ಬಿಟಿಡಿಎ ಇಬ್ಬರು ಸಿಬ್ಬಂದಿ ಲೋಕಾ ಬಲೆಗೆ

ಬಾಗಲಕೋಟೆ: ನವನಗರದಲ್ಲಿ ವಾಣಿಜ್ಯ ನಿವೇಶನ ಹಂಚಿಕೆ ಮಾಡಿಕೊಡಲು ೧.೫೦ ಲಕ್ಷ ರೂ.ಗಳ ಬೇಡಿಕೆ ಇಟ್ಟಿದ್ದ ಬಿಟಿಡಿಎ ಬಿಟಿಡಿಎ ಕಚೇರಿ ಅಧೀಕ್ಷಕ ಸುರೇಶ ಚಳಗೇರಿ, ಎಸ್‌ಡಿಎ ವಿರುಪಾಕ್ಷ ಹನಮಂತಪ್ಪ ಅವರು ಲಂಚ ಸ್ವೀಕರಿಸುವ ವೇಳೆಯಲ್ಲಿ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

 

ಮುಳುಗಡೆ ಸಂತ್ರಸ್ಥರಾದ ಬಂದೆನವಾಜ್ ಮಹಿಬೂಬ್‌ಸಾಬ ಬಾಗವಾನ ವಾಣಿಜ್ಯ ನಿವೇಶನಕ್ಕಾಗಿ ೧.೫೦ ಲಕ್ಷ ರೂ.ಗಳ ಬೇಡಿಕೆ ಇಡಲಾಗಿತ್ತು. ಈ ಪೈಕಿ ೨೦ ಸಾವಿರ ರೂ.ಗಳನ್ನು ಬಿಟಿಡಿಎ ಅಧೀಕ್ಷ ಸುರೇಶ ಚಳಗೇರಿ ಅವರಿಗೆ ನೀಡಲಾಗಿದ್ದು, ಮತ್ತೆ ೩೦ ಸಾವಿರ ರೂ.ಗಳ ಹಣಕ್ಕಾಗಿ ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಲಂಚ ಸ್ವೀಕರಿಸುವ ವೇಳೆಯಲ್ಲಿ ಸದರಿ ಬಿಟಿಡಿಎ ಕಚೇರಿ ಅಧೀಕ್ಷಕ ಸುರೇಶ ಚಳಗೇರಿ, ಎಸ್‌ಡಿಎ ವಿರುಪಾಕ್ಷ ಹನಮಂತಪ್ಪ ಸಿಕ್ಕಿಬಿದ್ದಿದ್ದು, ಸದರಿ ಅವರ ಮೇಲೆ ಪ್ರಕರಣದ ದಾಖಲಿಸಾಗಿದೆ.

 

ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಅನಿತಾ ಹದ್ದಣ್ಣವರ ನೇತೃತ್ವದಲ್ಲಿ ಪೊಲೀಸ್ ಉಪಾಧೀಕ್ಷಕಿ ಪುಷ್ಪಲತಾ ಎನ್ ನೇತೃತ್ವದ ತಂಡ ಕಾರ್ಯಚರಣೆಯನ್ನು ಯಶಸ್ವಿಯಾಗಿ ಮಾಡಿದ್ದು, ತನಿಖೆ ಮುಂದುವರೆದಿದೆ ಎಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*