ಏರೋ ಸ್ಪೆಸ್‌ ತಂತ್ರಜ್ಞಾನಕ್ಕೆ ಬೆಂಗಳೂರು ಹೆಬ್ಬಾಗಿಲು: ಸಿಎಂ ವಿಶ್ವ ಮಾನ್ಯ ಸಂಸ್ಥೆಯಿಂದ ವಿಮಾನ ಎಂಜಿನ್‌ ತಯಾರಿಕೆ ಘಟಕ ಸ್ಥಾಪನೆ I ತಂತ್ರಜ್ಞಾನ ಆಧಾರಿತ ಕ್ಷೇತ್ರಕ್ಕೆ ಸರ್ಕಾರ ಬೆಂಬಲ

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು 

 

ದೇವನಹಳ್ಳಿ

CHETAN KENDULI

‘ವಿಶ್ವದಲ್ಲಿ ಎಲ್ಲಿಯೂ ಕಾಣಲು ಸಾಧ್ಯವಾಗದಂತೆ ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌&ಡಿ) ಘಟಕಗಳನ್ನು ಕರ್ನಾಟಕ ರಾಜ್ಯ ತನ್ನ ಒಡಲಿನಲ್ಲಿಟ್ಟಿಕೊಂಡಿದ್ದು, ಬೆಂಗಳೂರಿನಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಎಲ್ಲವನ್ನೂ ಸಾಧಿಸಲು ಅಗತ್ಯವಿರುವ ಅವಕಾಶಗಳಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.ತಾಲ್ಲೂಕಿನ ಏರೋಸ್ಪೇಸ್ ಪಾರ್ಕ್ ಕೈಗಾರಿಕೆ ಪ್ರದೇಶದಲ್ಲಿ ನೂತನ ಸ್ಯಾಫ್ರಾನ್ ಎಚ್ಎಎಲ್ ಏರ್‌ಕ್ರಾಫ್ಟ್ ಸಂಸ್ಥೆಯ 11 ಸಾವಿರ ಚದರ ಮೀಟರ್‌ ನಷ್ಟು ಬೃಹತಾದ ಎಂಜಿನ್ ನಿರ್ಮಾಣ ಘಟಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸೆಮಿ ಕಂಡೆಕ್ಟರ್‌ ಉತ್ಪಾದನಾ ಘಟಕ ಸ್ಥಾಪನೆಗೆ ಮೊದಲು ಎಂಓಯುಗೆ ಸಹಿ ಹಾಕಿದ್ದ ರಾಜ್ಯ ಕರ್ನಾಟಕ ಎಂದು ಸ್ಮರಿಸಿದರು.

ಬೆಂಗಳೂರಿನಲ್ಲಿರುವ ಯುವಕರ ದಂಡು,ಅವರ ಕೌಶಲ್ಯ, ಇಲ್ಲಿನ ಬೌದ್ಧಿಕ ಸಂಪತ್ತು ಹಾಗೂ ಅನುಕೂಲಕರ ವಾತಾವರಣ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿದ್ದು, ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರವೂ ಸಹ ಬೆಂಬಲ ನೀಡುತ್ತಿದೆ. ನವ ಭಾರತಕ್ಕೆ ನವೀನ ಕರ್ನಾಟಕ ನಿರ್ಮಾಣದತ್ತ ಸರ್ಕಾರ ಮುಂದೆ ಸಾಗುತ್ತಿದ್ದು, ಆತ್ಮ ನಿರ್ಭರ ಭಾರತ ಯೋಜನೆ ಗರಿಷ್ಠ ಅನುಷ್ಠಾನದಿಂದ ಮೇಡ್‌ ಇನ್‌ ಇಂಡಿಯಾಕ್ಕೆ ಬೆಂಬಲ ದೊರೆತಿದೆ ಎಂದು ತಿಳಿಸಿದರು.ಶೇ 60 ರಷ್ಟು ಉತ್ಪಾದನಾ ವಸ್ತುಗಳು ರಫ್ತಾಗುತ್ತಿದೆ. ಸರ್ಕಾರಿ ಸೌಮ್ಯದ ಎಚ್‌ಎಎಲ್‌ ಸಂಸ್ಥೆಯೂ ಭಾರತದ ಹೆಮ್ಮೆಯ ಪ್ರತೀಕವಾಗಿದೆ. ಕಳೆದ 80 ವರ್ಷಗಳಿಂದ ಈ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಎಚ್‌ಎಎಲ್‌ ಮಾಡಿದೆ. ‘ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿಯೂ ತಂತ್ರಜ್ಞಾನಾಧಾರಿತ ಉದ್ಯಮಗಳನ್ನು ಪ್ರೋತ್ಸಾಹಿಸಲಾಗಿದೆ. ಶ್ರೀ ಸಾಮಾನ್ಯರ ಜೀವನ ಸುಧಾರಣೆಯ ದೃಷ್ಟಿಯಲ್ಲಿ ಅನ್ವಯಿಕ ವಿಜ್ಞಾನಗಳನ್ನು ತಂತ್ರಜ್ಞಾನದ ಮಾರ್ಗದಲ್ಲಿ ಪರಿಣಾಮಕಾರಿಯಾಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.

ವಿಶ್ವದ ಮಹಾಯುದ್ಧಗಳ ನಂತರ ಮಿಲಿಟರಿ ಕಾರ್ಯಾಚರಣೆ ಹೊರತಾಗಿ ಸಾರ್ವಜನಿಕರು ಸಹ ವಿಮಾನಗಳನ್ನು ಬಳಸಲು ಸಾಕಷ್ಟು ಅವಕಾಶಗಳ ಈ ಕ್ಷೇತ್ರದಲ್ಲಿ ವೃದ್ಧಿಯಾಗಿದೆ. ಏರೋ ಸ್ಪೆಸ್‌ ಕ್ಷೇತ್ರದಲ್ಲಿ ಆಗಾಧವಾದ ವಿಫುಲ ಅವಕಾಶಗಳಿದ್ದು, ಎಚ್‌ಎಎಲ್‌ ಸಂಸ್ಥೆಗಿರುವ ಅನುಭವ ಮತ್ತು ಸ್ಯಾಫ್ರಾನ್ ಸಂಸ್ಥೆಯೊಂದಿಗಿನ 65 ವರ್ಷಗಳ ಸಹಯೋಗವು ವೈಮಾನಿಕ ಕ್ಷೇತ್ರದಲ್ಲಿ ಹೊಸದೊಂದು ನಿರೀಕ್ಷೆಯನ್ನು ಹುಟ್ಟಿಹಾಕಿದೆ ಎಂದರು.

ಎಚ್‌ಎಎಲ್‌ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್‌. ಮಾಧವನ್‌ ಮಾತನಾಡಿ, ‘ಎಚ್‌ಎಎಲ್‌ ಸಂಸ್ಥೆಯೂ ಏರೋ ಸ್ಪೆಸ್‌ ಕ್ಷೇತ್ರದಲ್ಲಿ ಹಲವಾರು ವೈಮಾನಿಕ ವಿಮಾನಗಳು ನಿರ್ಮಾಣದಲ್ಲಿ ಮುಖ್ಯ ಪಾತ್ರವಹಿಸಿದ್ದು, ದೇಶ ಸೇವೆಯಲ್ಲಿ ನಿರಂತರವಾಗಿದೆ. ಬೆಂಗಳೂರಿನ ಅಭಿವೃದ್ಧಿಗೂ ಅಳಿಲು ಸೇವೆ ಮಾಡಿದ್ದು, ಸಂಸ್ಥೆಯೊಂದಿಗೆ ಕಳೆದ 65 ವರ್ಷಗಳಿಂದ ವ್ಯವಹಾರಿಕ ಸಂಬಂಧ ಹೊಂದಿರುವ ಸ್ಯಾಫ್ರಾನ್ ಕಂಪನಿಯೊಂದಿಗೆ ಬೆಂಗಳೂರಿನಲ್ಲಿಯೇ ಹೊಸದೊಂದು ಉತ್ಪಾದನಾ ಘಟಕ ಸ್ಥಾಪನೆಯಾಗುತ್ತಿರುವುದು ಸಂತದ ವಿಷಯವಾಗಿದೆ. ಶೀಘ್ರದಲ್ಲಿಯೇ ತುಮಕೂರು ಹಾಗೂ ಮೈಸೂರಿನಲ್ಲಿಯೂ ಉತ್ಪಾದನಾ ಘಟಕಗಳನ್ನು ಎಚ್‌ಎಎಲ್‌ ಪ್ರಾರಂಬಿಸುತ್ತಿದೆ ಎಂದರು.ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಸಕ್ಕರೆ ಮತ್ತು ಜವಳಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ, ಸ್ಯಾಫರಾನ್ ಸಿಇಒಗಳಾದ ಆಲಿವರ್ ಆಂಡ್ರಿಸ್, ಜೀನ್ ಪಾಲ್ ಆಲರಿ ಸೇರಿದಂತೆ ಗಣ್ಯರು, ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.

ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್ ಕೈಗಾರಿಕೆ ಪ್ರದೇಶದಲ್ಲಿ ಸ್ಯಾಫ್ರಾನ್ ಎಚ್ಎಎಲ್ ಏರ್‌ಕ್ರಾಫ್ಟ್ ಸಂಸ್ಥೆಯ ನೂತನ ವಿಮಾನ ಎಂಜಿನ್ ನಿರ್ಮಾಣ ಘಟಕದ ಲೋಕಾರ್ಪಣೆಯ ವೇದಿಕೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಸಕ್ಕರೆ ಮತ್ತು ಜವಳಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ, ಸ್ಯಾಫರಾನ್ ಸಿಇಒಗಳಾದ ಆಲಿವರ್ ಆಂಡ್ರಿಸ್, ಜೀನ್ ಪಾಲ್ ಆಲರಿ ಉಪಸ್ಥಿತರಿದ್ದರು.ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್ ಕೈಗಾರಿಕೆ ಪ್ರದೇಶದಲ್ಲಿ ಸ್ಯಾಫ್ರಾನ್ ಎಚ್ಎಎಲ್ ಏರ್‌ಕ್ರಾಫ್ಟ್ ಸಂಸ್ಥೆಯ ನೂತನ ವಿಮಾನ ಎಂಜಿನ್ ನಿರ್ಮಾಣ ಘಟಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು. ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಸಕ್ಕರೆ ಮತ್ತು ಜವಳಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ, ಸ್ಯಾಫರಾನ್ ಸಿಇಒಗಳಾದ ಆಲಿವರ್ ಆಂಡ್ರಿಸ್, ಜೀನ್ ಪಾಲ್ ಆಲರಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*