ಜಿಲ್ಲಾ ಸುದ್ದಿಗಳು
ಹೊನ್ನಾವರ
ಜಮೀನು ಖರೀದಿಗೆ ಜಾರಿಯಾದ ರಾಜ್ಯ ಸರ್ಕಾರದ ಆದೇಶ ಹಿಂಪಡೆಯುವಂತೆ ಸಾರ್ವಜನಿಕರ ಪರವಾಗಿ ಸಮಾನ ಮನಸ್ಕರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಜಾರಿಯಾದ ಯೋಜನೆಯಾದ ಅಣುವಿದ್ಯುತ್, ಜಲ ವಿದ್ಯುತ್, ಕೊಂಕಣ ರೈಲ್ವೇ, ಅಣೆಕಟ್ಟು, ನೀರಾವರಿ ಯೋಜನೆ, ಇತ್ತೀಚಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಈಗಾಗಲೇ ಜಮೀನುಗಳನ್ನು ಸರ್ಕಾರ ಸ್ವಾದೀನ ಪಡಿಸಿಕೊಂಡಿದೆ. ಒಂದು ಕಡೆ ನದಿ ಹಾಗೂ ಸಮುದ್ರ ಇನ್ನೊಂದೆಡೆ ಪಶ್ಚಿಮ ಘಟ್ಟದ ನಡುವೆ ಸರ್ಕಾರಿ ಯೋಜನೆಗಳಿಗೆ ಭೂಮಿ ಕಳೆದುಕೊಳ್ಳುತ್ತಿದ್ದು , ಇರುವ ಸ್ವಲ್ಪ ಸ್ವಲ್ಪ ಜಮೀನನ್ನು ಅವಲಂಬಿಸಿ ಕೃಷಿ ಕೆಲಸಕ್ಕಾಗಿ ವಾಸಕ್ಕಾಗಿ ಮನೆ ನಿರ್ಮಿಸಿಕೊಂಡಿದ್ದಾರೆ.
ಈ ಮಧ್ಯೆ ಸರ್ಕಾರ 3 ಗುಂಟೆಗಿಂತ ಕಡಿಮೆ ನಿವೇಶನ ಮಾರುವಂತಿಲ್ಲ ಎಂದು ಆದೇಶ ಮಾಡಿರುವುದು ಬಡ ಹಾಗೂ ಮಧ್ಯಮ ವರ್ಗದವರು ಖರೀದಿ ಹಾಗೂ ಮಾರಾಟಕ್ಕೆ ಸಮಸ್ಯೆಯಾಗುತ್ತಿದೆ. ಈಗಾಗಲೇ ನಗರ ಯೋಜನೆ ಮತ್ತು ಸ್ವತ್ತು ನಿಯಮಕ್ಕೆ ಮನೆ ನಿರ್ಮಿಸಿಕೊಳ್ಳಲು ಹರಸಾಹಸ ಪಡುವ ಮಧ್ಯೆ ಈ ಆದೇಶ ಜಲ್ಲೆಯ ಪಾಲಿಗೆ ಕರಾಳತೆ ಬಿಂಬಿಸಿದೆ. ಸರ್ಕಾರದ ಈ ಆದೇಶ ಶ್ರೀಮಂತ ವರ್ಗಕ್ಕೆ ಒಳಿತು ಮಾಡುವ ಆದೇಶವಾಗಿದೆ. ತಕ್ಷಣ ಇಂತಹ ಏಕಪಕ್ಷಿಯ ಹಾಗೂ ಪಟ್ಟ ಬದ್ಧ ಹಿತಾಸಕ್ತಿಯುಳ್ಳ ಯೋಜನೆಯನ್ನು ಹಿಂದಕ್ಕೆ ಪಡೆಯುವಂತೆ ಸಮಾನ ಮನಸ್ಕರು ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ತಹಶೀಲ್ದಾರ್ ನಾಗರಾಜ್ ನಾಯ್ಕಡ್ ಮನವಿ ಸ್ವೀಕರಿಸಿದರು.
Be the first to comment