ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ ಸುಷ್ಮಾ ರಾಜಗೋಪಾಲ

ವರದಿ: ಕುಮಾರ ನಾಯ್ಕ, ಭಟ್ಕಳ

ಜಿಲ್ಲಾ ಸುದ್ದಿಗಳು

CHETAN KENDULI

ಶಿರಸಿ:

ನಗರದ ಹಳೆ ಅಗ್ನಿಶಾಮಕ ಕಟ್ಟಡದ ಹತ್ತಿರ ಮತ್ತು ಶಿರಸಿ ನಗರಸಭೆಯಿಂದ ಹೊರಡುವ ಕಸ ಸಂಗ್ರಹಣೆ ಪೌರ ಕಾರ್ಮಿಕರಿಗೆ ಇಂದು ಬೆಳಿಗ್ಗೆ ದಿ.ದೀಪಕ್ ಹೊನ್ನಾವರ ಅಭಿಮಾನಿ ಬಳಗದ ವತಿಯಿಂದ ಆಹಾರ ವಸ್ತುಗಳ ಕಿಟ್‍ನ್ನು ಕೆಪಿಸಿಸಿ ಮಾಜಿ ಕಾರ್ಯದರ್ಶಿ, ರಾಜ್ಯ ಮಹಿಳಾ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷೆ, ಶಿರಸಿ- ಸಿದ್ದಾಪುರ ಬ್ಲಾಕ್ ಉಸ್ತುವಾರಿ ಸುಷ್ಮಾ ರಾಜಗೋಪಾಲ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಷ್ಮಾ ರಾಜಗೋಪಾಲ್ ನಗರದಲ್ಲಿ ಕಸ ಕಡ್ಡಿಗಳನ್ನು ಮನೆಮನೆಯಿಂದ ಸಂಗ್ರಹಿಸಿ, ರಸ್ತೆ, ಗಟಾರಗಳನ್ನು ಗುಡಿಸಿ ಸ್ವಚ್ಛವಾಗಿಸಿ ನಗರದ ಸೌಂದರ್ಯವನ್ನು ಹಾಗೂ ನೈರ್ಮಲ್ಯವನ್ಮು ಕಾಪಾಡುತ್ತಿರುವ ತಮಗೆ ಧನ್ಯವಾದಗಳನ್ನು ಅರ್ಪಿಸುತ್ತ, ಕೋವಿಡ್ ಲಾಕ್ ಡೌನ್ ಸಮಯದಲ್ಲಿ ತಾವು ವಿಶ್ರಾಂತಿ ತೆಗೆದುಕೊಳ್ಳದೇ ಅವಿರತ ದುಡಿಯುತ್ತಿದ್ದೀರಿ. ನೀವು ನಮ್ಮ ಹೆಮ್ಮೆ. ನಿಮಗೆ ಸಣ್ಣದೊಂದು ಸಹಾಯ ಮಾಡುವ ಭಾಗ್ಯ ದೊರಕಿರುವುದು ನಮ್ಮ ಅದೃಷ್ಟ. ನಿಮಗೆ ಒಳ್ಳೆಯದಾಗಲಿ, ಎಂದಿಗೂ ನಿಮ್ಮ ಸಹಕಾರವಿರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ನಗರ ಸಭೆಯ ಸದಸ್ಯರು, ಮಾಜಿ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಮಾ ಉಗ್ರಾಣಕರ, ಸೂರ್ಯಪ್ರಕಾಶ ಹೊನ್ನಾವರ, ಕಾರ್ಯದರ್ಶಿ ಸತೀಶ ನಾಯ್ಕ ಮಧುರವಳ್ಳಿ, ಕೆಪಿಸಿಸಿ (ಮೀನುಗಾರ ವಿಭಾಗ)ಕಾರ್ಯದರ್ಶಿ ರಾಜು ಉಗ್ರಾಣಕರ್, ಶಂಕರ ಗುಡ್ಡದಮನೆ ಮುಂತಾದವರು ಇದ್ದರು.

Be the first to comment

Leave a Reply

Your email address will not be published.


*