ಜಿಲ್ಲಾ ಸುದ್ದಿಗಳು
ಕುಮಟಾ
ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ೧೪೯೩ನೇ ಮದ್ಯ ವರ್ಜನ ಶಿಬಿರಕ್ಕೆ ಚಾಲನೆ ದೊರೆಯಿತು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮತ್ತು ಮದ್ಯ ವರ್ಜನ ವ್ಯವಸ್ಥಾಪನಾ ಸಮಿತಿ, ಕೋನಳ್ಳಿಯ ಸಂಯುಕ್ತಾಶ್ರಯದಲ್ಲಿ ಕುಮಟಾ ತಾಲೂಕಿನ ಕೋನಳ್ಳಿಯ ಶ್ರೀ ವನ ದುರ್ಗಾ ಸಭಾಭವನದಲ್ಲಿ ಆಯೋಜಿಸಲಾದ ೧೪೯೩ನೇ ಮದ್ಯ ವರ್ಜನ ಶಿಬಿರಕ್ಕೆ ಬಿಜೆಪಿ ಮುಖಂಡ ಡಾ. ಜಿ ಜಿ ಹೆಗಡೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮದ್ಯ ವ್ಯಸನ ಎಂಬುದು ಸಾಮಾಜಿಕ ಪಿಡುಗಾಗಿದ್ದು, ಈ ದುಷ್ಚಟವನ್ನು ಹೊಡೆದೊಡಿಸಿ, ಸ್ವಥ ಸಮಾಜ ನಿರ್ಮಾಣ ಮಾಡಬೇಕೆಂಬುದು ಪೂಜ್ಯರಾದ ವಿರೇಂದ್ರ ಹೆಗಡೆಯವರ ಕನಸಾಗಿದ್ದು, ಈ ಕನಸನ್ನು ಸಾಕಾರಗೊಳಿಸಲು ನಾವೆಲ್ಲ ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಶಂಕರ ಶೆಟ್ಟಿ ಪಾಲ್ಗೊಂಡಿದ್ದರು. ಅತಿಥಿಯಾಗಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ, ಕೂಜಳ್ಳಿ ಗ್ರಾಪಂ ಅಧ್ಯಕ್ಷ ಗಜಾನನ ನಾಯ್ಕ ಪಾಲ್ಗೊಂಡಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಉಪನ್ಯಾಸಕ ಪ್ರೊ. ಎಂ ಜಿ ನಾಯ್ಕ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಮಟಾ ಎಪಿಎಂಸಿ ಸದಸ್ಯ ಸುಬ್ಬಯ್ಯ ನಾಯ್ಕ, ಪುರಸಭೆ ಮಾಜಿ ಸದಸ್ಯ ಯೋಗಾನಂದ ಗಾಂಧಿ, ಪ್ರಮುಖರಾದ ಮಹೇಶ ನಾಯಕ, ಸತೀಶ ಶೇಟ್, ಸುರೇಶ ನಾಯ್ಕ, ಒಕ್ಕೂಟದ ಅಧ್ಯಕ್ಷೆ ಭಾಗೀರಥಿ ನಾಯ್ಕ ಇತರರಿದ್ದರು.
ಯೋಜನಾಧಿಕಾರಿ ನಾಗರಾಜ ನಾಯ್ಕ ಸ್ವಾಗತಿಸಿದರು. ಮಾರುತಿ ನಾಯ್ಕ ಪ್ರಾರ್ಥಿಸಿದರು. ತಿಮ್ಮಯ್ಯ ನಾಯ್ಕ ಪ್ರಾಸ್ತಾವಿಸಿದರು. ನೇತ್ರಾವತಿ ಮತ್ತು ಸುಬ್ರಾಯ ನಿರೂಪಿಸಿದರು. ಶಂಕರ ಅಡಿಗುಂಡಿ ವಂದಿಸಿದರು. ನವ ಜೀವನ ಸದಸ್ಯರು, ವಿಪತ್ತು ನಿರ್ವಹಣಾ ಸದಸ್ಯರು ಈ ಶಿಬಿರಕ್ಕೆ ಸಹಕಾರ ನೀಡಿದ್ದರು.
Be the first to comment