ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಕಾರಹಳ್ಳಿ ಗ್ರಾಮದ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಚೈಲ್ಡ್ ಫಂಡ್ ಇಂಡಿಯಾ ಮೂಲಕ ಬ್ಯಾಗ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಜಯರಾಮ್ ಮಾತನಾಡಿ, ಸಂಪೂರ್ಣವಾಗಿ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಗ್ರಾಪಂ ಮುಖಂಡ ಶಶಿಕುಮಾರ್ ಮಾತನಾಡಿ, ಶಾಲೆಯ ವೇಳಾಪಟ್ಟಿಯಂತೆ ಪುಸ್ತಕಗಳನ್ನು ಒಯ್ಯಬೇಕು. ಓವರ್ಲೋಡ್ ಮಾಡಬಾರದು. ಚೈಲ್ಡ್ ಫಂಡ್ ಇಂಡಿಯದ ಕಾರ್ಯಕ್ರಮ ಸಂಯೋಜಕ ಹೊನ್ನಪ್ಪ ಮಕ್ಕಳಿಗೆ ಕೈಗಳ ನೈರ್ಮಲ್ಯ ಮತ್ತು ಸ್ವಚ್ಚತೆ ಯ ಬಗ್ಗೆ ಅರಿವು ಮೂಡಿಸಿದರು.
ಕಾರಹಳ್ಳಿ ಪಂಚಾಯತ್ ಸದಸ್ಯರಾದ ಆರ್. ಜಯರಾಮ್, ತೈಲಗೆರೆ ರಾಜಣ್ಣ, ಕೆಂಪಣ್ಣ, ಸರಳ ಶಶಿಕುಮಾರ್, ಮುಖಂಡರಾದ ತಾಜ್ ಪೀರ್ ಮತ್ತು ಅಶೋಕ್ ಕುಮಾರ್, ಜನಕಮಣಿ, ಚೈಲ್ಡ್ ಫಂಡ್ ಇಂಡಿಯಾದ ಡೇವಿಡ್ ಮತ್ತು ಲತಾಮಣಿ ,ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ರವಿ, ಶಾಲಾ ಮುಖ್ಯ ಶಿಕ್ಷಕಿ ವೇದಾವತಿ, ಎಸ್ ಡಿಎಂಸಿ ಅಧ್ಯಕ್ಷ ಕೇಶವ ಮೂರ್ತಿ, ಸದಸ್ಯರಾದ ಮಂಜುನಾಥ್, ಮತ್ತಿತರರು ಉಪಸ್ಥಿತರಿದ್ದರು.
Be the first to comment