ಎ.ಎಸ್.ಪಾಟೀಲರು ಕೇವಲ ಹಣ ಲೂಟಿಕೋರರಲ್ಲಾ ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ಮೋಸಾನೂ ಮಾಡಿದ್ದಾರೆ: ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ್ ನಡಹಳ್ಳಿ ಆರೋಪ…!!!

ವರದಿ: ಚೇತನ ಕೆಂದೂಳಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

ಮುದ್ದೇಬಿಹಾಳ ಮತಕ್ಷೇತ್ರದ ಪ್ರತಿಯೊಂದು ಸರಕಾರಿ ಇಲಾಖೆಯಲ್ಲಿ ಹಾಗೂ ಗುತ್ತಿಗೆದಾರರಿಂದ ಲೂಟಿ ಹೊಡೆದ ಹಣವನ್ನೇ ಸಿರಿ,ಕುಬಸಾ,ಖರ್ಚಿಗೆ ಹಣ ಕೊಡುತ್ತಿದ್ದು ಯಾರೂ ದುಡನ್ನು ಬೇಡಾ ಎನ್ನಬೇಡಿ. ಅವರು ನೀಡುವ ಹಣ ಜನಸಾಮಾನ್ಯರದೇ ಎಂದು ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದಲ್ಲಿ ವಿವಿಧ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಯುವಕರನ್ನು ಬರಮಾಡಿಕೊಂಡು ಮಾತನಾಡಿದ ಅವರು, ಕೇವಲ ಗುತ್ತಿಗೆದಾರರು, ಸರಕಾರಿ ಅಧಿಕಾರಿಗಳನಷ್ಟೇ ಅಲ್ಲದೇ ಪೂಜ್ಯರಾದ ಶಿವಕುಮಾರ ಸ್ವಾಮಿಗಳ ಹೆಸರಿನಲ್ಲಿಯೂ ಎ.ಎಸ್.ಪಾಟೀಲ ತಗಳ ವ್ಯವಹಾರ ಮಾಡಿದ್ದು ಎಲ್ಲಿರಿಗೂ ಗೊತ್ತಿದೆ ಎಂದು ಅವರು ಹೇಳಿದರು.



ಶಿವಕುಮಾರ್ ಸ್ವಾಮಿಗಳ ಹೆಸರಿನಲ್ಲಿ ದೊಡ್ಡ ಆಸ್ಪತ್ರೆ ಮಾಡುತ್ತೇನೆ ಎಂದು ಅಡಿಗಲ್ಲು ಮಾಡಿ ಈಗಾ ಅದೇ ಜಾಗದಲ್ಲಿ ಫಾರ್ಮ್ಯಾಹೌಸ್ ಮಾಡಿಕೊಂಡಿದ್ದು ಇದರ ಬಗ್ಗೆ ಎ.ಎಸ್.ಪಾಟೀಲ್ ಎಲ್ಲಿಯೂ ಮಾತನಾಡುತ್ತಿಲ್ಲಾ. ಇದರ ಬಗ್ಗೆ ಕೇಳಿದ್ರೆ ನನ್ನ ವಿರುದ್ಧ ಅಪಪ್ರಚಾರ ಮಾಡುತಿದ್ದರೆ ಎನ್ನುತ್ತಾರೆ. ಯಾರು ಯಾವುದರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅಂದ್ರೆ ಅವತ್ತು ಆಸ್ಪತ್ರೆ ಕಟ್ಟಿಸುತ್ತೇನೆ ಅಂದಿದ್ದು ಸುಳ್ಳಾ ಎಂದು ಅವರು ಕೇಳಿದರು.

ಇದೇ ಸಂದರ್ಭದಲ್ಲಿ ತಾಲೂಕಾ ಬ್ಲಾಕ್ತಾ ಕಾಂಗ್ರೆಸ್ಲೂ ಅಧ್ಯಕ್ಷ ಗುರು ತಾರನಾಳ, ಪುರಸಭೆ ಸದಸ್ಯ ವೀರೇಶ ಹಾಡಲಗೇರಿ, ಯುವ ಮುಖಂಡ ಶರಣು ಚಲವಾದಿ ಸೇರಿದಂತೆ ತಾಲೂಕಿನ ಬೀದರಕುಂದಿ, ಮಾದಿನಾಳ, ಶಿರೋಳ ಸೇರಿದಂತೆ ಇತರೆ ಗ್ರಾಮದ ಯುವಕರು ಮುಖಂಡರಿದ್ದರು.

Be the first to comment

Leave a Reply

Your email address will not be published.


*