ಕನ್ಹಯ್ಯ ಹಂತಕರಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆಯಲ್ಲಿ ಟೈಲರ್ಸ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ವಿಜಯ್ ಸುಲಾಖೆ,ಪರಶುರಾಮ ಮಿರಜಕರ್,ಶ್ರೀಶೈಲ ಗೌಡರ,ರಾಜು ಪಾಟೀಲ್ ಹಾಗೂ ಟೇಲರ್ ಅಂಗಡಿ ಮಾಲಿಕರು,ಕಾರ್ಮಿಕರು ಇದ್ದರು.

ಬಾಗಲಕೋಟೆ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಬಾಗಲಕೋಟೆ ಟೈಲರ್ಸ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕನ್ಹಯ್ಯಲಾಲ್ ಅವರು ಟೈಲರ್ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕೆಲ ಧರ್ಮಾಂದರು ಗ್ರಾಹಕರಂತೆ ಅವರ ಅಂಗಡಿಗೆ ಬಂದು, ಹತ್ಯೆ ಮಾಡಿದ್ದಾರೆ. ಹತ್ಯೆಯ ವಿಡಿಯೊ ಮಾಡಿ, ವಿಕೃತಿ ಮೆರೆದಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಕ್ರಮವಹಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಇಂತಹ ಕೃತ್ಯ ಮಾಡಿದ ವ್ಯಕ್ತಿ ಗಳನ್ನು ಕಾನೂನು ರೀತಿ ಅವರಿಗೆ ಗಲ್ಲುಶಿಕ್ಷೆ ನೀಡಲು ಒತ್ತಾಯಿಸುತ್ತೇವೆ ಹಾಗೂ ಬಡ ಟೈಲರ್ ಕನ್ನಯ್ಯಲಾಲ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು ಹಾಗೂ ಅವರ ಮಕ್ಕಳಿಗೆ ಸರಕಾರಿ ನೌಕರಿ ನೀಡಬೇಕೆಂದು ರಾಜಸ್ಥಾನದ ಮುಖ್ಯ ಮಂತ್ರಿ ಅಶೋಕ ಗಹಲ್ಲೋಟ ಅವರಿಗೂ ಒತ್ತಾಯಿಸುತ್ತೇವೆ ಎಂದು ಪ್ರತಿಭಟನಕಾರರು ಮನವಿ ಮಾಡಿದರು.

Be the first to comment

Leave a Reply

Your email address will not be published.


*