ಜಿಲ್ಲಾ ಸುದ್ದಿಗಳು
ಕುಮಟಾ
ತಾಲೂಕಿನಲ್ಲಿರುವ ರೆಸಾರ್ಟ್, ಲಾಡ್ಜ್ ಗಳಲ್ಲಿ ಪ್ರವಾಸಿಗರ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಕ್ರಮವಹಿಸಬೇಕು ಎಂದು ಕುಮಟಾ ಪಿ.ಎಸ್.ಐ ಆನಂದಮೂರ್ತಿ ರೆಸಾರ್ಟ್ ಮಾಲಿಕರ ಸಭೆ ಕರೆದು ನೋಟೀಸ್ ನೀಡಿದರು.
ಈ ವೇಳೆ ಸುರಕ್ಷತೆಯ ಕುರಿತು ಮಾಹಿತಿ ನೀಡಿದ ಅವರು, ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾಡ್ಜ್, ಹೋಂ ಸ್ಟೇ ರೆಸಾರ್ಟ್ ಗಳನ್ನು ನಡೆಸುವವರು ಪ್ರವಾಸಿಗರಿಗೆ ಅಗತ್ಯ ಮಾಹಿತಿ ನೀಡಬೇಕು.ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಅಪರಾಧಗಳನ್ನು ತಡೆಯುವ ಮತ್ತು ಅಪರಾಧಗಳನ್ನು ಪತ್ತೆ ಹಚ್ಚುವ ದೃಷ್ಟಿಯಿಂದ ಪೋಲಿಸ್ ಠಾಣಾ ವ್ಯಾಪ್ತಿಯಿಂದ ನೀಡಲಾಗುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.ಸಕ್ಷಮ ಪ್ರಾಧಿಕಾರದಿಂದ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆದುಕೊಂಡಿದ್ದು, ಪರವಾನಿಗೆಯನ್ನು ಕಾಲಕಾಲಕ್ಕೆ ನಿಯಮಾನುಸಾರ ನವೀಕರಿಸತಕ್ಕದ್ದು.ಯಾವುದೇ ರೀತಿಯ ವೇಶ್ಯಾವಾಟಿಕೆ ಜೂಜಾಟ ಹಾಗೂ ಇತರೆ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು.ಪರವಾನಿಗೆ ಇಲ್ಲದೆ ಯಾವುದೇ ರೀತಿಯ ಮದ್ಯಪಾನ ಮಾಡಲು ಅವಕಾಶ ನೀಡಬಾರದು.ಯಾವುದೇ ರೀತಿಯ ಮಾಧಕ ವಸ್ತು ನಿದ್ರಾಜನಕ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಹಾಗೂ ಅವುಗಳ ಸೇವನೆಗೆ ಅವಕಾಶ ಕೊಡಬಾರದು. ಕಡ್ಡಾಯವಾಗಿ ತಮ್ಮ ಲಾಡ್ಜ್ , ಹೋಂ ಸ್ಟೇ, ರೆಸಾರ್ಟ್ ಇವುಗಳ ಪ್ರವೇಶದ್ವಾರ, ಕೌಂಟರ್, ಹಾಗೂ ಅವಶ್ಯಕತೆ ಇರುವ ಸ್ಥಳದಲ್ಲಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಿ ಅವು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು.ಜೊತೆಗೆ ಎಲ್ಲಾ ಅತಿಥಿಗಳ , ಪ್ರವಾಸಿಗರ ಪೋಟೋ , ಐ.ಡಿ.ಕಾರ್ಡ್, ಸಂಪೂರ್ಣ ವಿಳಾಸ , ಫೋನ್ ನಂಬರಗಳನ್ನು ಕಡ್ಡಾಯವಾಗಿ ಪಡೆದುಕೊಂಡು ಸಂಬಂಧಪಟ್ಟ ರಜಿಸ್ಟರನಲ್ಲಿ ನಮೂದಿಸಬೇಕು.
ಅತಿಥಿಗಳು ಬಂದ ಸಮಯ ಹಾಗೂ ತೆರಳುವ ಸಮಯವನ್ನು ಕಡ್ಡಾಯವಾಗಿ ರಿಜಿಸ್ಟರ್ ನಲ್ಲಿ ನಮೂದಿಸಬೇಕು.ಪ್ರತಿ ದಿನ ಬೆಳಗ್ಗೆ 11 ಗಂಟೆಗೆ ವಾಸವಿರುವ ಅತಿಥಿಗಳ ಮಾಹಿತಿಯನ್ನು ಪೊಲೀಸ್ ಠಾಣೆಗೆ | ನೀಡಬೇಕು.ವಿದೇಶಿಯರು ಬಂದಾಗ ಕಡ್ಡಾಯವಾಗಿ ಅವರ ವೀಸಾ , ಪಾಸ್ ಪೋರ್ಟಗಳನ್ನು ಪರಿಶೀಲಿಸಿ “ಸಿ” ಪಾರ್ಂ ನಲ್ಲಿ ಸಂಪೂರ್ಣ ಮಾಹಿತಿಯನ್ನು ತುಂಬಿ ಕೂಡಲೇ ಪೊಲೀಸ್ ಠಾಣೆಗೆ ಒಂದು ಪ್ರತಿಯನ್ನು ಸಲ್ಲಿಸಬೇಕು. ಯಾವುದೇ ಅಪ್ರಾಪ್ತ ( ಮೈನರ್ ) ಹುಡುಗ ಹುಡುಗಿಯರು ಬಂದರೆ ಅವರಿಗೆ ರೂಮನ್ನು ನೀಡಬಾರದು. ಅತಿಥಿಗಳಿಗೆ ಎದ್ದು ಕಾಣುವಂತೆ ಅವರ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿಗಳ ಫಲಕಗಳನ್ನು , ಹಾಗೂ ಬೀಚಗಳಲ್ಲಿ ತಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಇರುವ ಫಲಕಗಳನ್ನು ಎದ್ದು ಕಾಣುವಂತೆ ಅಳವಡಿಸಬೇಕು. ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಅಗತ್ಯವಾದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅಧಿಕಾರಿಗಳು ಕಾನೂನುಬದ್ಧವಾಗಿ ತಪಸಾಣೆ ನಡೆಸುವಾಗ ಎಲ್ಲಾ ರೀತಿಯ ಸಹಕಾರವನ್ನು ನೀಡಬೇಕು.ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಬಂದರೆ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.ತಂಗುವ ಅತಿಥಿಗಳಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿರಬೇಕು.ರಾತ್ರಿ ವೇಳೆ ಮಹಿಳೆಯರು ಬೀಚ್ ಗಳಲ್ಲಿ ತಿರುಗಾಡುವಾಗ ಅವರ ರಕ್ಷಣೆ ಕ್ರಮ ಕೈಗೊಳ್ಳಬೇಕು.ಈ ಎಲ್ಲಾ ನಿಯಮಗಳನ್ನು ಕಾನೂನುಬದ್ದವಾಗಿ ಕಾನೂನಿನ ಪ್ರಕಾರ ಪಾಲಿಸಲು ಬದ್ದರಾಗಿದ್ದು ಯಾವುದೇ ನಿಯಮಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳುಬೇಕು ಎಂದು ಅವರು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕಾ ಎಲ್ಲಾ ರೆಸಾರ್ಟ್, ಲಾಡ್ಜ್ , ಹೋಂ ಸ್ಟೇ ಮಾಲಿಕರು ಇದ್ದರು.
Be the first to comment