ಬಾಗಲಕೋಟೆ: ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಗುರುವಾರದಂದು 49 ಅಭ್ಯರ್ಥಿಗಳಿಂದ ಒಟ್ಟು 62 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್‌ಕುಮಾರ ತಿಳಿಸಿದ್ದಾರೆ.

ಬಾಗಲಕೋಟ :ಮುಧೋಳ ಕ್ಷೇತ್ರದಿಂದ 5, ತೇರದಾಳ ಕ್ಷೇತ್ರದಿಂದ 17, ಜಮಖಂಡಿ ಕ್ಷೇತ್ರದಿಂದ 7, ಬೀಳಗಿ ಕ್ಷೇತ್ರದಿಂದ 8, ಬಾದಾಮಿ ಕ್ಷೇತ್ರದಿಂದ 10, ಬಾಗಲಕೋಟೆ ಕ್ಷೇತ್ರದಿಂದ 9 ಹಾಗೂ ಹುನಗುಂದ ಕ್ಷೇತ್ರದಿಂದ 6 ನಾಮಪತ್ರಗಳು ಸೇರಿ ಒಟ್ಟು 62 ನಾಮಪತ್ರಗಳು ಸಲ್ಲಿಕೆಯಾಗಿವೆ.

 

ಮುಧೋಳ ಕ್ಷೇತ್ರದಿಂದ ಪಕ್ಷೇತರದಿಂದ ಬಂಡಿವಡ್ಡರ ಸತೀಶ ಚಿನ್ನಪ್ಪ 2, ಜೆಡಿಎಸ್ ಪಕ್ಷದಿಂದ ಧರ್ಮರಾಜ ವಿಠಲ ದೊಡಮನಿ, ಕರ್ನಾಟಕ ಜನತಾ ಪಕ್ಷದಿಂದ ಸಾಗರ ರೊಡ್ಡಪ್ಪನವರ, ರಿಪಬ್ಲಿಕ್ ಪಕ್ಷದಿಂದ ಮಾದೇವ ಗುರಪ್ಪ ಮೇತ್ರಿ ತಲಾ 1 ನಾಮಪತ್ರ ಸಲ್ಲಿಸಿದ್ದಾರೆ.

 

ತೇರದಾಳ ಕ್ಷೇತ್ರದಿಂದ ಪಕ್ಷೇತರದಿಂದ ರಾಜಶೇಖರ ಬೀಳಗಿ 1, ಕಾಂಗ್ರೆಸ್ ಪಕ್ಷದಿಂದ ಸಿದ್ದಪ್ಪ ರಾಮಪ್ಪ ಕೊಣ್ಣೂರ 3, ಪಕ್ಷೇತರದಿಂದ ರಾಜೇಂದ್ರ ಅಂಬಲಿ 1, ಬಿಜೆಪಿ ಪಕ್ಷದಿಂದ ಸಿದ್ದು ಸವದಿ 1, ಕಾಂಗ್ರೇಸ್ ಪಕ್ಷದಿಂದ ಮತ್ತು ಪಕ್ಷೇತರದಿಂದ ಪದ್ಮಜೀತ ಅಪ್ಪಾಸಾಹೇಬ ನಾಡಗೌಡ ಪಾಟೀಲ ತಲಾ 1, ಪಕ್ಷೇತರದಿಂದ ಮತ್ತು ಕಾಂಗ್ರೇಸ್ ಪಕ್ಷದಿಂದ ಅಪ್ಪಾಸಾಹೇಬ ಬೆಳಗಲಿ ತಲಾ 1, ಪಕ್ಷೇತರದಿಂದ ಅಂಬಾದಾಸ್ ಕಾಮೂರ್ತಿ, ಅಡಿವೆಪ್ಪ ಉದ್ದಪ್ಪಗೋಳ ತಲಾ 1, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದಿಂದ ಅಬ್ಬಾಸಲಿ ಮುಲ್ಲಾ 1, ಪಕ್ಷೇತರದಿಂದ ಶಿವಾನಂದ ಹ್ಯಾಗಾಡಿ, ಬಸಪ್ಪ ಬಾಳಿಕಾಯಿ ತಲಾ 1, ಆಮ್ ಆದ್ಮ ಪಕ್ಷದಿಂದ ಈರಮ್ಮ ಹಲಗಿಗೌಡರ, ಜೆಡಿಎಸ್ ಪಕ್ಷದಿಂದ ಸುರೇಶ ಮಡಿವಾಳರ 1 ನಾಮಪತ್ರ ಸಲ್ಲಿಸಿದ್ದಾರೆ.

 

ಬಾಗಲಕೋಟೆ ಕ್ಷೇತ್ರದ ಪಕ್ಷೇತರದಿಂದ ಮೊಹಸೀನಖಾನ್ ಖಾಜಿ 1, ಕಾಂಗ್ರೆಸ್ ಪಕ್ಷದಿಂದ ಹುಲ್ಲಪ್ಪ ಮೇಟಿ 2, ಪಕ್ಷೇತರದಿಂದ ನಾಗರಾಜ ಕಲ್ಲಕುಟಗಾರ 1, ಎಂ.ಎಸ್.ಹಿರೇಮಠ 1, ಕರ್ನಾಟಕ ಜನತಾ ಪಕ್ಷದಿಂದ ಪ್ರಕಾಶ ಸರನಾಯಕ 2, ರೈತ ಭಾರತ ಪಕ್ಷದಿಂದ ಮುತ್ತಪ್ಪ ಹಿರೇಕುಂಬಿ 1, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಬಾಬುಶಾ ರೊಳ್ಳಿ 1 ನಾಮಪತ್ರ ಸಲ್ಲಿಸಿದ್ದಾರೆ.

 

ಹುನಗುಂದ ಕ್ಷೇತ್ರದ ಪಕ್ಷೇತರದಿಂದ ಮಾಳಪ್ಪ ರಾಮವಾಡಗಿ, ಸಿದ್ದಪ್ಪ ತುಡುಬಿನಾಳ ತಲಾ 1, ಜೆಡಿಎಸ್ ಪಕ್ಷದಿಂದ ಶಿವಪ್ಪ ಬೋಳಿ 1, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಷಡಕ್ಷರಯ್ಯ ನವಲಿಹಿರೇಮಠ 1, ಪಕ್ಷೇತರದಿಂದ ಶಿವನಗೌಡ ಮೆಣಸಗಿ, ಬಸನಗೌಡ ಹಿರೇಗೌಡರ ತಲಾ 1 ನಾಮಪತ್ರ ಸಲ್ಲಿಸಿದ್ದಾರೆ.

 

ಜಮಖಂಡಿ ಮತಕ್ಷೇತ್ರದಿಂದ ಪಕ್ಷೇತರದಿಂದ ಕಮರುದ್ದೀನ ಮುರಸಲ 1, ಕಾಂಗ್ರೇಸ್ ಪಕ್ಷದಿಂದ ಆನಂದ ಸಿದ್ದು ನ್ಯಾಮಗೌಡ 2, ಪಕ್ಷೇತರದಿಂದ ಗುಡುಸಾಬ ಇಬ್ರಾಹಿಮಸಾಬ ಹ್ಯಾಳಕರ 1, ಜೆಡಿಎಸ್ ಪಕ್ಷದಿಂದ ಯಾಕುಬ ಕಪಡವಾಲೆ 1, ಹಿಂದುಸ್ಥಾನ ಜನತಾ ಪಕ್ಷದಿಂದ ದುರ್ಗಪ್ಪ ಮಹಾದೇವ ಭಜಂತ್ರಿ 1, ಬಹುಜನ ಸಮಾಜ ಪಕ್ಷದಿಂದ ಶಿವಾನಂದ ಬಬಲೇಶ್ವರ 1 ನಾಮ ಪತ್ರ ಸಲ್ಲಿಸಿದ್ದಾರೆ.

 

ಬೀಳಗಿ ಕ್ಷೇತ್ರದ ಜೆಡಿಎಸ್ ಪಕ್ಷದಿಂದ ರುಕುಮುದ್ದಿನ ಸೌದಾಗರ 2, ಪಕ್ಷೇತರದಿಂದ ಯಲ್ಲಪ್ಪ ಹೆಗಡ್ಯಾರ 1, ಬಿಜೆಪಿ ಪಕ್ಷದಿಂದ ಸಂಗಮೇಶ ನಿರಾಣಿ 1, ಪಕ್ಷೇತರದಿಂದ ಕೃಷ್ಣ ಕಾಳೆ 1, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ರಾಜಕುಮಾರ ನ್ಯಾಮಗೌಡ 1, ಜೆಡಿಎಸ್ ಪಕ್ಷದಿಂದ ಪ್ರಕಾಶ ನಾಯ್ಕರ 1, ಪಕ್ಷೇತರದಿಂದ ಲಿಂಗನಗೌಡ ಚಂದ್ರಶೇಖರ ಪಾಟೀಲ 1 ನಾಮಪತ್ರ ಸಲ್ಲಿಸಿದ್ದಾರೆ.

 

ಬಾದಾಮಿ ಕ್ಷೇತ್ರದಿಂದ ಕರ್ನಾಟಕ ಜನತಾ ಪಕ್ಷದಿಂದ ಮಾರುತಿ ಜಮೀನ್ದಾರ 1, ಪಕ್ಷೇತರದಿಂದ ಹನಮಪ್ಪ ಕಾಟನ್ನವರ 1, ಆಮ್ ಆದ್ಮ ಪಕ್ಷದಿಂದ ಶಿವರಾಯಪ್ಪ ಜೋಗಿನ 4, ಆಮ್ ಆದ್ಮ ಪಕ್ಷದಿಂದ ಶಿವಪುತ್ರಪ್ಪ ಕರಡಿಗುಡ್ಡ 1, ಕಾಂಗ್ರೇಸ್ ಪಕ್ಷದಿಂದ ಭೀಮಸೇನ ಚಿಮ್ಮನಕಟ್ಟಿ 2, ಪಕ್ಷೇತರದಿಂದ ಪ್ರಕಾಶ ಜೋಶಿ 1 ನಾಮಪತ್ರ ಸಲ್ಲಿಸಿದ್ದಾರೆ.

 

ಪ್ರಾರಂಭದಿಂದ ಎಪ್ರೀಲ್ 20 ವರೆಗೆ ಒಟ್ಟು 119 ಅಭ್ಯರ್ಥಿಗಳಿಂದ 156 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*