ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬಲಕುಂದಿ ತಾಂಡಾದ ಮುಖ್ಯೋಪಾಧ್ಯಾಯರಾದ ಶ್ರೀ ಸುಭಾಷ ಎಚ್ ಹುಲ್ಲಿಕೇರಿ ರವರು ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದರು.ಈ ಸಂದರ್ಭದಲ್ಲಿ ಶಾಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇಳಕಲ್ ವಲಯದ ಶಿಕ್ಷಣ ಸಂಯೋಜಕರಾದ ಶ್ರೀ ಈಶ್ವರ ಅಂಗಡಿ,ಸಿ ಆರ್ ಪಿ ಗಳಾದ ಶ್ರೀಮತಿ ಆಶಾರಾಣಿ ಎಸ್ ರವರು ಭಾಗವಹಿಸಿದ್ದರು.ಇಲಾಖೆಯ ಪರವಾಗಿ ಮಾತನಾಡಿದ ಈಶ್ವರ ಅಂಗಡಿ ರವರು “ಗುರುಗಳು ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿದ್ದು, ತಮ್ಮ ಅಖಂಡ 36 ವರ್ಷಗಳ ಸೇವಾವಧಿಯಲ್ಲಿ ಒಂದು ಸಣ್ಣ ಕಪ್ಪಚುಕ್ಕೆ ಇಲ್ಲದೇ ಪ್ರಾಮಾಣಿಕವಾಗಿ, ಎಲ್ಲರ ಪ್ರೀತಿಗೆ ಪಾತ್ರರಾಗಿ ಸೇವೆ ಸಲ್ಲಿಸಿರುವುದನ್ನು ಇಲಾಖೆಯು ಸ್ಮರಿಸುತ್ತದೆ ಎಂದು ಹೇಳಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಶಾಲೆಯ ಪರವಾಗಿ ನಿವೃತ್ತಿ ಹೊಂದುತ್ತಿರುವ ಹುಲ್ಲಿಕೇರಿ ರವರನ್ನು ಪ್ರೀತಿ ಅಭಿಮಾನದಿಂದ ಗೌರವಿಸಿ,ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗುರುಗಳ ಬಗ್ಗೆ ಎಸ್ ಡಿ ಎಂ ಸಿ ಉಪಾಧ್ಯಕ್ಷ ವಿಠಲ ಚವ್ಹಾಣ,ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಶ್ರೀ ಪಿ ಎಸ್ ಪಮ್ಮಾರ, ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಶ್ರೀ ಎಂ ಎಸ್ ಬೀಳಗಿ,ಶ್ರೀ ಎ ಡಿ ಬಾಗವಾನ, ಶ್ರೀಮತಿ ಆಶಾರಾಣಿ,ಶ್ರೀಮತಿ ಜಿ ಕೆ ಮಠ,ಶ್ರೀಮತಿ ಎಂ ಎನ್ ಅರಳಿಕಟ್ಟಿ, ಶ್ರೀಮತಿ ಎಸ್ ಎಲ್ ಜೋಗಿನ, ಶ್ರೀಮತಿ ಎಂ ಪಿ ಚೇಗೂರ,ಶ್ರೀಮತಿ ಪಿ ಎಸ್ ಹೊಸೂರ,ಶ್ರೀಮತಿ ಆರ್ ಎಸ್ ಕೊಡಗಲಿ, ಶ್ರೀಮತಿ ಎಸ್ ಎಂ ಮಲಗಿಹಾಳ,ಶ್ರೀಮತಿ ಸಾಯಿರಾ ಹೆರಕಲ್ ಶ್ರೀಮತಿ ಗೀತಾಂಜಲಿ ಕನ್ನೂರ ಹಾಗೂ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.
Be the first to comment