ರಾಜ್ಯ ಸುದ್ದಿಗಳು
ದೇವನಹಳ್ಳಿ
ಅ.7ರಂದು ದೆಹಲಿಯ ಒಂದು ಬೂತ್‌ನಲ್ಲಿ ರಾಷ್ಟ್ರೀಯ ಅಧ್ಯಕ್ಷರ ಹಾದಿಯಾಗಿ ನಡೆಯಲಿರುವ ಸೇವಾ ಸಮರ್ಪಣ ಅಭಿಯಾನಕ್ಕೆ ಪ್ರತಿ ಬೂತ್ ಮೂಲಕ ಪತ್ರ ಬರೆಯುವ (ಪೋಸ್ಟ್ ಕಾರ್ಡು) ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎಚ್.ಎಂ.ರವಿಕುಮಾರ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಕೊಯಿರ ಅಂಚೆ ಕಚೇರಿಯ ಆವರಣದಲ್ಲಿ ಬೂತ್ ಮಟ್ಟದ ಮುಖಂಡರು, ಕಾರ್ಯಕರ್ತರೊಂದಿಗೆ ಪೋಸ್ಟ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸೇವಾ ಸಮರ್ಪಣಾ ಸಂಚಾಲಕರಾಗಿ ಜಿಲ್ಲೆಯಲ್ಲಿ ಪ್ರತಿ ಬೂತ್‌ನಲ್ಲಿ ಅಭಿಯನಕ್ಕೆ ಅ.7ರೊಳಗೆ ಪ್ರತಿಯೊಬ್ಬರು ಪೊಸ್ಟ್‌ಕಾರ್ಡುಗಳನ್ನು ಸಲ್ಲಿಸಬೇಕು. ದೇವನಹಳ್ಳಿ ತಾಲೂಕಿನಾದ್ಯಂತ ಈಗಾಗಲೇ ಬಿಜೆಪಿ ಕಾರ್ಯಕರ್ತರು, ಮುಖಂಡರು ಎಲ್ಲಾ ಕಡೆಗಳಲ್ಲಿ ಸ್ವಚ್ಚತೆ, ಸಸಿನೆಡುವ ಕಾರ್ಯ, ರಕ್ತದಾನ ಶಿಬಿರ ಹೀಗೆ ವಿವಿಧ ಸೇವಾ ಕಾರ್ಯಗಳನ್ನು ಮಾಡಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆಯ ಮೆರೆಗೆ ಪಕ್ಷದ ಹಿರಿಯರು, ಜನಪ್ರತಿನಿಧಿಗಳು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ವಿಶೇಷ ಫಲಾನುಭವಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೋಸ್ಟ್ ಕಾರ್ಡುಗಳನ್ನು ಕಳುಹಿಸುವ ಮೂಲಕ ಅಭಿನಂದನೆ ಸಲ್ಲಿಸುವ ಕಾರ್ಯವಾಗುತ್ತಿದೆ. ಪ್ರತಿ ಬೂತ್‌ನಲ್ಲಿನ ಪ್ರತಿಯೊಬ್ಬರು ಆಯಾ ಭಾಗದ ಅಂಚೆ ಕಚೇರಿಗೆ ಪತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಅ.7ರಂದು ಸೇವಾ ಸಮರ್ಪಣ ಅಭಿಯಾನದಲ್ಲಿ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಪ್ರತಿಯೊಬ್ಬರು ತಪ್ಪದೇ ಅ.7ರೊಳಗೆ ಪತ್ರವನ್ನು ಪೋಸ್ಟ್ ಮಾಡಬೇಕು ಎಂದು ಮನವಿ ಮಾಡಿದರು.
ಈ ವೇಳೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ಎನ್.ರಮೇಶ್‌ಬಾಬು, ಬಿಜೆಪಿ ಮುಖಂಡರಾದ ಮುನೀಂದ್ರ, ಮಂಜುನಾಥ್, ಮುನಿಯಪ್ಪ, ಜೆಸಿಬಿ ಆನಂದ್, ವೆಂಕಟೇಶ್, ಕೆ.ಸಿ.ಮುನಿರಾಜು, ಮಹಿಳಾ ಪದಾಧಿಕಾರಿಗಳಾದ ನಳಿನಾ, ನಯನ, ಆಶಾ ಮುನೇಗೌಡ ಹಾಗೂ ಇತರರು ಇದ್ದರು.
Be the first to comment