ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಮತಕ್ಷೇತ್ರದ ಜನರಿಗೆ ಮುಂದಿನ ದಿನಗಳಲ್ಲಿ ಕೊರೊನಾ ಎರಡನೇ ಅಲೆ ಬಂದರೂ ಯಾವುದೇ ರೀತಿಯ ತೊಂದರೆಯಗದಂತೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದು ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಮಂಗಳವಾರ ರಾಜ್ಯ ಆಹಾರ ಮತ್ತು ನಾಗರಿಕ ಸಬರಾಜು ನಿಗಮ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸೂಚಿಸಿದ್ದಾರೆ.
ತಾಲೂಕಿನಲ್ಲಿ ಐಸೋಲೇಷನ್ ಕೇಂದ್ರಗಳನ್ನು ತೆರೆಯಲು ಸರಕಾರಿ ವಸತಿ ನಿಲಯಗಳನ್ನು ಗುರುತಿಸಿ ಅವುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಕ್ಷೇತ್ರದಲ್ಲಿ ಏಕಕಾಲಕ್ಕೆ ೧೦೦೦ ಬೇಡ್‌ಗಳು ಬೇಕಾದರೂ ಅವುಗಳನ್ನು ಸಮರ್ಪಕವಾಗಿ ಪೂರೈಕೆ ಮಾಡಲು ನಮ್ಮ ತಾಲೂಕಿನಲ್ಲಿ ವ್ಯವಸ್ಥೆ ಮಾಡಬೇಕು. ಇದಲ್ಲದೇ ವೈದ್ಯಕೀಯ ರಂಗಕ್ಕೆ ಬೇಕಾಗುವ ಹೆಚ್ಚುವರಿ ಸೌಕರ್ಯಗಳನ್ನು ಒದಗಿಸಬೇಕು ಎಂದು ಅವರು ಹೇಳಿದರು.
ಆಮ್ಲಜನಕ ಮೊಬೈಲ್ ಬೇಡ್ ವ್ಯವಸ್ಥೆ:
ಈಗಾಗಲೇ ಮುದ್ದೇಬಿಹಾಳ ಸಾರಿಗೆ ಘಟಕದಲ್ಲಿ ಸಾಕಷ್ಟು ಬಸ್‌ಗಳಿವೆ. ಇದರಲ್ಲಿ ೧೫ ಬಸ್‌ಗಳು ಹಳೆಯದಾಗಿದ್ದು ಅವುಗಳನ್ನು ಪುನರ್ವತಿಸಿ ಅವುಗಳನ್ನು ಆಮ್ಲಜನಿಕ ಸಮೇತವಾಗಿ ಮೊಬೈಲ್ ಬೇಡ್‌ಗಳನ್ನಾಗಿ ತಯ್ಯಾರು ಮಾಡುವ ನಿರ್ಧಾರ ಮಾಡಲಾಗಿದ್ದು ಕೂಡಲೇ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಸೂಚನೆಯನ್ನು ನೀಡಲಾಗುವುದು. ಇದರಿಂದ ತುರ್ತು ಸಂದರ್ಭದಲ್ಲಿ ಮೊಬೈಲ್ ಬೇಡ್‌ಗಳ ಅವಶ್ಯಕವಾಗುತ್ತದೆ ಹಾಗೂ ಹೆಚ್ಚಿನ ಬೇಡ್‌ಗಳ ವ್ಯವಸ್ಥರಯೂ ಮಾಡಿದಂತಾಗುತ್ತದೆ ಎಂದು ಶಾಸಕರು ಹೇಳಿದರು.
ಸಿಬ್ಬಂದಿಗಳನ್ನು ನೇಮಿಸಿ:
ತಾಲೂಕಿನಲ್ಲಿ ಐಸೋಲೇಷನ್ ಕೇಂದ್ರಗಳನ್ನು ತೆರೆದ ಸಂದರ್ಭದಲ್ಲಿ ರೋಗಿಗಳ ಆರೋಗ್ಯದಡೆ ಗಮನ ಹರಿಸಲು ಆಶಾ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರದ ಸಿಬ್ಬಂದಿಗಳಗನ್ನು ಸಮರ್ಪಕವಾಗಿ ನಿಯೋಜನೆ ಮಾಡಬೇಕು. ಸಕ್ಕರೆ ಕಾಯಿಲೆ ಹಾಗೂ ಹೃದಯದ ಸಂಬಂಧಿಸಿದ ಕಾಯಿಲೆ ಇಲ್ಲದ ೫೦ ವರ್ಷದೊಳಗಿರುವ ನಿವೃತ್ತ ಸೇನಾ ಸೇನಾ ಸಿಬ್ಬಂದಿಗಳನ್ನು ಹಾಗೂ ಹೋಂ ಗಾರ್ಡಗಳನ್ನು ಇನ್ನೂ ಹೆಚ್ಚಿನ ಭದ್ರತಾ ಸಿಬ್ಬಂದಿಗಳನ್ನಾಗಿ ನೇಮಿಸಿಕೊಳ್ಳಬಹುದಾಗಿದೆ. ಅಲ್ಲದೇ ಆಡಳಿತದ ವ್ಯವಸ್ಥೆಯನ್ನು ಸ್ಪಷ್ಠವಾಗಿ ಜನತೆಯ ಮುಂದಿಡಿ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕರ ಅನುದಾನದಿಂದ ಖರಿದಿ:
ಈಗಾಗಲೇ ಸರಕಾರದಿಂದ ರೋಗಿಗಳಿಗೆ ಬೇಕಾಗಬಹುದಾದ ಔಷಧಿಗಳನ್ನು ಪೂರೈಸಲಾಗುತ್ತಿದೆ. ಇನ್ನೂ ಹೆಚ್ಚಿನ ಔಷಧಿ ಬೇಕಾದರೆ ಅವುಗಳನ್ನು ಪಟ್ಟಿ ಮಾಡಿ ಒದಗಿಸಿದರೆ ರಾಜ್ಯ ಸರಕಾರ ನೀಡಿರುವ ಶಾಸಕರ ನಿಧಿಯಿಂದ ಅವುಗಳನ್ನು ಖರಿದಿ ಮಾಡಕೊಡಲಾಗುವುದು. ಇದಲ್ಲದೇ ನೂತನವಾಗಿ ಮೂರು ಅಂಬ್ಯೂಲೇನ್ಸ್‌ಗಳನ್ನು ಹಾಗೂ ೧೫೦ ಆಮ್ಲಜನಕ ಸಿಲಿಂಡಗರಗಳನ್ನು ಖರಿದಿಸಲು ತಿಳಿಸಿದ್ದು ಕ್ಷೇತ್ರಕ್ಕೆ ಒಟ್ಟು ೮ ಅಂಬ್ಯೂಲೇನ್ಸ್‌ಗಳ ವ್ಯವಸ್ಥೆಗೊಳ್ಳಲಿದೆ. ಇನ್ನೂ ತಾಲೂಕಿನಲ್ಲಿ ಏ. ೧ ರಂತೆ ೪೯೦ ಸೋಂಕಿತರಿದ್ದಾರೆ. ತಾಲೂಕಾ ಆಸ್ಪತ್ರೆಯಲ್ಲಿ ೩ ಹೆಚ್ಚುವರಿ ಐಸಿಯು ಬೇಡ್‌ಗಳ ದುರಸ್ಥಿ ಮಾಡಿಸಲಾಗುತ್ತಿದ್ದು ಕ್ಷೇತ್ರದಲ್ಲಿ ಕೊರೊನಾ ಚಿಕಿತ್ಸೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಶಾಸಕರು ಹೇಳಿದರು.
Be the first to comment