ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಕೋವಿಡ್ ಸೋಂಕಿನಿಂದ ಮೃತಪಟ್ಟವರನ್ನು ಅವರ ಸಮಾಜದ ಪ್ರಕಾರವಾಗಿ ಅಂತ್ಯಕ್ರೀಯೆ ಮಾಡುತ್ತಿದ್ದ ತಾಲೂಕಿನ ಸಲಾಂ ಭಾರತ ಟ್ರಸ್ಟ್ ಪದಾಧಿಕಾರಿಗಳಿಗೆ ತಾಲೂಕಾ ಕಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ ಟ್ರಸ್ಟನೊಂದಿಗೆ ಕೈಜೋಡಿಸಿ ಸ್ವಂತ ಹಣದಲ್ಲಿ ಶವ ತೆಗೆದುಕೊಂಡಲು ಹೋಗಲು ವಾಹನ ವ್ಯವಸ್ಥೆಯನ್ನು ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿ ಟ್ರಸ್ಟ್ ಕಾರ್ಯದರ್ಶಿ ವಾಜೀದ ಹಡಲಗೇರಿ, ಕೊರೊನಾದಿಂದ ಮೃತಪಟ್ಟವರನ್ನು ಸಂಸ್ಕಾರ ಮಾಡುವಲ್ಲಿ ಕುಟುಂಬದವರು ಭಯ ಹಾಗೂ ಆರ್ಥಿಕವಾಗಿ ಹಿಂದಿರುವವರಿಗೆ ನಮ್ಮ ಟ್ರಸ್ಟ್‌ನಿಂದ ನಮ್ಮ ಸ್ವಂತ ಹಣದಲ್ಲಿ ಶವವನ್ನು ಅವರ ಧರ್ಮದ ಪ್ರಕಾರವೇ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದೇವು. ಎಂ.ಎನ್.ಮದರಿ ಅವರು ನಮಗೆ ವಾಹನದ ವ್ಯವಸ್ಥೆ ಮಾಡಿದ್ದು ಟ್ರಸ್ಟ್‌ಗೆ ಇನಷ್ಟು ಭಲ ನೀಡಿದಂತಾಗಿದ್ದು ಇದರಿಂದ ನಮಗೆ ಸಾಕಷ್ಟು ಅನುಕೂಲಕರವಾಗಿದೆ ಎಂದು ಹೇಳಿದರು.
ಆರೋಗ್ಯ ೧೦೮ ಸಿಬ್ಬಂದಿ ಶ್ರೀಶೈಲ ಹೂಗಾರ, ನ್ಯಾಯವಾದಿ ಕೆ.ಬಿ.ದೊಡಮನಿ ಮಾತನಾಡಿದರು.
ಈ ಸಂದರ್ಭದಲ್ಲಿ ರವಿ ಜಗಲಿ, ಜ್ಯೋತಿ ಫೋಟೊ ಸ್ಟುಡಿಯೊ ಪರಶುರಾಮ ನಾಗಬೆಟ್ಟ, ಸಲಾಂ ಭಾರತ ಟ್ರಸ್ಟ್ ಅಧ್ಯಕ್ಷ ಕೆ.ಕೆ.ಮುಲ್ಲಾ, ಅಮಿ ನಾಲಬಂದ, ಮೆಹಬೂಬ ಢವಳಗಿ, ೧೦೮ ಚಾಲಕ ಡೊಂಗ್ರಿ ಹಡಲಗೇರಿ ಇದ್ದರು.
Be the first to comment