ಕೊಯಿರ ಎಂಪಿಸಿಎಸ್‌ಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂ.ಆಶಾ ಆಯ್ಕೆ _೪೭ ವರ್ಷಗಳ ನಂತರ ಮೊದಲ ಮಹಿಳಾ ಅಧ್ಯಕ್ಷೆ_

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ತಾಲೂಕಿನ ಕೊಯಿರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 11ಸದಸ್ಯ ಬಲ ಹೊಂದಿದ್ದು, 2ನೇ ಅವಧಿಗೆ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಈ ಹಿಂದಿನ ಅಧ್ಯಕ್ಷರಾಗಿದ್ದ ಎಚ್.ಮುನಿರಾಜು ಅವರ ರಾಜೀನಾಮೆಯಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಇಬ್ಬರು ನಾಮಪತ್ರವನ್ನು ಸಲ್ಲಿಸಿದ್ದರು. ಅದರಲ್ಲಿ ಕೆ.ರಾಮಾಂಜಿನಪ್ಪ ಸಲ್ಲಿಸಿದ್ದ ನಾಮಪತ್ರವನ್ನು ವಾಪಾಸ್ ಪಡೆದಿದ್ದರಿಂದ ಅಧ್ಯಕ್ಷರ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಎಂ.ಆಶಾ ಮುನೇಗೌಡ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ರಿಟರ್ನಿಂಗ್ ಅಧಿಕಾರಿ ಪ್ರಮೋದ್‌ಕುಮಾರ್.ಡಿ.ಎ ಘೋಷಿಸಿದರು.

CHETAN KENDULI

ಜಿಲ್ಲಾ ಬಿಜೆಪಿ ರೈತ ಮೊರ್ಚಾ ಅಧ್ಯಕ್ಷ ಎಚ್.ಎಂ.ರವಿಕುಮಾರ್ ಮಾತನಾಡಿ, ಕೊಯಿರ ಹಾಲು ಉತ್ಪಾದಕರ ಸಹಕಾರ ಸಂಘವು ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯಲ್ಲಿ ಬಿಜೆಪಿ ಬೆಂಬಲಿತ ಮಹಿಳೆಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದರ ಮೂಲಕ ಮಾದರಿ ಸಂಘವಾಗಿದೆ. ಇಡೀ ಇತಿಹಾಸದಲ್ಲಿ ೪೭ ವರ್ಷಗಳ ನಂತರ ಮಹಿಳೆಯನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಮಹಿಳೆಯರು ಸಹ ಪುರುಷರಂತೆ ಸಮಾನರು ಎಂಬುವುದಕ್ಕೆ ಮಾದರಿಯಾಗಿದೆ ಎಂದರು.

ಮುಖಂಡ ಕೆ.ಎನ್.ರಮೇಶ್‌ಬಾಬು ಮಾತನಾಡಿ, ಕೊಯಿರ ಎಂಪಿಸಿಎಸ್ ಸಂಘ ಅತ್ಯುತ್ತಮವಾದ ಹೆಸರನ್ನು ಪಡೆದುಕೊಂಡಿದೆ. ತಾಲೂಕಿನಲ್ಲಿ ೧೬೩ ಸಂಘಗಳಲ್ಲಿ ಅತ್ಯುತ್ತಮವಾಗಿ ನಡೆಯುತ್ತಿರುವ ಪಟ್ಟಿಯಲ್ಲಿ ೨-೩ನೇ ಸ್ಥಾನದಲ್ಲಿ ಈ ಸಂಘವಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಪಾರದರ್ಶಕವಾಗಿ ನಡೆಸಿಕೊಂಡು ಮೊದಲ ಸ್ಥಾನ ಪಡೆಯುವುದರ ಮೂಲಕ ಮಾದರಿಯಾಗಬೇಕು ಎಂದು ಸಲಹೆ ಮಾಡಿದರು.

ನೂತನ ಅಧ್ಯಕ್ಷೆ ಎಂ.ಆಶಾ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಎರಡನೇ ಅವಧಿಗೆ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಸಂಘದ ಏಳಿಗೆಗೆ ಶ್ರಮಿಸಲಾಗುತ್ತದೆ. ಎಲ್ಲರ ಸಲಹೆ ಮಾರ್ಗದರ್ಶನ ಪಡೆದುಕೊಂಡು ಸಂಘವನ್ನು ಉತ್ತಮ ಸ್ಥಾನಕ್ಕೆ ಕೊಂಡೈಯಲು ಪ್ರಯತ್ನಿಸಲಾಗುತ್ತದೆ. ಸಂಘದ ನೂತನ ಕ್ಷೀರ ಭವನ ನಿರ್ಮಾಣಕ್ಕೆ ಮಾಜಿ ಅಧ್ಯಕ್ಷರ ಮತ್ತು ಎಲ್ಲಾ ಆಡಳಿತ ಮಂಡಳಿ ಸದಸ್ಯರನ್ನು ಒಳಗೊಂಡು ಜಾಗವನ್ನು ಗುರ್ತಿಸಿ ಉತ್ತಮ ಕಟ್ಟಡ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತದೆ ಎಂದು ಹೇಳಿದರು.

ಎಂಪಿಸಿಎಸ್ ಮಾಜಿ ಅಧ್ಯಕ್ಷ ಎಚ್.ಮುನಿರಾಜು, ನಿರ್ದೇಶಕ ಕೆ.ರಾಮಾಂಜಿನಪ್ಪ ಮಾತನಾಡಿದರು. ಈ ವೇಳೆ ಸಂಘದ ಉಪಾಧ್ಯಕ್ಷೆ ಮುನಿಯಪ್ಪ, ನಿರ್ದೇಶಕರಾದ ಸಿ.ಕೃಷ್ಣಮೂರ್ತಿ, ಕೆ.ಟಿ.ಗಿಡ್ಡಪ್ಪ, ಕೆ.ಮಂಜುನಾಥ್, ಎಲೆ ರಾಮಯ್ಯ, ಮುನೇಗೌಡ.ಕೆ.ಎಂ, ನಾರಾಯಣಪ್ಪ, ಭಾಗ್ಯಮ್ಮ.ವಿ.ಎಸ್., ಮುಖ್ಯ ಕಾರ್ಯನಿರ್ವಾಹಕ ಕೆ.ಆರ್.ಕೇಶವಮೂರ್ತಿ, ಹಾಲು ಪರೀಕ್ಷಕ ಕೆ.ಎಂ.ರಮೇಶ್, ಸಹಾಯಕ ಮುನಿರಾಜು.ಕೆ.ಎಂ, ಶುಚಿಗಾರ ಪ್ರದೀಪ್.ಕೆ.ಎನ್, ಕೊಯಿರ ಗ್ರಾಪಂ ಸದಸ್ಯರಾದ ಮುನೀಂದ್ರ, ನಯನ, ನಳಿನಾ, ಮುಖಂಡರಾದ ಆನಂದಪ್ಪ, ದೇವರಾಜು, ಮುನಿನಾರಾಯಣಪ್ಪ, ಊರಿನ ಮುಖಂಡರು ಇದ್ದರು.

Be the first to comment

Leave a Reply

Your email address will not be published.


*