ರಾಜ್ಯ ಸುದ್ದಿಗಳು
ಶಿರಸಿ:
ಅರಣ್ಯವಾಸಿಗಳ ಪರ ಸಂಘಟಿಸಿದ 30 ವರ್ಷದ ಹೋರಾಟ ಶ್ರೇಷ್ಠ ಮಟ್ಟದ್ದು. ಭೂಮಿ ಹಕ್ಕು ಅರಣ್ಯವಾಸಿಗಳಿಗೆ ಅವಶ್ಯ. ವಿಧಾನಸಭಾ ಅಧಿವೇಶನದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಸರಕಾರದ ಗಮನ ಸೆಳೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ , ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಫೆ. 22 ರಂದು ಬೆಂಗಳೂರಿನ ವಿಧಾನ ಸೌಧದ ವಿರೋಧ ಪಕ್ಷದ ನಾಯಕರ ಕಛೇರಿಯಲ್ಲಿ ಭೆಟ್ಟಿಯಾಗಿ 30 ವರ್ಷ ಅರಣ್ಯ ಭೂಮಿ ಹೋರಾಟ ಸ್ಮರಣ ಸಂಚಿಕೆ ಅರ್ಪಿಸಿದ ಸಂದರ್ಭದಲ್ಲಿ ನುಡಿದರು.
ಕಾನೂನು ಬಂದರೂ, ಅರಣ್ಯವಾಸಿಗಳು ಹಕ್ಕಿನಿಂದ ವಂಚಿತರಾಗುತ್ತಿರುವ ಕುರಿತು ಚಿಂತನೆ ಆಗಬೇಕಾಗಿರುವದು ಗಮನಾರ್ಹ ಅಂಶ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಆರ್ ವಿ ದೇಶಪಾಂಡೆ, ಜಿಲ್ಲಾ ಸಂಚಾಲಕರಾದ ಜಿ ಎಮ್ ಶೆಟ್ಟಿ ಉಪಸ್ಥಿತರಿದ್ದರು.
Be the first to comment