ಪಂಚಗಿರಿಧಾಮಗಳಿಗೆ ಗಣಿಗಾರಿಕೆ ಮಾರಕವಾಗಬಹುದೇ? ಪರಿಸರ ತಜ್ಞ ಡಾ.ಯಲ್ಲಪ್ಪ ರೆಡ್ಡಿ ಗಣಿಗಾರಿಕೆ ಸ್ಥಳಕ್ಕೆ ಭೇಟಿ ಪರಿಶೀಲನೆ | ಸಂರಕ್ಷಿಸುವಂತೆ ಆಗ್ರಹ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ಬೆಂಗಳೂರು 

ಇತಿಹಾಸ ಪ್ರಸಿದ್ಧ ನಂದಿಬೆಟ್ಟ ಸೇರಿದಂತೆ ಪಂಚಗಿರಿದಾಮಗಳು ಗಣಿಗಾರಿಯಿಂದಾಗಿ ಮುಂದೊಂದು ದಿನ ಮಾರಕವಾಗಬಹುದೇ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಸಂರಕ್ಷಿಸುವಂತೆ ಪ್ರತಿ ಪ್ರಜ್ಞಾವಂತ ನಾಗರೀಕರ, ಪರಿಸರ ಪ್ರೇಮಿಗಳ ಮತ್ತು ಹೋರಾಟಗಾರರ ಆಗ್ರಹವಾಗಿದೆ.ದೇವನಹಳ್ಳಿ ತಾಲೂಕಿನ ಕೊಯಿರ ಗ್ರಾಮವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇಲ್ಲಿರುವ ಕಲ್ಲಿಗೆ ತನ್ನದೇ ಆದಮಹತ್ವಇದೆ.ನಂದಿಬೆಟ್ಟಕ್ಕೆಹೊಂದಿಕೊಂಡಿರುವಂತೆ ಇರುವ ಪಂಚಗರಿಧಾಮಗಳು ಒಂದು ಕಡೆಯಾದರೆ, ಕೊಯಿರ ಬೆಟ್ಟವೂ ಸಹ ಹಂತ ಹಂತವಾಗಿ ನಶಿಸುವ ಹಂತ ತಲುಪುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ. ನಂದಿಬೆಟ್ಟದ ಸುತ್ತಲು ಬಫ್ಫರ್‌ಝೋನ್ ಮಾಡಬೇಕು. ಈ ಹಿಂದೆ ಕಣಿವೆ ನಾರಾಯಣಪುರ ಮತ್ತು ತೈಲಗೆರೆಯಲ್ಲಿ ಗಣಿಗಾರಿಕೆ ನಡೆಯುತ್ತಿತ್ತು. ಈಗಲೂ ಸಹ ನಡೆಯುತ್ತಿದೆ. ಕಳೆದ ಬಾರಿ ನಂದಿ ಗಿರಿಧಾಮದ ಭಾಗವಾಗಿರುವ ಬ್ರಹ್ಮಗಿರಿಯಲ್ಲಿ ಭೂಕುಸಿತ ಏಕೆ ಸಂಭವಿಸಿದೆ. ಗಣಿಗಾರಿಕೆಯಿಂದಾಗಿದೆಯೇ ಎಂಬ ಹಲವಾರು ಸಂಶಯಗಳ ಮಧ್ಯೆಯೂ ಯತೇಚ್ಛವಾಗಿ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಲೇ ಇದೆ. 

CHETAN KENDULI

ಒಂದು ಕಡೆ ಅಭಿವೃದ್ಧಿ ಮಂತ್ರ, ಮತ್ತೊಂದೆಡೆ ಪರಿಸರ ನಾಶ, ಒಂದು ಮಾತ್ರ ಸತ್ಯ ಎಲ್ಲಿ ಪರಿಸರ ನಾಶವಾಗುತ್ತದೆಯೋ ಅಲ್ಲಿ ವಿನಾಶ ಕಟ್ಟಿಟ್ಟ ಬುತ್ತಿ ಎಂಬುವುದು ಈಗಾಗಲೇ ಹಲವಾರು ತಜ್ಞರು ಸಾಬೀತುಗೊಳಿಸಿದ್ದಾರೆ. ತಾಲೂಕಿನ ಕೊಯಿರ ಬೆಟ್ಟವು ಸಮೃದ್ಧಿಯ ತಾಣವಾಗಿದ್ದು, ಹಲವು ಜೀವ ಪ್ರಭೇದಗಳ ವಾಸಸ್ಥಾನವಾಗಿದೆ. ಅರ್ಕಾವತಿ ಕ್ಯಾಚ್‌ಮೆಂಟ್‌ಅನ್ನು ಹೊಂದಿರುವ ಬೆಟ್ಟವಾಗಿದೆ. ಈಗಾಗಲೇ ಸರಕಾರ ಈ ಹಿಂದೆ ಇದು ಕ್ಯಾಚ್‌ಮೆಂಟ್ ಪ್ರದೇಶವೆಂದು ಘೋಷಿಸಿದ್ದಾರೆ. ಆದರೂ ಸಹ ಸರಕಾರದ ಕಣ್ಣು ಇತ್ತ ಗಮನಹರಿಸುತ್ತಿಲ್ಲ. ಗಣಿಗಾರಿಕೆಯಿಂದ ಇಲ್ಲಿನ ಪರಿಸರ ಹಾಳಾಗುವುದರ ಜತೆಗೆ ವಿನಾಶದತ್ತ ಎಡೆಮಾಡಿಕೊಡಬಹುದೇ ಎಂಬ ಸಂಶಯ ಪ್ರತಿಯೊಬ್ಬರಲ್ಲಿ ಘಾಡವಾಗಿ ಕಾಡತೊಡಗಿದೆ. ಕೊಯಿರ ಚಿಕ್ಕೇಗೌಡ ಮತ್ತು ಗ್ರಾಮಸ್ಥರು ಪ್ರಕೃತಿ ಉಳಿಸುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡು. ಸಂರಕ್ಷಣೆಗೆ ಹಲವಾರು ರೀತಿಯಲ್ಲಿ ಹೋರಾಟಗಳನ್ನು ಮಾಡುತ್ತಿದ್ದಾರೆ. ದೇವನಹಳ್ಳಿ ತಾಲೂಕಿನ ಕೊಯಿರ ಗ್ರಾಮದ ಕೊಯಿರ ಬೆಟ್ಟ, ತೈಲಗೆರೆ-ಮೀಸಗಾನಹಳ್ಳಿ ಗ್ರಾಮಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶ ಮತ್ತು ಪಂಚಗಿರಿಧಾಮಗಳ ಸ್ಥಳಕ್ಕೆ ಪರಿಸರ ತಜ್ಞ ಡಾ.ಯಲ್ಲಪ್ಪ ರೆಡ್ಡಿ ಮತ್ತು ನೀರಾವರಿ ಹೋರಾಟಗಾರ ಆಂಜನೇಯ ರೆಡ್ಡಿ ಭೇಟಿ ನೀಡಿ ಅಲ್ಲಿನ ವಾಸ್ತವಾಂಶದ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದಾರೆ. 

ಲೋಕಾದಲತ್ ಕಮಿಟಿ ಸದಸ್ಯ ಹಾಗೂ ಪರಿಸರ ತಜ್ಞ ಡಾ.ಯಲ್ಲಪ್ಪರೆಡ್ಡಿ ಮಾತನಾಡಿ, ಪ್ರಕೃತಿ ವಿನಾಶ ಮಾಡಬಹುದು ಆದರೆ ಪ್ರಕೃತಿಯನ್ನು ಸೃಷ್ಠಿಸಲು ಸಾಧ್ಯವಿಲ್ಲ. ಈ ಪ್ರದೇಶ ಪಂಚನದಿಗಳು ಹುಟ್ಟುವ ಸ್ಥಳವಾಗಿದ್ದು, ಅರ್ಕಾವತಿ ನದಿ ಮತ್ತು ದಕ್ಷಿಣ ಪಿನಾಕಿನಿ ಹರಿಯುವ ಪ್ರದೇಶ ಕೊಯಿರ ಆಗಿರುವುದರಿಂದ ಇದರ ಸಂರಕ್ಷಣೆ ಮತ್ತು ಪಂಚಗಿರಿಧಾಮಗಳ ಸಂರಕ್ಷಣೆಯಾಗಬೇಕಿದೆ. ಲೋಕಾದಲತ್‌ನಲ್ಲಿ ಏರ್‌ಪೋರ್ಟ್‌ನಿಂದ ೨೫ಕಿಮೀ ಅರಣ್ಯೀಕರಣಕ್ಕೆ ಒತ್ತುನೀಡಲು ಆದೇಶವಿದೆ. ಅದೇ ೨೫ಕಿಮೀ ಅಂತರದಲ್ಲಿಯೇ ಇವೆಲ್ಲವೂ ಸೇರಿಕೊಳ್ಳುತ್ತದೆ. ಸರಕಾರ ಇಂತಹ ಗಣಿಗಾರಿಕೆ ನಡೆಸುತ್ತಿರುವುದು ಎಷ್ಟರ ಮಟ್ಟಿಗೆ ಸರಿಯೆನಿಸುತ್ತದೆ. ನಂದಿಬೆಟ್ಟದ ಸುತ್ತಲು ಗಣಿಗಾರಿಕೆ ನಡೆದರೆ, ಭೂಪದರಗಳು ಅಲುಗಾಡಿ ಮುಂದೊಂದು ದಿನ ಅನಾಹುತವಾಗುವ ಮುನ್ನಾ ಎಚ್ಚೆತ್ತುಕೊಳ್ಳಬೇಕಿದೆ. ನಂದಿಬೆಟ್ಟದ ೫ಕಿಮೀ ಸುತ್ತಲು ಬಫರ್‌ಝೋನ್ ಆಗಬೇಕು. ಗಣಿಗಾರಿಕೆಯಿಂದ ಬ್ಲಾಸ್ಟಿಂಗ್ ಆಗಿರುವ ಸ್ಥಳಪರಿಶೀಲಿಸಿದ್ದೇನೆ. ಇಷ್ಟೊಂದು ಆಳವಾಗಿ ಹೋಗಿರುವುದು ಹೆಚ್ಚು ಸರಕಾರ ಇಂತಹವುಗಳನ್ನು ಸಂರಕ್ಷಿಸಲು ಮುಂದಾಗಬೇಕು ಎಂದು ಹೇಳಿದರು.

Be the first to comment

Leave a Reply

Your email address will not be published.


*