ಜಿಲ್ಲಾ ಸುದ್ದಿಗಳು
ಕೋಟ:
ಕುಂದಾಪುರದ ಕಡೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಲಾರಿಯೊಂದು ಶುಕ್ರವಾರ ನಸುಕಿನ 4.30 ರ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಕೋಟ ಮೂರುಕೈ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಚಾಲಕ ಮತ್ತು ನಿರ್ವಾಹಕರು ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗೊಂಡು ಪಾರಾಗಿದ್ದಾರೆ.
ಈ ಲಾರಿ ಪಂಜಾಬ್ ನಿಂದ ಲ್ಯಾಮಿನೇಟೆಡ್ ಸನ್ ಮೈಕ್ ಶೀಟುಗಳನ್ನು ತುಂಬಿಕೊಂಡು ಮಂಗಳೂರಿಗೆ ಸಾಗುತ್ತಿತ್ತು ಎನ್ನಲಾಗಿದೆ. ಮೂರುಕೈ ಬಳಿ ಬರುವಾಗ ಲಾರಿಯ ಬ್ರೇಕ್ ವಿಫಲಗೊಂಡು ಈ ದುರಂತ ಸಂಭವಿಸಿದೆ. ರಸ್ತೆಯಿಂದ ಬದಿಗೆ ಸರಿದ ಲಾರಿ ವಿದ್ಯುತ್ ಕಂಬ ಹಾಗೂ ಒಂದೆರಡು ತೆಂಗಿನಮರಗಳಿಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿರುತ್ತದೆ. ಗಾಯಾಳುಗಳು ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾರೆ. ಕೋಟ ಪೋಲಿಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
Be the first to comment