ಭಟ್ಕಳ ಪುರಸಭೆಗೆ ಉರ್ದು ಭಾಷೇ ನಾಮಫಲಕ ಅಳವಡಿಕೆ – ಕನ್ನಡ ಸಂಘಟನೆ ಮತ್ತು ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಭಟ್ಕಳ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪುರಸಭೆ ಆಡಳಿತ ತೆಗೆದುಕೊಂಡ ನಿರ್ಧಾರದಿಂದ ಇದೀಗ ಭಾಷಾ ವಿವಾದ ಕಾರವಾರದಿಂದ ಭಟ್ಕಳದ ಗಡಿಯವರೆಗೂ ತಲುಪಿದೆ.ಪುರಸಭಾ ಕಾರ್ಯಾಲಯದ ಕಟ್ಟಡದಲ್ಲಿ ಉರ್ದು ನಾಮಫಲಕ ಅಳವಡಿಸುವುದನ್ನು ವಿರೋಧಿಸಿ ಸೋಮವಾರ ಕನ್ನಡ ಹಾಗೂ ಹಿಂದೂ ಸಂಘಟನೆಗಳು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪುರಸಭೆ ಕಟ್ಟಡಕ್ಕೆ ಹೊಸದಾಗಿ ಬಣ್ಣ ಬಳಿದ ನಂತರ ಸೋಮವಾರ ಪುರಸಭೆ ಎದುರು ನಾಮಫಲ ಅಳವಡಿಸಲು ಗುತ್ತಿಗೆದಾರ ಸಿದ್ದತೆ ಮಾಡಿಕೊಂಡಿದ್ದರು. ಕನ್ನಡ, ಇಂಗ್ಲೀಷ ನಂತರ ಉರ್ದು ಭಾಷೆಯಲ್ಲಿ “ಪುರಸಭಾ ಕಾರ್ಯಾಲಯ ಭಟ್ಕಳ” ಎಂಬ ನಾಮಫಲಕವನ್ನು ಅಳವಡಿಸಲಾಗುತಿತ್ತು.ಇದನ್ನು ಗಮನಿಸಿದ ಕನ್ನಡಪರ ಹಾಗೂ ಹಿಂದೂ ಸಂಘಟನೆಯವರು ಉರ್ದು ನಾಮಫಲಕ ಅಳವಡಿಸದಂತೆ ಸ್ಥಳದಲ್ಲಿ ಗುಂಪು ಸೇರಿ ವಿರೋಧ ವ್ಯಕ್ತಪಡಿಸಿದರು.

CHETAN KENDULI

ಪೊಲೀಸರೆದುರೇ ಪ್ರತಿಭಟನಾಕಾರರು ಸ್ಥಳದಲ್ಲಿಯೇ ನಾಮಫಲಕ ತೆರವು ಮಾಡುವಂತೆ ಪಟ್ಟುಹಿಡಿದರು.ಇದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಯಿತು.ಸ್ಥಳಕೆ ಆಗಮಿಸಿದ ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶೀಂಜೀ ಹಳೆಯ ಪುರಸಭೆ ಕಟ್ಟಡದಲ್ಲಿ ಪುರಸಭಾ ನಾಮಫಲಕವನ್ನು ಕನ್ನಡ, ಇಂಗ್ಲೀಷ ಹಾಗೂ ಉರ್ದು ಭಾಷೆಯಲ್ಲಿ ಬರೆಯಿಸಲಾಗಿತ್ತು. ಅದನ್ನೆ ಇಲ್ಲಿ ಅಳವಡಿಸಿದ್ದೇವೆ. ಹೊಸದಾಗಿ ನಾವು ಎನೂ ಬದಲಾವಣೆ ಮಾಡಿಲ್ಲ ಎಂದರು.

ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಉರ್ದು ನಾಮಫಲಕ ತೆರವು ಮಾಡುವ ತನಕ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದು ,ಮುಸ್ಲೀಂ ಯುವಕರ ಮಧ್ಯ ಮಾತಿನ ಚಕಮಕಿ ನಡೆದಿದ್ದು ಪೋಲಿಸರು ಮಧ್ಯ ಪ್ರವೇಶಿಸಿ ಉದ್ರಿಕ್ತ ವಾತಾವರಣವನ್ನು ಶಮನ ಮಾಡುವ ಪ್ರಯತ್ನ ಮಾಡಿದರು.ಕನ್ನಡ ಹಿಂದಿ ಇಂಗ್ಲೀಷ ಬಿಟ್ಟು ಬೇರೆ ಭಾಷೆಗಳಿಗೆ ಆಧ್ಯತೆ ಇಲ್ಲ, ಪ್ರಾದೇಶಿಕ ಭಾಷೆಗೆ ತಕ್ಕಂತೆ ನಾಮಫಲಕ ಅಳವಡಿಸಿದರೆ ಹತ್ತು ಹಲವು ಭಾಷೆಗಳಿದ್ದು ಅವರೆಲ್ಲಾ ಭಾಷೆಗಳನ್ನು ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಬೇಕಾಗುತ್ತದೆ.ಹಾಗಾಗಿ ಸರ್ಕಾರಿ ಕಚೇರಿಯಾಗಿರುವ ಭಟ್ಕಳಪುರಸಭೆಗೆ ಅಳವಡಿಸಿದ ಉರ್ದು ನಾಮಫಲಕವನ್ನು ತೆರವುಗೊಳಿಸಬೇಕು ಎಂದು ಭುವನೇಶ್ವರರಿ ಕನ್ನಡ ಸಂಘ ಹಾಗೂ ಭಟ್ಕಳದ ವಿವಿಧ ಸಂಘಟನೆಗಳು ಪುರಸಭೆ ಮುಖ್ಯ ಅಧಿಕಾರಿಗಳಿಗೆ, ತಹಶಿಲ್ದಾರರ ರಿಗೆ ಮತ್ತು ಡಿ ವೈ ಎಸ್ ಪಿ, ಅವರಿಗೆ ಮನವಿ ನೀಡಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಭುವನೇಶ್ವರರಿ ಕನ್ನಡ ಸಂಘ ಅಧ್ಯಕ್ಷ ರಮೇಶ್ ನಾಯ್ಕ ಮತ್ತು ಶ್ರೀಕಾಂತ್ ನಾಯ್ಕ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.ಸಿಪಿಐ ಮಹಾಬಲೇಶ್ವರ ನಾಯ್ಕ, ಪಿಎಸೈಗಳಾದ ಸುಮಾ, ಭರತ್ ಹಾಗೂ ಹನುಮಂತಪ್ಪ ಕುಡುಗುಂಟಿ ಸ್ಥಳದಲ್ಲಿ ಇದ್ದು ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.ಸಧ್ಯ ಕನ್ನಡ ಸಂಘಟನೆ ಒಂದು ದಿನದ ಕಾಲ ಪುರಸಭೆಗೆ ಗಡವು ನೀಡಿದ್ದು ಮುಂದೆ ಪುರಸಭೆ ಆಡಳಿತ ಯಾವ ನಿರ್ದಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Be the first to comment

Leave a Reply

Your email address will not be published.


*