೊದಲ ಮಹಡಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ದೀಪ ಬೆಳಗಿದರು. ನಂತರ ಅವರಿಗೆ ಪಿಕಾರ್ಡ್ ಬ್ಯಾಂಕಿನ ವತಿಯಿಂದ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರು ಅಭಿನಂದಿಸಿದರು.
ಶಾಸಕ ಬಂಡೆಪ್ಪ ಕಾಶ್ಯನ್‌ಪುರ್ ಮಾತನಾಡಿ, ಎಲ್ಲಿ ಹೋದರೂ ಕುಮಾರಣ್ಣ ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಬರುತ್ತೆ, ಇವತ್ತು ನಾವೆಲ್ಲರೂ ಸೇರಿ ಬೀದರ್ ಹಿಡಿದುಕೊಂಡು ಚಾಮರಾಜನಗರ ತನಕ ಒಂದೇ ಒಂದೂ ಅದು ಜೆಡಿಎಸ್ ಕುಮಾರಣ್ಣ, ಸಾಲಮನ್ನಾ ಕಾರ್ಯಕ್ರಮ ಸುಮಾರು ೨೫ಸಾವಿರ ಕೋಟಿ ಅದರ ಸಹಕಾರ ಇಲಾಖೆಗೆ ಬಹಳಷ್ಟು ಮಹತ್ವದ ಸಾಲಮನ್ನಾ ಮಾಡಲಾಗಿದೆ ಎಂದು ಹೇಳಿದರು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಮಾತನಾಡಿ, ಈ ಕ್ಷೇತ್ರದಲ್ಲಿ ಶಾಸಕನಾಗಲು ಪ್ರೇರಣೆಯಾದಂತಹ ಬಿದಲೂರು ಚೆನ್ನಕೇಶವ ಸ್ವಾಮಿ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿದ್ದಎಚ್.ಡಿ.ಕುಮಾರಸ್ವಾಮಿಯವರ ಆರ್ಶೀವಾದ ಮತ್ತು ಮಾರ್ಗದರ್ಶನದಿಂದ ಈ ಕ್ಷೇತ್ರದಲ್ಲಿ ಎಲ್ಲಾ ವರ್ಗದ ಜನರ ಆಶೀರ್ವಾದವೇ ನನಗೆ ಶಾಸಕನಾಗಲು ಮುಖ್ಯಕಾರಣವಾಯಿತು. ಶಾಸಕನಾಗಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ. ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡಿದರೂ ಸಹ ಸಹಿಸಿಕೊಂಡು ನನ್ನ ಜನರ ಮತ್ತು ಕ್ಷೇತ್ರದ ಅಭಿವೃದ್ಧಿಯನ್ನೇ ಗುರಿಯನ್ನಾಗಿಸಿಕೊಂಡು ಹೋಗಿದ್ದೇನೆ. ಕುಮಾರಣ್ಣನವರು ನನಗೆ ಹಲವಾರು ರೀತಿಯಲ್ಲಿ ರಾಜಕೀಯದಲ್ಲಿ ಮುಂದುವರೆಯಲು ಸಾಕಷ್ಟು ಪ್ರೇರಣೆಯಾಗಿದ್ದಾರೆ. ೨೦೨೩ಕ್ಕೆ ರಾಜ್ಯದ ಮುಖ್ಯಮಂತ್ರಿಯಾದರೆ ಅದು ನಮ್ಮ ಕುಮಾರಣ್ಣನವರು ಎಂದರು.
ಈ ವೇಳೆಯಲ್ಲಿ ಜೆಡಿಎಸ್ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಪ್ರಕಾಶ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಬೂತ್ ಕಮಿಟಿ ವೀಕ್ಷಕ ಬೆಳ್ಳಿ ಲೋಕೇಶ್, ಅಡಖ್ ಕಮಿಟಿ ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ನಾರಾಯಣಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ, ಮುಖಂಡರಾದ ಆರ್.ಕೆ.ನಂಜೇಗೌಡ, ಕಾರಹಳ್ಳಿ ಶ್ರೀನಿವಾಸ್, ರಬ್ಬನಹಳ್ಳಿ ಪ್ರಭಾಕರ್, ಆಲೂರುದುದ್ದನಹಳ್ಳಿ ರಂಗಸ್ವಾಮಿ, ಹೊಸಹಳ್ಳಿ ಟಿ.ರವಿ, ಎಸ್.ಮಹೇಶ್, ದೇವರಾಜ್, ಮಂಜುನಾಥ್.ಆರ್, ಎನ್.ರವಿ, ವಿಶ್ವನಾಥಪುರ ಗ್ರಾಪಂ ಅಧ್ಯಕ್ಷೆ ಮಂಗಳ ನಾರಾಯಣಸ್ವಾಮಿ, ಸೇರಿದಂತೆ ಹಲವಾರು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಇದ್ದರು.
Be the first to comment