ರಾಜ್ಯ ಸುದ್ದಿ
ಮುಂಡಗೋಡ: ಜಿಲ್ಲೆಯ 227 ಗ್ರಾಮಗಳನ್ನು ಮಾರ್ಚ 2022 ವರೆಗೆ ಕೊಳಚೆ ಮುಕ್ತ ಮಾಡುವ ಗುರಿಯನ್ನು ಹೊಂದಿದ್ದೇವೆ, ಜಿಲ್ಲೆಯ 100 ಶಾಲೆಯ ಆಟದ ಮೈದಾನವನ್ನು ಅಭಿವೃದ್ಧಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪ್ರಿಯಾಂಗ್ ಹೇಳಿದರು.ಸೋಮವಾರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನರೇಗಾ ಮತ್ತು ಜೆಜೆಎಂ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಪ್ರಸ್ತುತ ವರ್ಷದಲ್ಲಿ ವಿಶೇಷವಾಗಿ ನರೇಗಾದಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಆ ಗ್ರಾಮವನ್ನು ಕೊಳಚೆ ಮುಕ್ತÀ ಮಾಡಲಾಗುವುದು ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಗಳ ಕಾವiಗಾರಿಗಳು ಒಳ್ಳೆಯ ರೀತಿ ನಡೆಯುತ್ತಿದೆ.
ಪ್ರತಿ ತಾಲೂಕಿನಲ್ಲಿ 10 ಶಾಲೆಯ ಆಟದ ಮೈದಾನವನ್ನು ಅಭಿವೃದ್ಧಿ ಪಡಿಸÀಲಾಗುವುದು. ಇದರ ಜೊತೆಗೆ ಜಿ.ಪಂ, ತಾ.ಪಂ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿಯ ಅನುದಾನದಲ್ಲಿ ಹೋಬಳಿಗೆ ಒಂದು ಮಾದರಿ ಅಂಗನವಾಡಿ ತೆರೆದು ಅದಕ್ಕೆ ಬೇಕಾಗುವ ಸಾಮಾಗ್ರಿಗಳ ಜೊತೆಗೆ ಎಲ್ಲ ಅಂಗನವಾಡಿಗಳಿಗೆ ಬಾಲ ಸ್ನೇಹಿ ಪೇಂಟಿಂಗ್ ಮಾಡಿಸಲಾಗುವುದು. ಜಿ.ಪಂ, ತಾಪಂ. ಅನುದಾನದಲ್ಲಿ ಶಾಲೆಯ ಕಟ್ಟಡ, ಶೌಚಾಲಯ ರಿಪೇರಿ ಮಾಡಿಸಲಾಗುವುದು. ಬಾಚಣಕಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನರೇಗಾ ಕಾಮಾಗಾರಿಯನ್ನು ವೀಕ್ಷಣೆ ಮಾಡಿದ್ದೇನೆ. ಜಲ್ ಜೀವನ್ ಮೀಷನ್ ಯೋಜನೆಯಲ್ಲಿ ಬಾಚಣಕಿ ಜಲಾಶಯದ ನೀರನ್ನು ಇಂದೂರ ಮತ್ತು ಕೊಪ್ಪ ಗ್ರಾಮಗಳಿಗೆ ನೀಡುವ ಬಗ್ಗೆ ಪ್ರಸ್ತಾವನೆ ನಮ್ಮ ಮುಂದೆ ಇದ್ದ ಕಾರಣ ಜಲಾಶಯಕ್ಕೆ ಮತ್ತು ಮಾದರಿ ಅಂಗನವಾಡಿಗೆ ಭೆಟಿ ನೀಡಿದ್ದೇನೆ ಎಂದರು.ವಿವಿಧ ಕಾಮಗಾರಿ ವೀಕ್ಷಣೆ: ಸಾಲಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್ಬಿಎಂ ಯೋಜನೆಯ ಎಸ್‍ಎಲ್‍ಡಬ್ಲೂಎಂ ಕಾಮಗಾರಿ ಮತ್ತು ತೋಟಗಾರಿಕೆ ಇಲಾಖೆಯ ಸಹಭಾಗಿತ್ವದ ಅಡಿಕೆ ಪ್ರದೇಶ ವಿಸ್ತರಣೆ ಕಾಮಗಾರಿ ಪರಿಶೀಲಿಸಿದರು.
ಚವಡಳ್ಳಿ ಗ್ರಾ.ಪಂ.ವ್ಯಾಪ್ತಿಯ ಬ್ಯಾನಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಜಲ್ ಜೀವನ್ ಮೀಷನ್ ಕಾಮಗಾರಿಯನ್ನ ವೀಕ್ಷಣೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಖುದ್ದು ಸ್ಥಳದಲ್ಲಿದ್ದ ಪೈಂಪ್‍ಗಳನ್ನು ಪರಿಶೀಲಿಸಿ ಗ್ರಾಮಸ್ಥರ ಕುಂದು ಕೊರತೆಗಳ ಬಗ್ಗೆ ವಿಚಾರಿಸಿದರು. ತಾ.ಪಂ ಇಒ ಪ್ರವೀಣ ಕಟ್ಟಿ, ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಅಣ್ಣಪ್ಪ ನಾಯ್ಕ, ಉದೋಗ್ಯ ಖಾತ್ರಿ ಸಹಾಯಕ ನಿರ್ದೇಶಕ ಟಿ.ವೈ ದಾಸನಕೊಪ್ಪ, ರಾಜೇಶ್ವರಿ ಕದಂ, ಸಿಡಿಪಿಓ ದೀಪಾ ಬಂಗೇರ, ಇಂಜನಿಯರ ಪ್ರದೀಪ ಭಟ್ ಮುಂತಾದವರು ಉಪಸ್ಥಿತರಿದ್ದರು.
Be the first to comment