ಜಿಲ್ಲಾ ಸುದ್ದಿಗಳು
ಯಲ್ಲಾಪುರ :
ಮರದ ನಾಟುಗಳನ್ನು ತುಂಬಿಕೊಂಡು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 63ರ ಆರ್ತಿಬೈಲ್ ಘಟ್ಟದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಅತೀ ಎತ್ತರದವರೆಗೆ ನಾಟು ಸಾಗಿಸುತ್ತಿದ್ದ ಲಾರಿ ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಆರ್ತಿಬೈಲ್ ತಿರುವಿನಲ್ಲಿ ರಸ್ತೆಯ ಮಧ್ಯ ಲಾರಿಯನ್ನು ಉರುಳಿಸಿಕೊಂಡಿದ್ದಾನೆ. ಅಪಘಾತದಲ್ಲಿ ಲಾರಿ ಚಾಲಕ ಹಾಗೂ ಕ್ಲೀನರನಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಉರುಳಿ ಬಿದ್ದ ಕೆಲ ಸಮಯ ಇನ್ನಿತರ ವಾಹನ ಸಂಚಾರಕ್ಕೆ ವ್ಯತ್ಯಯವಾಗಿದ್ದು, ಪೊಲೀಸರು ಕ್ರೇನ್ ಬಳಸಿ ನಂತರ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.
Be the first to comment