ರಾಜ್ಯ ಸುದ್ದಿಗಳು
ಮಸ್ಕಿ:
ಅಭಿನಂದನ್ ಸಂಸ್ಥೆಯು ಆರಂಭಿಸಿದ “ಸಂಡೆ ಫಾರ್ ಸೋಶಿಯಲ್ ವರ್ಕ್” ಅಭಿಯಾನದ ಭಾಗವಾಗಿ ಈ ವಾರದ ಸೇವಾ ಕಾರ್ಯವನ್ನು ಪ್ರೀತಿಯ ಆಹ್ವಾನದ ಮೇರೆಗೆ ಹುಬ್ಬಳ್ಳಿಯ ಕಾಶಿ ವಿಶ್ವನಾಥ್ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಯಿತು. ದೇವಾಲಯದ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಈ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನವನ್ನು ಮುಂದುವರೆಸಲು ಮನವಿ ಮಾಡಲಾಯಿತು. ಇದೇ ಸಮಯದಲ್ಲಿ ಮಾತನಾಡಿದ ಕಾಶಿ ವಿಶ್ವನಾಥ್ ದೇವಸ್ಥಾನದ ಅಧ್ಯಕ್ಷರಾದ ಲಕ್ಮಣ್ ಅವರು ರಾಯಚೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಗಳ ಮೂಲಕ ಶ್ರೇಷ್ಠ ಸಂಸ್ಥೆಯಾಗಿ ರೂಪುಗೊಂಡಿರುವ ಅಭಿನಂದನ್ ಸಂಸ್ಥೆಯು ನಮ್ಮ ಕರೆಗೆ ಓಗೊಟ್ಟು ತಮ್ಮ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನವನ್ನು ಈ ದೇವಾಲಯದಲ್ಲಿ ಕೈಗೊಂಡಿರುವದು ಸಂತಸದ ಸಂಗತಿಯಾಗಿದೆ ಇದರಿಂದ ನಮಗೂ ಸಹ ನಮ್ಮ ಜೀವನದಲ್ಲಿ ಬರುವ ರವಿವಾರವನ್ನು ಸಮಾಜ ಸೇವೆಗಾಗಿ ಮೀಸಲು ಇಡಲು ಪ್ರೇರಣೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ವಿಲಾಸ ಕಣ್ಣೂರು, ಸುನೀಲ್ ಗುಮಾಸ್ತೇ, ರಂಗಸ್ವಾಮಿರಾವ್, ತಿರುಮಣ್ನನವರ್, ಹುಬ್ಬಳ್ಳಿ ಸಮಾಜ ಸೇವಕಿಯರಾದ ತಾರಾಮತಿ ವಾಸಪ್ಪನವರ್, ಹಾಗೂ ಶಂಕ್ರಮ್ಮ ಕಲಾದಗಿ, ಗೀತಾ ಕಲಾದಗಿ, ಬಸವರಾಜ್ ಕಲಾದಗಿ, ಮಂಜು ರೋಣದ, ಲಕ್ಕಮ್ಮ, ಹಾಗೂ ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಮತ್ತು ಇತರರು ಉಪಸ್ಥಿತರಿದ್ದರು.
Be the first to comment