ಜಿಲ್ಲಾ ಸುದ್ದಿಗಳು
ಭಟ್ಕಳ
ಕೆಂದ್ರ ಸರಕಾರ ಸೈನ್ಯದಲ್ಲಿ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ ಯುವಕರ ಬದುಕನ್ನು ಬೀದಿಗೆ ತಂದು ನಿಲ್ಲಿಸುತ್ತದೆ ಮತ್ತು ಇದು ಯುವಕರ ಭವಿಷ್ಯಕ್ಕೆ ಮತ್ತು ದೇಶದ ಅಭಿವೃದ್ದಿಗೆ, ಮಾರಕವಾದ ಯೋಜನೆಯಾಗಿದೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಐವನ್ ಡಿಸೋಜಾ ಹೇಳಿದರು.ಅವರು ಇಂದು ಕೇಂದ್ರದ ಅಗ್ನಿಪಥ ಯೋಜನೆ ವಿರುದ್ಧ ಭಟ್ಕಳ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಧರಣಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕೆಂದ್ರ ಸರಕಾರ ಯಾವಾಗಲು ದೇಶಕ್ಕೆ ಮಾರಕವಾದ ಯೋಜನೆಯನ್ನೆ ಜಾರಿಗೆ ತರುತ್ತದೆ ಅದು ತನ್ನ ರೈತ ಕಾನೂನಾಗಿರಬಹುದು, ಸಿ ಐ ಎ ಕಾನೂನು, ಈಗ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಯಾಗಿರ ಬಹುದು ಹೀಗೆ ಈ ಕೆಂದ್ರ ಸರಕಾರ ಜನ ವಿರೋದಿ ಯೋಜನೆಗಳನ್ನೆ ಜಾರಿಗೆ ತರುತ್ತದೆ . ಈ ಅಗ್ನಿಪಥ ಯೋಜನೆಯ ಕಾರಣ ದೇಶ ಹೊತ್ತಿ ಉರಿಯುತ್ತಿದೆ ಇದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ .ಈ ಅಗ್ನಿಪಥ ಯೋಜನೆ ಜಾರಿಗೆ ಬಂದರೆ ದೇಶದ ಯುವಕರ ಬದುಕು ಬೀದಿಗೆ ಬರುತ್ತದೆ. ಒಂದು ವೇಳೆ ಕೆಂದ್ರ ಜನರ ಮೇಲೆ ಒತ್ತಾಯ ಪೂರಕವಾಗಿ ಸರಕಾರ ಈ ಯೋಜನೆ ಜಾರಿಗೆ ತಂದರೆ ಕಾಗ್ರೇಸ್ ಉಗ್ರ ಹೋರಾಟವನ್ನು ಕೈಗೊಳ್ಳುತ್ತದೆ , ಕೆಂದ್ರಸರಕಾರ ಈ ಕೂಡಲೆ ಅಗ್ನಿಪಥ ಯೋಜನೆಯನ್ನು ಕೈ ಬಿಡಬೇಕು ಎಂದು ಹೇಳಿದರು.
ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ನಾಯ್ಕ ಮಾತನಾಡಿ ಕಾಂಗ್ರೆಸ್ ಪಕ್ಷ ದೇಶದ ಯುವಕರ ಭವಿಷ್ಯದ ದ್ರಷ್ಟಿಯಿಂದ ಕೇಂದ್ರ ಸರ್ಕಾರದ ಈ ಅಗ್ನಿಪಥ ಯೋಜನೆಯ ವಿರುದ್ಧ ಹೋರಾಟ ಮಾಡುತ್ತಿದೆ. ಯುವಜನತೆ ಈ ಅಗ್ನಿಪಥ ಯೋಜನೆಯ ಸಾಧಕ ಬಾಧಕಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ನಮ್ಮ ಈ ಹೋರಾಟದಲ್ಲಿ ಕೈ ಜೋಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಬದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ ಮಾಜಿ ಶಾಸಕ ಜೆ.ಡಿ ನಾಯ್ಕ , ಕಾಂಗ್ರೇಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಬೀಮಣ್ಣ ನಾಯ್ಕ , ಮಾಜಿ ಸಚಿವ ಆರ್ ಎನ್ ನಾಯ್ಕ ಹೊನ್ನಾವರ , ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ಜಯಶ್ರೀ ಮೊಗೇರ್, ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂತೋಷ ನಾಯ್ಕ, ಮಂಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರ ಗೋವಿಂದ ನಾಯ್ಕ,ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಮಾಜಿದ್ , ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ , ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಮಂತಾದವರು ಉಪಸ್ಥಿತರಿದ್ದರು.
Be the first to comment