ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ನವೀನಗೆ ಮುಖ್ಯಮಂತ್ರಿ ಪದಕ

ವರದಿ: ಕುಮಾರ ನಾಯ್ಕ, ಭಟ್ಕಳ

ರಾಜ್ಯ ಸುದ್ದಿಗಳು

CHETAN KENDULI

ಜೋಯಿಡಾ:

ತಾಲೂಕಿನ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ನವೀನ ಅವರಿಗೆ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಮುಖ್ಯ ಮಂತ್ರಿ ಪದಕವನ್ನು ಜು.13 ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಲಾಯಿತು.


ಜೊಯಿಡಾ ತಾಲೂಕಿನ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ನವೀನ ಅವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಪ್ರಾಣ ರಕ್ಷಣೆ, ಆಸ್ತಿ ಪಾಸ್ತಿ ರಕ್ಷಣೆಯಲ್ಲಿ ಭಾಗಿಯಾಗಿದ್ದಕ್ಕೆ ಅವರ ಕರ್ತವ್ಯವನ್ನು ಗುರುತಿಸಿ ಮುಖ್ಯ ಮಂತ್ರಿಗಳು ಪದಕ ನೀಡಿ ಗೌರವಿಸಿದ್ದಾರೆ. ಇವರಿಗೆ ಮುಖ್ಯ ಮಂತ್ರಿ ಪದಕ ಸಿಕ್ಕಿರುವುದಕ್ಕೆ ಜೊಯಿಡಾ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.

Be the first to comment

Leave a Reply

Your email address will not be published.


*