ಭಟ್ಕಳ ನ್ಯಾಯಾಲಯದಲ್ಲಿ ಬೆಂಕಿ ಅವಘಡ; ಹಲವು ದಾಖಲೆಗಳು , ಹೊಸ ಜೆರಾಕ್ಸ್ ಮಸೀನ, ಹೊಸ ಕಂಪ್ಯೂಟರ್ ಸುಟ್ಟು ಭಸ್ಮ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿ 

CHETAN KENDULI

ಭಟ್ಕಳ: ತಾಲೂಕಿನ ರಂಗಿನಕಟ್ಟೆಯಲ್ಲಿರುವ ಭಟ್ಕಳ ಜೆ.ಎಂ.ಎಫ್.ಸಿ. ನ್ಯಾಯಾಲಯ ಕಟ್ಟಡದಲ್ಲಿ ಶುಕ್ರವಾರ ಬೆಳಿಗ್ಗೆ ಅಗ್ನಿ ದುರಂತ ನಡೆದಿದ್ದು, ಹಲವು ದಾಖಲೆಗಳು ಸುಟ್ಟು ಕರಕಲಾಗಿದೆ.

ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದಾಗಿ ಬೆಂಕಿ ಹತ್ತಿಕೊಂಡಿದ್ದು, ನ್ಯಾಯಾಲಯದ ಮುಂದಿನ ಭಾಗಕ್ಕೆ ಸಂಪೂರ್ಣ ಬೆಂಕಿ ಆವರಿಸಿ, ದಾಖಲೆಗಳು ಹೊಸ ಕಂಪ್ಯೂಟರ್ , ಹೊಸ ಜೇರೋಕ್ಸ ಮಸೀನ ಪೂರ್ಣ ಸುಟ್ಟು ಕರಕಲಾಗಿದೆ.

ಬೆಳಿಗ್ಗೆ 4.15ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಾಗ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಹಲವು ತಾಸುಗಳ ಪ್ರಯತ್ನದಿಂದ ಬೆಂಕಿ ನಂದಿಸಿದ್ದಾರೆ.

ನ್ಯಾಯಾಲಯದಲ್ಲಿದ್ದ ಸಾವಿರಾರು ಕೇಸುಗಳ ಕಡತಗಳು ಅವಘಡದಲ್ಲಿ ಸುಟ್ಟುಹೋಗಿದ್ದು ಕಾಗದಕ್ಕೆ ಬೆಂಕಿ ಹೊತ್ತಿಕೊಂಡ ಕಾರಣ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿತ್ತು ಅಗ್ನಿ ಶಾಮಕದಳದ ಸಿಬ್ಬಂದಿ ಸಾಕಷ್ಟು ಕಡತಗಳನ್ನು ರಕ್ಷಿಸುವ ಪ್ರಯತ್ನ ಮಾಡಿದ್ದು ಸ್ಥಳಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ ಶಿವಪೂಜಿ,ಶಾಸಕ ಸುನಿಲ್ ನಾಯ್ಕ ಸಹಾಯಕ ಕಮಿಷನರ್ ಮಮತಾದೇವಿ , ತಹಸೀಲ್ದಾರ್ ರವಿಚಂದ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Be the first to comment

Leave a Reply

Your email address will not be published.


*