ಪತ್ರಿಕಾ ದಿನಾಚರಣೆ ನಿಮಿತ್ತ ಆನ್ಲೈನ್ ಭಾಷಣ ಸ್ಪರ್ಧೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಕುಮಟಾ: ಪತ್ರಿಕಾ ದಿನಾಚರಣೆಯ ನಿಮಿತ್ತ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕುಮಟಾ ಘಟಕ, ಪುರಸಭೆ ಹಾಗೂ ಅರಣ್ಯ ಇಲಾಖೆ ಉಪ ವಿಭಾಗದ ಜಂಟಿ ಸಹಯೋಗದಲ್ಲಿ ತಾಲೂಕಾ ಮಟ್ಟದ ಆನ್‍ಲೈನ್ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ.ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಗಿದೆ. ಕಸ ವಿಂಗಡನೆ ಮತ್ತು ಪಟ್ಟಣದ ಸ್ವಚ್ಛತೆಯಲ್ಲಿ ಸಾರ್ವಜನಿಕರ ಪಾತ್ರ ಎಂಬ ವಿಷಯ ಕುರಿತು ಪ್ರೌಢ ಶಾಲಾ ವಿದ್ಯಾರ್ಥಿಗಳು ಈ ವಾಟ್ಸಾಪ್ ನಂಬರ್‍ಗೆ 9743151664 ಕಳುಹಿಸಬೇಕು. ಇನ್ನು ಅಪಾಯದಲ್ಲಿರುವ ಅರಣ್ಯ ಪರಿಸರ ರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ ಈ ವಿಷಯದ ಕುರಿತಾದ ಸ್ಪರ್ಧೆಯಲ್ಲಿ 6ರಿಂದ 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. 3 ನಿಮೀಷಗಳು ಮೀರದಂತೆ ಭಾಷಣ ಮಾಡಿದ ವಿಡಿಯೋವನ್ನು ಈ ವಾಟ್ಸಾಪ್ ನಂಬರ್‍ಗೆ 9742984712, 9448321920 ಕಳುಹಿಸಬೇಕು.

ವಿಜೇತರಿಗೆ ನಗದು ಬಹುಮಾನಗಳ ಜೊತೆಗೆ ಪುರಸ್ಕಾರ ನೀಡಲಾಗುವುದು. ಭಾಷಣದ ವಿಡಿಯೋ ಕಳುಹಿಸಲು ಜೂನ್ 27 ಕೊನೆಯ ದಿನವಾಗಿದ್ದು, ಜುಲೈ 1ರಂದು ಕುಮಟಾ ಪಟ್ಟಣದ ಹಳೇ ಮೀನು ಮಾರುಕಟ್ಟೆ ರಸ್ತೆಯ ಸಮುದಾಯ ಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಎರಡೂ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ವಿಡಿಯೋ ಜೊತೆಗೆ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಶಾಲೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸಿ ವಾಟ್ಸಾಪ್ ಮಾಡಬೇಕು ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕಾರ್ಯದರ್ಶಿ ಚರಣರಾಜ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*