ಕೋಟೇಶ್ವರ – ಸೋಮೇಶ್ವರ ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ತೊಡಕ್ಕಾಗಿರುವ ಅನಧಿಕೃತ ಕಟ್ಟಡ ತೆರವುಗೊಳಿಸಲು ಕಾಳಾವರ ಗ್ರಾಮಸ್ಥರಿಂದ ಪ್ರತಿಭಟನೆ

ವರದಿ : ಇಬ್ರಾಹಿಂ ಕೋಟ ಕುಂದಾಪುರ

ಜಿಲ್ಲಾ ಸುದ್ದಿಗಳು 

ಕುಂದಾಪುರ

ಕೋಟೇಶ್ವರ – ಸೋಮೇಶ್ವರ ರಾಜ್ಯ ಹೆದ್ದಾರಿಯ ಕಾಳಾವರ ಬಸ್ಸು ನಿಲ್ದಾಣದಲ್ಲಿದ್ದ ದೀರ್ಘ ತಿರುವನ್ನು ವೈಜ್ಞಾನಿಕವಾಗಿ ನೆರಗೊಳಿಸುವ ಕಾರ್ಯವನ್ನು ಕುಂದಾಪುರ ಉಪವಿಭಾಗ ಹಮ್ಮಿಕೊಂಡಿದ್ದು ಅದಕ್ಕೆ ಅಡ್ಡಿಯಾಗಿರುವ ಖಾಸಗಿಯವರ ಅನಧಿಕೃತ ಕಟ್ಟಡವನ್ನು ತೆರವುಗೊಳಿಸುವ ಉದ್ದೇಶದಿಂದ ಕಾಳಾವರ ಗ್ರಾಮಸ್ಥರಿಂದ ಡಿ. 16 ರಂದು ಕಾಳಾವರ ಬಸ್ ನಿಲ್ದಾಣ ಬಳಿ ಪ್ರತಿಭಟನೆ ನಡೆಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯರಾದ ರಘುವೀರ್ ಕೆ. ಅವರು ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಅಡ್ಡಿಯಾಗಿರುವ ಖಾಸಗಿಯವರ ಅನಧಿಕೃತ ಕಟ್ಟಡಗಳು ಮತ್ತು ಮರಗಳನ್ನು ತೆರವುಗೊಳಿಸಲು ಸರಕಾರದ ಆದೇಶವಿರುತ್ತದೆ. ಅದರಂತೆ ಒಂದು ಕಟ್ಟಡವನ್ನು ಪೂರ್ಣವಾಗಿ ತೆರವು ಗೊಳಿಸಲಾಗಿದೆ. ಆದರೆ ಪ್ರಭಾವಿಗಳಾದ ಇನ್ನೊಬ್ಬರ ಅನಧಿಕೃತ ಕಟ್ಟಡವನ್ನು ಪೂರ್ಣವಾಗಿ ತೆರವುಗೊಳಿಸದೇ ಅರ್ಧ ಭಾಗವನ್ನು ಹಾಗೆ ಉಳಿಸಲಾಗಿದೆ. ಇದರಿಂದಾಗಿ ರಸ್ತೆಯ ತಿರುವು ಬೇಕಾದಷ್ಟು ನೇರವಾಗಿ ಇಲ್ಲ ಅಲ್ಲದೆ ಮುಂದಿನಿಂದ ಬರುವ ವಾಹನಗಳು ಕಾಣಿಸುವುದಿಲ್ಲ, ಇದರಿಂದ ಅಪಘಾತಕ್ಕೆ ಕಾರಣವಾಗಲಿದೆ. ಅಲ್ಲದೆ ಮುಖ್ಯರಸ್ತೆಯಿಂದ ವಕ್ವಾಡಿ ಅಡ್ಡರಸ್ತೆಗೆ ಸಂಪರ್ಕವೂ ಸಮರ್ಪಕವಾಗಿಲ್ಲ, ಇದರಿಂದಾಗಿ ರಸ್ತೆಯ ಅಂದಕ್ಕೆ ಕುಂದುಂಟಾಗಿದೆ.ಆದ್ದರಿಂದ ಅನಧಿಕೃತ ಕಟ್ಟಡವನ್ನು ಕೊಡಲೇ ತೆರವುಗೊಳಿಸಬೇಕು ಒಂದು ವೇಳೆ ತೆರವುಗೊಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಹೋರಾಟ ಮಾಡಲಾಗುವುದು ಎಂದು ರಘುವೀರ್ ಕೆ.ಎಚ್ಚರಿಸಿದರು.

CHETAN KENDULI

ಆದಿದ್ರಾವಿಡ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮೋಹನ್ ಚಂದ್ರ ಕಾಳಾವರ್ಕರ್ ಪ್ರಾಸ್ತವಿಕ ನುಡಿಯನ್ನಾಡಿ ಸುಂದರ ಕಾಳಾವರ ಮಾಡಬೇಕೆಂದು ಹತ್ತು ವರ್ಷದಿಂದ ಕನಸು ಕಂಡವರು ನಾವು.ಈ ಭಾಗದ ಎಲ್ಲಾ ಕಟ್ಟಡಗಳು ತೆರೆವುಗೊಂಡರೆ ಅಪಘಾತ ವಲಯವನ್ನು ತಪ್ಪಿಸಬಹುದು ಎಂಬ ನಿರೀಕ್ಷೆಯಲ್ಲಿ 10 ವರ್ಷದ ಹಿಂದೆಯೇ ಕಾಳಾವರ ಗ್ರಾಮ ಪಂಚಾಯತ್ ಗೆ ಮನವಿಯನ್ನು ನೀಡಿದ್ದೇವೆ. ಅದಕ್ಕೆ ಗ್ರಾಮ ಪಂಚಾಯತ್ ನವರು ಸ್ಪಂದನೆ ಕೂಡ ನೀಡಿದ್ದಾರೆ. ಆದರೆ 10 ವರ್ಷದ ನಂತರ ರಸ್ತೆ ಅಗಲೀಕರಣ ಸಮಯದಲ್ಲಿ ಇಲ್ಲಿರುವ ಕಟ್ಟಡವನ್ನು ತೆರವು ಗೊಳಿಸುವ ಸಂದರ್ಭದಲ್ಲಿ ಕೆಲವೊಂದು ಮನುಷ್ಯರಿಂದ ತೊಡಕುಗಳು ಬಂದಿದ್ದು ಇದರಿಂದಾಗಿ ರಸ್ತೆ ಅಗಲೀಕರಣ ಕಾರ್ಯ ಸ್ಥಗಿತಗೊಂಡಿದೆ.

 ಆದ್ದರಿಂದ ಎಲ್ಲಾ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿದರೆ ನಿಜವಾಗಿ ಅಪಘಾತ ವಲಯವನ್ನು ತಪ್ಪಿಸಬಹುದು. ಅಡ್ಡಿ ಬರುವ ತೊಡಕುಗಳನ್ನು ದೂರ ಮಾಡವ ಉದ್ದೇಶದಿಂದ ಇಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಊರ ಕೆಲವೊಂದು ಸಂಘ ಸಂಸ್ಥೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದೆ. ಊರ ಎಲ್ಲಾ ಮುಖಂಡರಲ್ಲಿ ಮಾತುಕತೆ ಮಾಡಿಕೊಂಡು ಇಂದು ಸಂಕೇತಿಕವಾಗಿ ಪ್ರತಿಭಟನೆಯನ್ನು ಇಟ್ಟುಕೊಂಡಿದ್ದೇವೆ. ನಮ್ಮ ಉದ್ದೇಶ ಮುಂದೇ ನಮ್ಮ ಸುಂದರ ಕಾಳಾವರವನ್ನಾಗಿ ಉಳಿಸಿ, ಅಪಘಾತ ವಲಯವನ್ನು ತಪ್ಪಿಸಲು, ಹಾಗೂ ಕಾಳಾವರದಲ್ಲಿ ಸುಂದರವಾದ ಬಸ್ ನಿಲ್ದಾಣ ಮತ್ತು ಶೌಚಾಲಯವನ್ನು ನಿರ್ಮಿಸುವ ಉದ್ದೇಶವಾಗಿದೆ ಎಂದರು.ಈ ಸಂದರ್ಭದಲ್ಲಿ ಪ್ರತಿಭಟನಾಕಾರರಿಂದ “‘ *ಅನಧಿಕೃತ ಕಟ್ಟಡ ತೆರವುಗೊಳಿಸಿ, ಅಪಘಾತವನ್ನು ತಪ್ಪಿಸಿ, ಬಡವರಿಗೊಂದು ನ್ಯಾಯ ಬಲಿಷ್ಠರಿಗೊಂದು ನ್ಯಾಯ ಬೇಡ, ಮೂಲ ಯೋಜನೆಯಂತೆ ಕಾಮಗಾರಿ ನಡೆಯಲಿ, ಕಾನೂನುಬದ್ಧ ಹೋರಾಟಕ್ಕೆ ಸಹಕರಿಸಿ “* ಎಂದು ಘೋಷಣೆ ಕೂಗಿದರು ನಂತರ ಸ್ಥಳಕ್ಕಾಗಮಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಾಂಡುರಂಗ ಶೇಟ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

 ಈ ಸಂದರ್ಭದಲ್ಲಿ ಕಾಳವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತ ಶೆಟ್ಟಿ , ಪಂಚಾಯತ್ ಸದಸ್ಯರಾದ ವಕ್ವಾಡಿ ರಮೇಶ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಜ್ಯೋತಿ ಮೊಗವೀರ ಉಪಸ್ಥಿತರಿದ್ದರು.ಹಾಗೂ ಪ್ರತಿಭಟನೆಯಲ್ಲಿ ಎಸ್ಸಿ ಎಸ್ಟಿ ಮೋರ್ಚಾದ ಅಧ್ಯಕ್ಷರಾದ ಮಹೇಶ್, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ಮಹಾಬಲ, ನಿವೃತ್ತ ಅಧ್ಯಾಪಕ ಸಂಜು ಮಾಸ್ಟರ್, ಕಾರ್ಮಿಕ ಸಂಘದ ಅಧ್ಯಕ್ಷ ಮೋನಪ್ಪ, ನಮ್ಮ ಶಕ್ತಿ ಮಹಿಳಾ ಮಂಡಲದ ಅಧ್ಯಕ್ಷೆ ಶಶಿಕಲಾ ಹಾಗೂ ಎಲ್ಲಾ ಸದಸ್ಯರು ಸ್ಥಳೀಯರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*