ಜೇವರ್ಗಿ :ಕಳೆದ 10ವರ್ಷಗಳಿಂದ ಕ್ಷೇತ್ರದ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿ ಪ್ರೀತಿ ವಿಶ್ವಾಸ ಗಳಿಸಿಕೊಂಡಿದ್ದು ಮತ್ತೊಮ್ಮೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಡಾ.ಅಜಯಸಿಂಗ್ ಹೇಳಿದರು.
ಪಟ್ಟಣದ ಇಟಗಿ ದಾಲ್ ಮಿಲ್ ಆವರಣದಲ್ಲಿ ಏರ್ಪಡಿಸಿದ್ದ ನಾಮಪತ್ರ ಸಲ್ಲಿಸುವ ಭಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಜೀವನದಲ್ಲಿ ಯಾವತ್ತೂ ದ್ವೇಷದ ರಾಜಕೀಯ ಮಾಡಿಲ್ಲ. ಅದು ನಮ್ಮ ರಕ್ತದಲ್ಲಿಯೇ ಬಂದಿಲ್ಲ. ನನ್ನ ಅವಧಿಯಲ್ಲಿ ಒಂದೇ ಒಂದು ಕೇಸ್ ಕೂಡ ಯಾರ ಮೇಲೂ ಹಾಕಿಲ್ಲ. ಜನರ ನಂಬಿಕೆ ವಿಶ್ವಾಸ ಉಳಿಸಿಕೊಂಡು ಕೆಲಸ ಮಾಡುತ್ತೇನೆ. ಪಕ್ಷದ ಕಾರ್ಯಕರ್ತರು ಮೈಮರೆಯಬೇಡಿ. ವಿರೋಧಪಕ್ಷವನ್ನು ಯಾವತ್ತೂ ಹಗುರವಾಗಿ ಪರಿಗಣಿಸಬಾರದು. ಇಷ್ಟು ದಿನ ಬಿಜೆಪಿಯಲ್ಲಿದ್ದ ನಾಯಕರು ಜೆಡಿಎಸ್ ಪಕ್ಷಕ್ಕೆ ಸೇರಿದ ತಕ್ಷಣ ಜಾತ್ಯಾತೀತ ಹೇಗಾಗುತ್ತಾರೆ ಎಂದು ಪ್ರಶ್ನಿಸಿದರು.ಕ್ಷೇತ್ರದ ಮತದಾರರಿಗೆ ನನ್ನ ಮೇಲೆ ನಂಬಿಕೆ ಭರವಸೆ ಇದೆ ಅವರ ನಂಬಿಕೆ ಉಳಿಸಿಕೊಂಡು ಬಂದಿರುವೆ ನನಗೆ ವಿಸ್ವಾಸ ಇದೆ ಜನರು ನನ್ನ ಕೈ ಬಿಡಲ್ಲ ಎಂದು ಹೇಳಿದರು.
ಪಟ್ಟಣದ ರಿಲೈನ್ಸ್ ಪಂಪ್ ದಿಂದ ಬೃಹತ್ ಮೆರವಣಿಗೆ ಮೂಲಕ ಸಾವಿರಾರು ಕಾರ್ಯಕರ್ತರೊಂದಿಗೆ ಹೊಸ ಬಸ್ ನಿಲ್ದಾಣ ಅಖಂಡೇಶ್ವರ ಚೌಕ್ ದಿಂದ ಅಂಬೇಡ್ಕರ್ ವೃತ್ತ ಬಸವೇಶ್ವರ್ ವೃತ್ತದಿಂದ ವಿಧಾನ ಸೌಧದ ಮುಂಬಗಲಿರುವ ಇಟಗಿ ದಾಲ ಮಿಲ್ವರೆಗೆ ಬೃಹತ್ ರೋಡ್ ಶೋ ನಡೆಸಿ ನಾಮ ಪತ್ರ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ತಾಯಿ ಪ್ರಭಾವತಿ ಧರ್ಮಸಿಂಗ್, ಸಿ.ಬಿ ಪಾಟೀಲ ಓಕಳಿ, ಕೇದಾರಲಿಂಗಯ್ಯ ಹಿರೇಮಠ, ಶಾಮರಾಯಗೌಡ ಪಾಟೀಲ ವಡಗೇರಾ, ಶರಣ ಕುಮಾರ ಮೋದಿ, ಎಸ್. ಎಸ್. ಹುಲ್ಲೂರ, ಚಂದ್ರೇಖರ ಹರನಾಳ, ರಾಜಶೇಖರ ಸೀರಿ, ಶಿವಶರಣಪ್ಪ ಕೋಬಾಳ, ಸಂಗಣಗೌಡ ಗುಳ್ಯಾಳ, ಶಾಂತಪ್ಪ ಕೂಡಲಗಿ, ಕಾಸಿಂ ಪಟೇಲ ಮುದವಾಳ, ರುಕುಂಪಟೇಲ ಇಜೇರಿ, ಸಕ್ರೆಪ್ಪಗೌಡ ಹರವಾಳ, ಚಂದ್ರು ಪುರಾಣಿಕ, ವಸಂತ ನರಿಬೋಳ, ಮಲ್ಲಿಕಾರ್ಜುನ ಹಲಕರ್ಟಿ, ಬಿ.ಸಿ ಗದ್ದಗಿಮಠ, ಅಕ್ಷಯ ಪಾಟೀಲ ದುಮ್ಮದ್ರಿ, ಬಸವರಾಜ ಕಾನಗೌಡ, ನಾರಾಯಣರವ ಕಾಳೆ, ಬೈಲಪ್ಪ ನೇದಲಗಿ, ಸೇರಿದಂತೆ ಸಾವಿರಾರು ಜನ ಭಾಗಿಯಾಗಿದ್ದರು.
Be the first to comment